2026-03-07 03:57:20

Balendra Shah close to becoming Prime Minister | ನೇಪಾಳ ಪ್ರಧಾನಿ ಹುದ್ದೆಗೆ ಬಾಲೇಂದ್ರ ಶಾ ಹತ್ತಿರ ಇವರಿಗೂ ಕರ್ನಾಟಕಕ್ಕೂ ಇದೆ ನಂಟು | Speed News Kannada

Balendra Shah close to becoming Prime Minister | ನೇಪಾಳ ಪ್ರಧಾನಿ ಹುದ್ದೆಗೆ ಬಾಲೇಂದ್ರ ಶಾ ಹತ್ತಿರ ಇವರಿಗೂ ಕರ್ನಾಟಕಕ್ಕೂ ಇದೆ ನಂಟು | Speed News Kannada

ಖಠ್ಮಂಡು: ನೇಪಾಳದಲ್ಲಿ ನಡೆದ ಚುನಾವಣೆಯಲ್ಲಿ ಬಾಲೇಂದ್ರ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಪೂರ್ಣ ಬಹುಮತ ಪಡೆದು ಅಧಿಕಾರ ರಚಿಸಲು ಸನ್ನದ್ದವಾಗಿದೆ. ದೇಶಾದ್ಯಂತ ಗುರುವಾರ ಚುನಾವಣೆ ನಡೆದಿತ್ತು. 
ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧವನ್ನು ವಿರೋಧಿಸಿ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಜೆನ್‌ ಝೀ ಪ್ರತಿಭಟನೆ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. 
ನೇಪಾಳದ ಒಟ್ಟು 275 ಸ್ಥಾನಗಳ ಪೈಕಿ 165 ಸ್ಥಾನಗಳಿಗೆ ಮತದಾನ ನಡೆದಿತ್ತು. ಆರ್‌ಎಸ್‌ಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರಿದೆ. ಉಳಿದಂತೆ ನೇಪಾಳಿ ಕಾಂಗ್ರೆಸ್‌, ಸಿಪಿಎನ್- ಯುಎಂಎಲ್‌, ನೇಪಾಳಿ ಕಮ್ಯೂನಿಸ್ಟ್‌ ಪಕ್ಷಗಳು ಕೆಲವೇ ಕ್ಷೇತ್ರಗಳಲ್ಲಿ ಗೆಲುವು ಪಡೆದಿವೆ.
ಬಾಲೇಂದ್ರ ಶಾಗೂ ಕರ್ನಾಟಕಕ್ಕೂ ಇದೆ ನಂಟು: 
35 ವರ್ಷ ಶಾ ಅವರು ಈ ಹಿಂದೆ ರ್ಯಾಪರ್ ಆಗಿದ್ದರು. 2022ರಲ್ಲಿ ಇವರು ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಸ್ಥಾಪಿಸಿದ್ದರು. ಇವರು ಕಾಂಡುವಿನ ಮೇಯರ್ ಆಗಿಯೂ ಅನುಭವ ಪಡೆದಿದ್ದಾರೆ. ಆಗಿದ್ದರು. 
ಇವರು 2018ರವರೆಗೆ ರಾಜ್ಯದ  ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದು  ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್‌ ಪದವಿ ಪಡೆದಿದ್ದಾರೆ.
ಸಂಸದರ ಆಯ್ಕೆ ಹೇಗೆ?:
ನೇಪಾಳದ ಚುನಾವಣಾ ವ್ಯವಸ್ಥೆಯು ಮಿಶ್ರ ಚುನಾವಣಾ ವ್ಯವಸ್ಥೆಯನ್ನು ಆಧರಿಸಿದೆ. ಸಂಸದರನ್ನು ನೇರ ಚುನಾವಣೆ ಮತ್ತು ಪಕ್ಷದ ಒಟ್ಟು ಮತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂಸತ್ತಿನ 275 ಸ್ಥಾನಗಳಲ್ಲಿ, 165 ಸ್ಥಾನಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಪ್ರತಿ ಕ್ಷೇತ್ರದಲ್ಲಿ,ಮತದಾರರು ತಮ್ಮದೇ ಆದ ಅಭ್ಯರ್ಥಿಯನ್ನು ಆರಿಸುತ್ತಾರೆ. ಮತಗಳ ಶೇಕಡಾವಾರು (ಅನುಪಾತ ಪ್ರಾತಿನಿಧ್ಯ) ಆಧಾರದ ಮೇಲೆ ಉಳಿದ 110 ಸ್ಥಾನಗಳನ್ನು ಪಕ್ಷಗಳು ಪಡೆದ ಮತಗಳ ಶೇಕಡಾವಾರು ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. 
ಉದ್ದೇಶವೆಂದರೆ ಸಣ್ಣ ಪಕ್ಷಗಳು ಮತ್ತು ವಿವಿಧ ಸಾಮಾಜಿಕ ಗುಂಪುಗಳು ಸಂಸತ್ತಿನಲ್ಲಿ ಸ್ಥಾನ ಪಡೆಯುವುದನ್ನು ಮತ್ತು ಯಾವುದೇ ಒಂದು ಪಕ್ಷವು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸದಂತೆ ನೋಡಿಕೊಳ್ಳುವುದಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.