2026-07-17 02:15:54

HYDERABAD | ಹೈದರಾಬಾದ್ ಶಾಲೆಯಲ್ಲಿ ವಿವಾದ 2ನೇ ತರಗತಿ ಹಿಂದೂ ವಿದ್ಯಾರ್ಥಿಗೆ ಕಲ್ಮಾ ಕಲಿಯಲು ಟೀಚರ್ ಸೂಚನೆ ಪೋಷಕರ ಆಕ್ರೋಶ | SNK

HYDERABAD | ಹೈದರಾಬಾದ್ ಶಾಲೆಯಲ್ಲಿ ವಿವಾದ 2ನೇ ತರಗತಿ ಹಿಂದೂ ವಿದ್ಯಾರ್ಥಿಗೆ ಕಲ್ಮಾ ಕಲಿಯಲು ಟೀಚರ್ ಸೂಚನೆ ಪೋಷಕರ ಆಕ್ರೋಶ | SNK

ಹೈದರಾಬಾದ್: ಹೈದ್ರಾಬಾದ್ ಸೈದಾಬಾದ್ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ 2ನೇ ತರಗತಿಯ ಹಿಂದೂ ವಿದ್ಯಾರ್ಥಿಗೆ ಇಸ್ಲಾಂ ಧರ್ಮದ ಪ್ರಾರ್ಥನೆಯಾದ 'ಕಲ್ಮಾ'ವನ್ನು ಕಂಠಪಾಠ ಮಾಡುವಂತೆ ಶಿಕ್ಷಕರೊಬ್ಬರು ಸೂಚಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಸ್ಥಳೀಯವಾಗಿ ಭಾರಿ ಆಕ್ರೋಶಕ್ಕೆ ನಾಂದಿ ಹಾಡಿದೆ. ರೊಚ್ಚಿಗೆದ್ದ ಕೆಲ ಹಿಂದೂ ಪರ ಸಂಘಟನೆಗಳು ಹಾಗೂ ಪೋಷಕರ ಗುಂಪು ಶಾಲೆಗೆ ಬೆಂಕಿ ಹಚ್ಚೋಕೆ ಮುಂದಾಗಿದ್ದಾರೆ. ಶಾಲಾ ಶಿಕ್ಷಕರು ವಿದ್ಯಾರ್ಥಿಯ ದಿನಚರಿಯಲ್ಲಿ (ಡೈರಿ) ಇಸ್ಲಾಂ ಧರ್ಮದ ಶ್ಲೋಕವನ್ನು ಬರೆದು, ಅದನ್ನು ಕಡ್ಡಾಯವಾಗಿ ಕಂಠಪಾಠ ಮಾಡಿಕೊಂಡು ಬರುವಂತೆ ಹೋಮ್‌ವರ್ಕ್ ನೀಡಿದ್ದರು. ಮಗು ಮನೆಗೆ ಬಂದು ಡೈರಿ ತೋರಿಸಿದಾಗ ಈ ವಿಷಯ ಪೋಷಕರ ಗಮನಕ್ಕೆ ಬಂದಿದ್ದು, ಅವರು ತಕ್ಷಣವೇ ಆಘಾತ ವ್ಯಕ್ತಪಡಿಸಿದ್ದಾರೆ.

ಬೇರೆ ಧರ್ಮದ ಧಾರ್ಮಿಕ ಆಚರಣೆಗಳು ಮತ್ತು ಪ್ರಾರ್ಥನೆಗಳನ್ನು ಕಡ್ಡಾಯವಾಗಿ ಕಲಿಯುವಂತೆ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಪೋಷಕರು ಮತ್ತು ಸ್ಥಳೀಯ ಸಂಘಟನೆಗಳು ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಧಾರ್ಮಿಕ ಒತ್ತಾಯದ ವಿರುದ್ಧ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಶಾಲಾ ಆವರಣದಲ್ಲಿ ಧಾರ್ಮಿಕ ತಟಸ್ಥತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಪೋಷಕರ ಅನುಮತಿಯಿಲ್ಲದೆ ಇಂತಹ ವಿಷಯಗಳನ್ನು ಹೇರಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದು, ಶಿಕ್ಷಣ ಇಲಾಖೆಯು ತನಿಖೆ ನಡೆಸುವ ಸಾಧ್ಯತೆಯಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.