ಬೆಂಗಳೂರು: ದೆಹಲಿಯ ಘಟನೆಗಳ ಕುರಿತು ಮಾತನಾಡಿರುವ ನಟ ಕಿಶೋರ್, ಇಲ್ಲಿಯವರೆಗೆ ಶಾಂತಿ ಮತ್ತು ಸಹನೆಯಿಂದ ಹೋರಾಡಿದ ನಮ್ಮ ದೇಶದ ಯುವ ಪ್ರತಿಭಟನಾಕಾರರಿಗೆ ನನ್ನ ಮೊದಲ ಸಲ್ಯೂಟ್ ಎಂದು ಹೇಳಿದ್ದಾರೆ. ಪ್ರೀತಿ, ಶಾಂತಿ, ಐಕ್ಯತೆ ಮತ್ತು ಅಹಿಂಸೆಯನ್ನು ಎತ್ತಿಹಿಡಿದು, ಪೆಟ್ಟು ತಿಂದರೂ ಮರುಪೆಟ್ಟು ನೀಡದೆ ನಿಂತಿರುವ ಇಂತಹ ಅಹಿಂಸಾತ್ಮಕ ಹೋರಾಟಗಾರರಿಗಿಂತ ಧೈರ್ಯಶಾಲಿ ಪಡೆ ಪ್ರಪಂಚದಲ್ಲೇ ಬೇರೊಂದಿಲ್ಲ.
ಆದರೆ, ಯಾವುದೇ ಪ್ರತಿರೋಧ ತೋರದ ಈ ಮಕ್ಕಳ ಮೇಲೆ ಪೊಲೀಸ್ ಹಾಗೂ ಆರ್‌ಎಸ್‌ಎಸ್ ಗೂಂಡಾಗಳು ನೈಲ್-ಲಾಠಿಗಳಿಂದ ನಡೆಸಿರುವ ಕ್ರೂರ ದಾಳಿ ಸಂಪೂರ್ಣ ಅಮಾನವೀಯ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ಮೋದಿಯವರಲ್ಲಿ ಕನಿಷ್ಠ ಮಾನವೀಯತೆಯೂ ಇಲ್ಲದಂತಾಗಿದೆ; ಕಳೆದ ಎರಡು ತಿಂಗಳಿಂದ ದೌರ್ಜನ್ಯಕ್ಕೊಳಗಾಗಿ ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಬಳಿ ಒಂದು ಪದವೂ ಇಲ್ಲ. ಗಾಂಧೀಜಿಯವರ ಹತ್ಯೆಯಿಂದ ಹಿಡಿದು ಗೋಧ್ರಾ ಮತ್ತು ಕೊವ್ವೂರ್ ಘಟನೆಗಳವರೆಗೆ ಹಿಂಸೆ, ದ್ವೇಷ ಹಾಗೂ ಸುಳ್ಳುಗಳನ್ನು ಸೃಷ್ಟಿಸುವುದೇ ಇವರುಗಳ ಇತಿಹಾಸವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ .