2026-06-08 04:01:48

India allowed to buy Russian oil | ರಷ್ಯಾ ತೈಲ ಖರೀದಿಸಲು ಭಾರತಕ್ಕೆ ಅನುಮತಿ ಅಮೆರಿಕ ಪ್ರಕಟಣೆ | Speed News Kannada

India allowed to buy Russian oil | ರಷ್ಯಾ ತೈಲ ಖರೀದಿಸಲು ಭಾರತಕ್ಕೆ ಅನುಮತಿ ಅಮೆರಿಕ ಪ್ರಕಟಣೆ | Speed News Kannada

ನವದೆಹಲಿ: ಮಧ್ಯ ಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಭಾರತವು ರಷ್ಯಾದಿಂದ ತೈಲ ಖರೀದಿಸಲು ಒಪ್ಪಿಗೆ ನೀಡಲಾಗಿದೆ ಎಂದು ಅಮೇರಿಕಾ ತಿಳಿಸಿದೆ.  ಈಗಾಗಲೇ ಸಾಗಣೆ ಹಂತದಲ್ಲಿರುವ ರಷ್ಯಾ ದೇಶದ ತೈಲವನ್ನು ಭಾರತ ಖರೀದಿಸಬಹುದು ಎಂದು ಹೇಳಿದೆ.
ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್  ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಸಮುದ್ರ ಮಾರ್ಗದಲ್ಲಿ ಸಾಗಣೆಯಲ್ಲಿರುವ ರಷ್ಯಾದ ತೈಲವನ್ನು ಖರೀದಿ ಮಾಡಲು ನಮ್ಮ ಮಿತ್ರ ರಾಷ್ಟ್ರವಾದ ಭಾರತಕ್ಕೆ ಅನುಮತಿ ನೀಡಲು ಹಣಕಾಸು ಇಲಾಖೆ ಸಮ್ಮತಿಸಿದೆ' ಎಂದು ಹೇಳಿದ್ದಾರೆ.
ಭಾರತ ನಮಗೆ ಉತ್ತಮ ಸಹಕಾರ ನೀಡುತ್ತಾ ಬಂದಿದೆ. ರಷ್ಯಾದ ತೈಲ ಖರೀದಿ ನಿಲ್ಲಿಸಬೇಕು ಎಂದು ಹೇಳಿದಾಗ ಅವರು ಅದನ್ನು ಪಾಲಿಸಿದ್ದಾರೆ. ಸದ್ಯ ಉದ್ಭವಿಸಿರುವ ತಾತ್ಕಾಲಿಕ ಬಿಕ್ಕಟ್ಟನ್ನು ಸುಗಮಗೊಳಿಸಲು ರಷ್ಯಾ ತೈಲ ಖರೀದಿಗೆ ಭಾರತಕ್ಕೆ ನಾವು ಅನುಮತಿ ನೀಡಿದ್ದೇವೆ ಎಂದು ಒತ್ತಿ ಹೇಳಿದ್ದಾರೆ.
ನಾವು ನಿರ್ಬಂಧ ಹೇರಿರುವ ಲಕ್ಷಾಂತರ ಬ್ಯಾರೆಲ್ ಕಚ್ಚಾ ತೈಲ ಜಲಮಾರ್ಗದಲ್ಲಿದೆ. ಅದರ ಮೇಲೆ ನಿರ್ಬಂಧ ಹಿಂಪಡೆಯುವ ಮೂಲಕ ಪೂರೈಕೆ ಸುಗಮಗೊಳಿಸಬಹುದು. ಈ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದೇವೆ ಎಂದೂ ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.