2026-07-17 02:14:43

Puneeth Kerehalli | ಅಕ್ರಮ ಬಾಂಗ್ಲಾದೇಶಿಗಳಿಗೆ ಕರ್ನಾಟಕ ಯಾಕೆ ಸುರಕ್ಷಿತವಾಗಿದೆ? ಪುನೀತ್ ಕೆರೆಹಳ್ಳಿ | SNK

Puneeth Kerehalli | ಅಕ್ರಮ ಬಾಂಗ್ಲಾದೇಶಿಗಳಿಗೆ ಕರ್ನಾಟಕ ಯಾಕೆ ಸುರಕ್ಷಿತವಾಗಿದೆ? ಪುನೀತ್ ಕೆರೆಹಳ್ಳಿ | SNK

ಮಂಗಳೂರು : ಉರ್ವ ಪೊಲೀಸ್ ಠಾಣೆಗೆ ಪುನೀತ್ ಕೆರೆಹಳ್ಳಿ ವಿಚಾರಣೆಗೆ ಹಾಜರಾದರು. ಮಂಗಳೂರಿನಲ್ಲಿ ಅಡಗಿಕೊಂಡಿದ್ದ 19 ಮಂದಿ ಬಾಂಗ್ಲಾದೇಶಿಗಳ ಪತ್ತೆ ಹಿನ್ನೆಲೆ ಮಂಗಳೂರು ಪೊಲೀಸರಿಗೆ ಪುನೀತ್ ಕೆರೆಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾದೇಶಿಗಳ ವಿರುದ್ಧ ಸರಿಯಾದ ಕಾರ್ಯಾಚರಣೆ ಮಾಡದಿದ್ದಲ್ಲಿ ನಾವೇ ಬೆಂಗಳೂರು ರೀತಿಯ ಕಾರ್ಯಾಚರಣೆ ಮಂಗಳೂರಿನಲ್ಲಿ ಮಾಡುತ್ತೇವೆ ಎಂದು ಮಂಗಳೂರಿನಲ್ಲಿ ಪುನೀತ್ ಕೆರೆಹಳ್ಳಿ ಹೇಳಿಕೆ ನೀಡಿದರು.

ಅಕ್ರಮ ಬಾಂಗ್ಲಾ ದೇಶಿಗಳಿಗೆ ಕರ್ನಾಟಕ ಯಾಕೆ ಸುರಕ್ಷಿತವಾಗಿದೆ?. ಮಂಗಳೂರಿನಲ್ಲಿ ಕೇವಲ ನಾಮಕವಸ್ತೆಗೆ ಬಾಂಗ್ಲಾದೇಶಿಯರನ್ನ ಹಿಡಿಯೋದಲ್ಲ. ಯಾವ ಯಾವ ಮಾಲ್ ನಲ್ಲಿ ಎಷ್ಟೆಷ್ಟು ಬಾಂಗ್ಲಾದೇಶಿ ಇದ್ದಾರೆ ಅನ್ನೋ ಲೆಕ್ಕ ನಾವು ಕೊಡುತ್ತೇವೆ. ನೀವು ನಮಗೆ ಫ್ರೀ ಹ್ಯಾಂಡ್ ಕೊಡಿ ನಾವು ನಿಮಗೆ ಹಿಡಿದುಕೊಡುತ್ತೇವೆ. ನೇರವಾಗಿ ಮಂಗಳೂರು ಕಮಿಷನರ್ ಗೆ ಹೇಳುತ್ತೇನೆ ಎಂದರು.

ನೀವು ನಮ್ಮ ಜೊತೆ ಬನ್ನಿ ಕೈ ಜೋಡಿಸಿ. ಯಾವ ಯಾವ ಮುಸ್ಲಿಂ ಮುಖಂಡರು ಅವರಿಗೆ ಸಾಥ್ ಕೊಡುತ್ತಾರೆ ಅನ್ನೋ ಮಾಹಿತಿ ನಾವು ನೀಡುತ್ತೇವೆ. ನಿಮ್ಮ ಗುಪ್ತಚಾರ ಇಲಾಖೆ ಏನು ಮಾಡುತ್ತಿದೆ. ರೈಲಿನಲ್ಲಿ ಬಂದಿಳಿಯುವವರನ್ನ ವಿಚಾರಣೆ ಮಾಡುತ್ತಿದ್ದೀರಾ?. ದೇಶದ ಆಂತರಿಕ ಭದ್ರತೆಗೆ ಬಹುದೊಡ್ಡ ಹೊಡೆತ ಕೊಟ್ಟ ವಿಚಾರ ಇದು. ನಾವು ಇದರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದೇವೆ . ಬಾಂಗ್ಲಾದೇಶಿಯರಿಗೆ ಕರ್ನಾಟಕದಲ್ಲಿ ಆಧಾರ್ ಕಾರ್ಡ್ ಸಿಗುತ್ತಿದೆ ಎಂದರು.

ಅಕ್ರಮ ಬಾಂಗ್ಲಾದೇಶಿ ಕರ್ನಾಟಕದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಳ್ಳುತ್ತಾನೆ. ಕರ್ನಾಟಕದ ಮಹಾನಗರಗಳಲ್ಲೇ ಲಕ್ಷ ಲಕ್ಷ ಬಾಂಗ್ಲಾದೇಶಿಯರಿದ್ದಾರೆ ದಾಖಲೆಗಳ ಸಮೇತ ನಾವು ಕಾರ್ಯಾಚರಣೆ ಮಾಡಿದ್ದೇವೆ. ಉತ್ತರ ಭಾರತದಲ್ಲಿ ತೊಂದರೆಯಾದ್ರೆ, ಈ ಬಾಂಗ್ಲಾ‌ದೇಶಿಯರಿಗೆ ಕರ್ನಾಟಕ ಯಾಕೆ ಸುರಕ್ಷಿತವಾಗಿದೆ. ಕರ್ನಾಟಕ ಯಾಕೆ ರಕ್ಷಣೆ ಕೊಡುತ್ತಿದೆ?. ಕೆಲ ಮುಸಲ್ಮಾನ್ ಮುಖಂಡರು ಕೆಲಸಕ್ಕೆಂದು ಕರೆ ತಂದು ರಕ್ಷಣೆ ಕೊಡುತ್ತಿದ್ದಾರೆ. ಗೃಹ ಇಲಾಖೆ ಆಂತರಿಕ ಭದ್ರತಾ ವಿಭಾಗ ಸಂಪೂರ್ಣ ವಿಫಲವಾಗಿದೆ. ಗೃಹ ಮಂತ್ರಿಯಾದವರು ಗುಪ್ತಚಾರ ಇಲಾಖೆಯನ್ನ RSS, ಹಿಂದು ಕಾರ್ಯಕರ್ತರ ಹಿಂದೆ ಬಿಟ್ಟಿದ್ದಾರೆ ಎಂದು ರಾಷ್ಟ್ರರಕ್ಷಣಾ ಪಡೆ ಸಂಚಾಲಕ‌ ಪುನಿತ್ ಕೆರೆಹಳ್ಳಿ ಹೇಳಿಕೆ ನೀಡಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.