2026-07-17 02:17:06

Puri Jagannath Rath Yatra | ಪುರಿ ಜಗನ್ನಾಥ ರಥಯಾತ್ರೆ ಜನಸಂದಣಿಯಲ್ಲಿ ಸಿಲುಕಿದ್ದ 33 ಭಕ್ತರ ರಕ್ಷಣೆ | SNK

Puri Jagannath Rath Yatra | ಪುರಿ ಜಗನ್ನಾಥ ರಥಯಾತ್ರೆ ಜನಸಂದಣಿಯಲ್ಲಿ ಸಿಲುಕಿದ್ದ 33 ಭಕ್ತರ ರಕ್ಷಣೆ | SNK

ಭುವನೇಶ್ವರ(ಒಡಿಶಾ): ಪುರಿ ಜಗನ್ನಾಥ ರಥಯಾತ್ರೆ ವೇಳೆ ಭಾರಿ ಜನಸಂದಣಿಯಲ್ಲಿ ಸಿಲುಕಿದ್ದ 33 ಭಕ್ತರನ್ನು ರಕ್ಷಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಒಡಿಶಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ತಿಳಿಸಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಒಡಿಶಾ ಪೊಲೀಸರು, 'ಭಕ್ತರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನ ಪ್ರಥಮ ಚಿಕಿತ್ಸೆ ನೀಡಲಾಗಿದೆ' ಎಂದು ತಿಳಿಸಿದ್ದಾರೆ.

'ಬೃಹತ್ ಜನಸಂದಣಿಯ ನಡುವೆ ಪ್ರಜ್ಞೆ ತಪ್ಪಿದಂತೆ ಕಂಡುಬಂದ ಭಕ್ತರನ್ನು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಭಕ್ತರ ಸುರಕ್ಷತೆ ಮತ್ತು ರಥಯಾತ್ರೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ' ಎಂದು ಹೇಳಿದ್ದಾರೆ.

ಪುರಿ ಜಗನ್ನಾಥ ರಥಯಾತ್ರೆಯು ಇಂದು (ಜುಲೈ 16) ಅತ್ಯಂತ ವೈಭವದಿಂದ ಆರಂಭಗೊಂಡಿದೆ. ಲಕ್ಷಾಂತರ ಭಕ್ತರು ಜಗನ್ನಾಥನ ಘೋಷಗಳೊಂದಿಗೆ ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಜುಲೈ 16ರಿಂದ 24ರವರೆಗೆ ನಡೆಯಲಿರುವ ರಥಯಾತ್ರೆಗೆ ಅತ್ಯಂತ ಮಹತ್ವವಿದೆ. ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದು ಈ ಯಾತ್ರೆಗೆ ಚಾಲನೆ ನೀಡಲಾಗುತ್ತದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.