2026-03-07 02:18:31

Violation Of Our Metro Rules By Our People..! | ನಮ್ಮ ಜನರಿಂದ ನಮ್ಮ ಮೆಟ್ರೋ ನಿಯಮ ಉಲ್ಲಂಘನೆ..! | Speed News Kannada

Violation Of Our Metro Rules By Our People..! | ನಮ್ಮ ಜನರಿಂದ ನಮ್ಮ ಮೆಟ್ರೋ ನಿಯಮ ಉಲ್ಲಂಘನೆ..! | Speed News Kannada

ಬೆಂಗಳೂರು  ಮೆಟ್ರೋದಲ್ಲಿ ಸಹ ಪ್ರಯಾಣಿಕರಿಗೆ ಕಿರಿಕಿರಿಯನ್ನಿಸುವಂತೆ ಜೋರಾಗಿ ಮ್ಯೂಸಿಕ್ ಕೇಳುವ ವೃದ್ಧರು ಅಂಗವಿಕಲರ ಆಸನ ಅತಿಕ್ರಮಣ ಆಹಾರ ಸೇವನೆ ಪ್ರಕರಣಗಳು ಕಳೆದ ವರ್ಷ ಲಕ್ಷದಾಟಿವೆ. ಹೌದು ್ರಯಾಣಿಕರಿಗೆ ಕಿರಿ ಕಿರಿ ಉಂಟು ಮಾಡುವ ನಡವಳಿಕೆ ಮಾಡಬಾರದೆಂಬ ನಿಯಮಗಳನ್ನು ಪಾಲಿಸುವಂತೆ ಬಿಎಂಆರ್‌ಸಿಎಲ್ ಸಾಕಷ್ಟು ಬಾರಿ ಸೂಚಿಸಿದ್ರು ಮೆಟ್ರೋ ರೈಲಿನಲ್ಲೂ ಈ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿಲ್ಲ ಆದರೂ ಪ್ರತಿನಿತ್ಯ ಒಂದಲ್ಲ ಒಂದು ಮಾರ್ಗದಲ್ಲಿ ಕಾನೂನು ಉಲ್ಲಂಘಿಸುವ ಪ್ರಕರಣಗಳು ನಡೆಯುತ್ತಿವೆ ಇದಕ್ಕಾಗಿ ಪ್ರಯಾಣಿಕರ ನಡುವೆ ಜಗಳ ತಳ್ಳಾಟ ನೂಕಾಟಗಳು ಕೂಡ ನಡೆಯುತ್ತಲೇ ಇವೆ ಕೊನೆಗೆ ಮೆಟ್ರೋ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ ಪ್ರಕರಣಗಳು ಕೂಡ ಸಾಕಷ್ಟು ನಮ್ಮಲ್ಲಿವೆ. 

ಇನ್ನು ಮೆಟ್ರೋ ರೈಲ್ವೇಸ್ ಕಾಯಿದೆ 2002ರ ಅಡಿಯಲ್ಲಿ ಸಹ ಪ್ರಯಾಣಿಕಾರಿಗೆ ತೊಂದರೆ ಉಂಟು ಮಾಡಿದ್ದಲ್ಲಿ ಕೆಲ ಅಪರಾಧಗಳು ದಂಡಕ್ಕೆ ಒಳಪಡುತ್ತವೆ ಈ ಹಿನ್ನೆಲೆಯಲ್ಲಿ ನಿಗಮ ಪ್ರಯಾಣಿಕರ ಜವಾಬ್ದಾರಿಯುತ ವರ್ತನೆ ಹಾಗೂ ಪ್ರಯಾಣದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿಶೇಷ ಜಾಗೃತಿ ಅಭಿಯಾನವನ್ನು ಕೈಗೊಂಡಿದೆ ಮೆಟ್ರೋ ರೈಲುಗಳಲ್ಲಿ ಹೆಡ್ ಫೋನ್ ಇಲ್ಲದೆ ಸಂಗೀತ ಕೇಳುವುದು ಆಹಾರ ಸೇವಿಸುವುದು ಅಥವಾ ತಂಬಾಕು ಸೇವನೆ ಮಾಡುವುದು ಸಹ ಪ್ರಯಾಣಿಕರಿಗೆ ತೊಂದರೆಯನ್ನು ಉಂಟುಮಾಡುತ್ತದೆ. 

ಅಷ್ಟೇ ಅಲ್ಲ ಹಿರಿಯ ನಾಗರಿಕರಿಗೆ ಗರ್ಭಿಣಿಯರಿಗೆ ಅಂಗವಿಕಲರಿಗೆ ಮತ್ತು ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಬಿಟ್ಟುಕೊಡುವುದು ಎಲ್ಲರ ಕರ್ತವ್ಯವಾಗಿರುತ್ತದೆ ಆದರೆ ಇದನ್ನು ಯಾರು ಪಾಲಿಸುವುದಿಲ್ಲ ಯುವಕರು ಯುವತಿಯರು ತಮ್ಮ ಇಚ್ಛೆಯಂತೆ ನಡೆದುಕೊಳ್ಳುವ ರೀತಿ ಜನಸಾಮಾನ್ಯರಿಗೆ ನೋವನ್ನುಂಟು ಮಾಡುತ್ತಿದೆ. ಇದನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಅಂತ ಬಿಎಂಆರ್‌ಪಿಎಲ್ ಎಚ್ಚರಿಕೆ ಕೂಡ ಕೊಟ್ಟಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.