2026-07-17 02:16:10

Man hanging from moving train falls into gap between platform and train | ಚಲಿಸುತ್ತಿದ್ದ ರೈಲಿನಲ್ಲಿ ನೇತಾಡಿದ ವ್ಯಕ್ತಿ ಪ್ಲಾಟ್‌ಫಾರ್ಮ್ ಸಂದಿಗೆ ಬಿದ್ದು ನಾಪತ್ತೆ | SNK

Man hanging from moving train falls into gap between platform and train | ಚಲಿಸುತ್ತಿದ್ದ ರೈಲಿನಲ್ಲಿ ನೇತಾಡಿದ ವ್ಯಕ್ತಿ ಪ್ಲಾಟ್‌ಫಾರ್ಮ್ ಸಂದಿಗೆ ಬಿದ್ದು ನಾಪತ್ತೆ | SNK

ದೇಶಾದ್ಯಂತ ಸುಗಮ ಸೇವೆ ನೀಡುತ್ತಿರುವ ರೈಲ್ವೆ ಜಾಲದಲ್ಲಿ ನಿತ್ಯ ಸಾವಿರಾರು ಮಾರ್ಗಗಳಲ್ಲಿ ಕೋಟ್ಯಾಂತರ ಜನ ಓಡಾಡುತ್ತಾರೆ. ಕೆಲವೊಮ್ಮೆ ರೈಲಿನ ಒಳ-ಹೊರಗೆ, ನಿಲ್ದಾಣಗಳಲ್ಲಿ ಅಹಿತಕರ ಘಟನೆಗಳು, ಅಪಘಾತಗಳು, ಭಯಾನಕ ದುರಂತಗಳು ನಡೆದು ಬಿಡುತ್ತವೆ. ಇಂಥದ್ದೇ ಒಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಚಲಿಸುವ ರೈಲಿನ ಹೊರಭಾಗದಲ್ಲಿ ನೇತಾಡುತ್ತಿದ್ದ ವ್ಯಕ್ತಿಯೊಬ್ಬರು ಇನ್ನೇನು ನಿಲ್ದಾಣ ಬಂತು ಅಪಾಯದಿಂದ ಪಾರಾದ ಎನ್ನುವಷ್ಟರಲ್ಲಿ ಹಳಿಪಾಲಾಗಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಎಂಥವರನ್ನು ಆಘಾತಗೊಳಿಸುತ್ತದೆ.

ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಗೌರವ್ ಎಂಬುವವರು ಹಂಚಿಕೊಂಡ ವಿಡಿಯೋದ ಪ್ರಕಾರ, ಚಲಿಸುತ್ತಿರುವ ರೈಲಿನಲ್ಲಿ ಬಾಗಿಲು ಅಥವಾ ಕಿಟಕಿ ಭಾಗದಲ್ಲಿ ವ್ಯಕ್ತಿಯೊಬ್ಬ ನೇತಾಡುವುದು ಕಾಣಿಸುತ್ತದೆ. ರೈಲು ನಿಲ್ದಾಣದಿಂದ ಸುಮಾರು 100 ಮೀಟರ್‌ ದೂರದಲ್ಲಿದೆ ಎನ್ನಬಹುದು. ರೈಲಿನ ಒಳಗೂ ಹೋಗದೇ, ಇಳಿಯಲು ಆಗದೇ ವ್ಯಕ್ತಿ ನೇತಾಡುತ್ತಿದ್ದ, ಒಂದಷ್ಟು ದೂರು ಜಲ್ಲಿಕಲ್ಲಿನ ಮೇಲೆ ರೈಲಿನೊಂದಿಗೆ ಓಡುತ್ತಾನೆ.

ಈ ರೈಲಿನ ಒಳಗಿಂದ ಆತನ ಕೈಯನ್ನು ಯಾರೋ ಹಿಡಿದುಕೊಂಡಿದ್ದಾರೆ. ಹೀಗಾಗಿಯೇ ಆತ ಕೆಳಗೆ ಬಿಳದೇ, ಒಳಗೆ ಹೋಗಲಾರದೇ ಕೆಲವು ನಿಮಿಷಗಳ ಕಾಲ ನೇತಾಡಿದ್ದಾನೆ. ರೈಲಿನೊಂದಿಗೆ ಓಡಿಕೊಂಡು ಬರುವ ವ್ಯಕ್ತಿಯು ಇನ್ನೇನು ರೈಲು ಪ್ಲಾರ್ಟ್‌ಫಾರ್ಮ್ ಕಡೆಗೆ ಬಂದು ನಿಧಾನವಾಗುತ್ತದೆ ಎನ್ನುವಷ್ಟರಲ್ಲಿ ದುರಂತವೊಂದು ನಡೆದೇ ಹೋಗಿದೆ. ರೈಲೊಳಗಿದ್ದ ಪ್ರಯಾಣಿಕರು ಒಂದು ಕ್ಷಣ ದಂಗಾಗಿದ್ದು, ಚೀರಾಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.