2026-03-07 01:55:47

You are a rare moon Rishab Shetty wishes his wife | ಅಪರೂಪದ ಬೆಳದಿಂಗಳು ನೀನು; ಪತ್ನಿ ಪ್ರಗತಿಗೆ ವಿಶೇಷವಾಗಿ ಶುಭಕೋರಿದ ರಿಷಬ್ ಶೆಟ್ಟಿ | Speed News Kannada

You are a rare moon Rishab Shetty wishes his wife | ಅಪರೂಪದ ಬೆಳದಿಂಗಳು ನೀನು; ಪತ್ನಿ ಪ್ರಗತಿಗೆ ವಿಶೇಷವಾಗಿ ಶುಭಕೋರಿದ ರಿಷಬ್ ಶೆಟ್ಟಿ | Speed News Kannada

ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ನಿಮಿತ್ತ ಸಾಮಾಜಿಕ ಮಾಧ್ಯಮದಲ್ಲಿ ರಿಷಬ್ ಶೆಟ್ಟಿ ಅವರು ವಿಡಿಯೊವೊಂದನ್ನು ಹಂಚಿಕೊಂಡು, ಪ್ರೀತಿಯ ಪತ್ನಿಗೆ ಶುಭ ಹಾರೈಸಿದ್ದಾರೆ. ಅದರ ಜೊತೆಗೆ ಹೆಂಡತಿಯ ಬಗ್ಗೆ ಬರೆದಿರುವ ಸಾಲುಗಳು ಈಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ. 'ತನ್ನ ಸುಕೋಮಲತೆಯನ್ನೆ ಶಕ್ತಿಯಾಗಿಸಿಕೊಂಡ ನಿನ್ನೊಳಗಿರುವ ಅಪರೂಪದ ಛಲ, ಮಾತೃತ್ವದ ಮಮತೆ, ವೃತ್ತಿಯೆಡಗಿನ ಏಕಾಗ್ರತೆ, ಏಕಕಾಲದಲ್ಲಿ ಎಲ್ಲವನ್ನೂ ನಿಭಾಯಿಸುವ ಕಾರ್ಯಕ್ಷಮತೆ ನನ್ನಲ್ಲಿ ಬೆರಗು ಮೂಡಿಸುತ್ತದೆ. ಅಷ್ಟೇ ಹೆಮ್ಮೆಯನ್ನೂ ತರುತ್ತದೆ. ಈ ಬಣ್ಣದ ಬದುಕಿನಲ್ಲಿ ಹೀಗೆ ಅಪರೂಪದ ಬೆಳದಿಂಗಳಿನಂತೆ ಸದಾ ಕಂಗೊಳಿಸುತ್ತಾ, ಪ್ರೀತಿ ಬೆಳಸುತ್ತಿರು, ಕೀರ್ತಿ ಗಳಿಸುತ್ತಿರು. ಹುಟ್ಟುಹಬ್ಬದ ಶುಭಾಶಯಗಳು ಪ್ರಗತಿ' ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಹೇಳಿದಂತೆ, ಪ್ರಗತಿ ಶೆಟ್ಟಿ ಅವರು ಒತ್ತಡದ ನಡುವೆಯೂ ಇಡೀ ಮನೆಯನ್ನು ನಿಭಾಯಿಸುತ್ತಿದ್ದಾರೆ. ಜೊತೆಗೆ ಪತಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುವ ಮೂಲಕ ದೊಡ್ಡ ಶಕ್ತಿಯಾಗಿ ಅವರ ಬೆನ್ನಹಿಂದೆ ನಿಂತುಕೊಂಡಿದ್ದಾರೆ. 2017 ಫೆಬ್ರುವರಿ 9ರಂದು ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಗಂಡು ಹಾಗೂ ಹೆಣ್ಣು ಮಗು ಇದೆ. ಮಗನಿಗೆ ರತ್ ಶೆಟ್ಟಿ ಮತ್ತು ಮಗಳಿಗೆ ರಾಧ್ಯಾ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.