2026-03-07 03:16:57

Yare Nee Bulbul song for Darshan fans! | ದರ್ಶನ್ ಫ್ಯಾನ್ಸ್ ಗಾಗಿ ಯಾರೇ ನೀ ಬುಲ್ ಬುಲ್ ಹಾಡು! | Speed News Kannada

Yare Nee Bulbul song for Darshan fans! | ದರ್ಶನ್ ಫ್ಯಾನ್ಸ್ ಗಾಗಿ ಯಾರೇ ನೀ ಬುಲ್ ಬುಲ್ ಹಾಡು! | Speed News Kannada

ಬೆಂಗಳೂರು ಸಿನಿಮಾ. ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣದ ಗಾರ್ಖ ಚಿತ್ರದಲ್ಲಿ ದರ್ಶನ್ ಅಭಿನಯದ ಗಜ ಚಿತ್ರದ ಬಂಗಾರಿ ಯಾರೇ ನೀ ಬುಲ್ ಬುಲ್ ಹಾಡನ್ನು ರಿಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿದೆ ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಈ ಹಾಡನ್ನು ಆಗಮಿಸಿದ್ದ 50 ಕ್ಕು ಹೆಚ್ಚು ದರ್ಶನ್ ಫ್ಯಾನ್ಸ್ ಲಾಂಚ್ ಮಾಡಿದರು ಗರ್ಗಾ ಒಂದು ಊರಿನ ಹೆಸರು ಲ್ಯಾಂಡ್ ಆಫ್ ಶಾಡೋ ಎಂಬ ಅಡಿಬರಹವಿದೆ. ಅರುಣ್ ರಾಮಪ್ರಸಾದ್ ಎ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಗಾರ್ಗ ಒಂದು ಅಡ್ವೆಂಚರ್ ಡ್ರಾಮಾ ಹಾರರ್ ಚಿತ್ರವಾಗಿದ್ದು ಅರುಣ್ ಒಬ್ಬ ರೈತ ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಮುಖ ಪಾತ್ರದಲ್ಲಿ ಸಾಯಿ ಕುಮಾರ್ ಹಾಗೂ ನಾಯಕಿ ಪಾತ್ರದಲ್ಲಿ ರೆಹಾನ್ ಅಭಿನಯಿಸಿದ್ದಾರೆ. 

ಇನ್ನು ಎಂ ಶಶಿಧರ್ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ ಈ ಸಂದರ್ಭದಲ್ಲಿ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಮಾತನಾಡಿ ಗಜ ಚಿತ್ರದ ಹಾಡುಗಳು ನಮ್ಮ ಅಶ್ವಿನಿ ಆಡಿಯೋದಲ್ಲಿ ರಿಲೀಸ್ ಹಾಗಿತ್ತು ಆಗ ಆ ಹಾಡನ್ನು ಮಿಲಿಯನ್ಗಟ್ಟಲೆ ಪ್ರೇಕ್ಷಕರು ನೋಡಿದ್ದರು. ಈಗಲೂ ಸಹ ರಿಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ ಹೆಚ್ಚು ವೀಕ್ಷಣೆಯಾಗಿದ್ದು ಈ ಹಾಡನ್ನು ದರ್ಶನ್ ಅವರಿಗೆ ಡೆಡಿಕೇಟ್ ಮಾಡುತಿದ್ದೇವೆ. 

ಚಿತ್ರದ ರಿಲೀಸ್ ಆದ ದಿನ ಈ ಹಾಡಿನ ಯಶಸ್ಸನ್ನು ಸಂಭ್ರಮಿಸುತ್ತೇವೆ ಚಿತ್ರವನ್ನು ಎಷ್ಟು ಬೇಕು ಅಷ್ಟು ಸೆಂಟರ್ ಗಳಲ್ಲಿ ಮಾತ್ರ ರಿಲೀಸ್ ಮಾಡುತ್ತಿದ್ದೇನೆ. ಎನ್ ಕುಮಾರ್ ಅವರು ಒಳ್ಳೊಳ್ಳೆ ಥಿಯೇಟರ್ ಸೆಟಪ್ ಮಾಡಿಕೊಂಡಿದ್ದಾರೆ ಇದು ಮಾಮೂಲಿ ಸಿನಿಮಾ ಅಲ್ಲ ವಿಭಿನ್ನ ರೀತಿಯ ಮೇಕಿಂಗ್ ನಿರೂಪಣೆ ಕಾಣಬಹುದು ಅಂತ ಹೇಳಿದರು ಇನ್ನು ನಿರ್ದೇಶಕ ಶಶಿಧರ್ ಮಾತನಾಡಿ ಜನ ಮೆಚ್ಚುವಂತ ಸಿನಿಮಾ ಮಾಡಿದ್ದೇವೆ ಚಿತ್ರದಲ್ಲಿ ನಾಯಕನಿಗೆ ಮೂರು ಗೆಟ್ ಅಪ್ಗಳಿವೆ ಅಂತ ಹೇಳಿದರು ಇನ್ನೂ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ವಿಭಿನ್ನವಾಗಿದ್ದು ರೈಟರ್ ಅಂಡರ್ ವರ್ಲ್ಡ್ ಹೀಗೆ ಹಲವಾರು ಶೇಡ್ಸ್ ಇದೆ ಇದೊಂದು ಹಾರರ್ ಕ್ರೈಂ ಥ್ರಿಲ್ಲ ಸಬ್ಜೆಕ್ಟ್ ಅಂತ ಹೇಳಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.