2026-03-07 01:42:13

Vijay Deverakonda | ವಿಜಯ್‌ ದೇವರಕೊಂಡಗೆ ವಿಲನ್ ಆದ ಹಾಲಿವುಡ್ ಖ್ಯಾತ ನಟ; ಯಾರು ಆ ಖಳನಾಯಕ? | Speed News Kannada

Vijay Deverakonda | ವಿಜಯ್‌ ದೇವರಕೊಂಡಗೆ ವಿಲನ್ ಆದ ಹಾಲಿವುಡ್ ಖ್ಯಾತ ನಟ; ಯಾರು ಆ ಖಳನಾಯಕ? | Speed News Kannada

ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಐತಿಹಾಸಿಕ ಘಟನೆ ಆಧಾರಿತ ಸಿನಿಮಾ 'ರಣಬಾಲಿ' ಯಲ್ಲಿ ಹಾಲಿವುಡ್ ನಟ 'ಆರ್ನಾಲ್ಡ್ ವೋಸ್' ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಾಸ್ ಅವತಾರದಲ್ಲಿ ವಿಜಯ್ ದೇವರಕೊಂಡು ಹೊಸ ಸಿನಿಮಾದ ಶೀರ್ಷಿಕೆ ಬಿಡುಗಡೆರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ರಣಬಾಲಿ 

ಸಿನಿಮಾದಲ್ಲಿ ಆರ್ನಾಲ್ಡ್ ವೋಸ್, ಸರ್ ಥಿಯೋಡರ್ ಹೆಕ್ಟರ್ ಎಂಬ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಯಾರು ಈ ಆರ್ನಾಲ್ಡ್ ವೋಸ್
ಮೊದಲಿಗೆ ಇವರು 1984ರಲ್ಲಿ ತೆರೆಕಂಡ 'ಬೋಟೀ ಗಾನ್ ಬಾರ್ಡರ್ ಟೋ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ 'ದಿ ಮಮ್ಮಿ' ಮತ್ತು 'ದಿ ಮಮ್ಮಿ ರಿಟರ್ನ್ಸ್' ಸಿನಿಮಾದಲ್ಲಿ ಕಳನಾಯಕನ ಪಾತ್ರದಲ್ಲಿ ನಟಿಸುವ ಮೂಲಕ ಹೆಚ್ಚು ಪ್ರಸಿದ್ದಿ ಪಡೆದರು. 'ಹಾರ್ಡ್ ಟಾರ್ಗೆಟ್', 'ಏಜೆಂಟ್ ಕೋಡಿ ಬ್ಯಾಂಕ್ಸ್', 'ಬ್ಲಡ್ ಡೈಮಂಡ್' ಹಾಗೂ 'ಸಿಲ್ವರ್ಟನ್ ಸೀಜ್' ಸೇರಿದಂತೆ ಇತರೆ ಸಿನಿಮಾಗಳಲ್ಲಿ ನಟಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.