2026-06-08 03:53:38

US warns Iran | ಷರತ್ತು ಇಲ್ಲದೆ ಶರಣಾದರೆ ಮಾತುಕತೆ ಇರಾನ್‌ ಗೆ ಅಮೆರಿಕ ಎಚ್ಚರಿಕೆ | Speed News Kannada

US warns Iran | ಷರತ್ತು ಇಲ್ಲದೆ ಶರಣಾದರೆ ಮಾತುಕತೆ ಇರಾನ್‌ ಗೆ ಅಮೆರಿಕ ಎಚ್ಚರಿಕೆ | Speed News Kannada

ವಾಷಿಂಗ್ಟನ್: ಯಾವುದೇ ಪೂರ್ವ ಷರತ್ತುಗಳಿಲ್ಲದೆ ಸಂಪೂರ್ಣವಾಗಿ ಶರಣಾಗತಿಯಾದರೆ ಮಾತ್ರ ಯುದ್ಧವನ್ನು ಸ್ಥಗಿತಗೊಳಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಬಿಗಡಾಯಿಸುತ್ತಿರುವ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಇರಾನ್‌ ಯಾವುದೇ ಷರತ್ತುಗಳಿಲ್ಲದೆ ಶರಣಾದರೆ ಮಾತ್ರ ಮಾತುಕತೆಗೆ ಮುಂದಾಗುತ್ತೇವೆ. ಇರಾನ್ ಅನ್ನು ವಿನಾಶದ ಅಂಚಿನಿಂದ ಮರಳಿ ಹಳಿಗೆ ತರುತ್ತೇವೆ. ಆರ್ಥಿಕವಾಗಿ ಹಿಂದೆಂದಿಗಿಂತಲೂ ಉತ್ತಮ ಮತ್ತು ಬಲಶಾಲಿ ಆರ್ಥಿಕ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುತ್ತೇವೆ ಎಂದೂ ಹೇಳಿದ್ದಾರೆ.
ಅಯತೊಲ್ಲಾ ಖಮೇನಿ ಉತ್ತರಾಧಿಕಾರಿಯನ್ನಾಗಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರಾಕ್‌ ಆಯ್ಕೆ ಮಾಡಿಕೊಂಡಿದ್ದರೂ ಅಮೆರಿಕ ಅದನ್ನು ಒಪ್ಪಿಕೊಳ್ಳುವುದಿಲ್ಲ. ಜನರಿಂದ ಚುನಾಯಿತರಾಗದ ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇಲ್ಲದ ಅವರು ಪರಮೋಚ್ಚ ನಾಯಕರಾಗಲು ಸಾಧ್ಯವೇ ಇಲ್ಲ. ಇರಾನ್‌ ನಲ್ಲಿ ಶಾಂತಿ ನೆಲಸುವಂತೆ ಮಾಡುವ ಸಮರ್ಥರೊಬ್ಬರನ್ನು ಆಯ್ಕೆ ಮಾಡುವುದಾಗಿ ಅವರು ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.