2026-03-07 01:56:11

The Expensive Watch Worn By Kareena Kapoor | ಗಮನ ಸೆಳೆದ ಕರೀನಾ ಕಪೂರ್ ಧರಿಸಿದ್ದ ದುಬಾರಿ ವಾಚ್; ಬೆಲೆ ಎಷ್ಟು ಗೊತ್ತಾ? | Speed News Kannada

The Expensive Watch Worn By Kareena Kapoor | ಗಮನ ಸೆಳೆದ ಕರೀನಾ ಕಪೂರ್ ಧರಿಸಿದ್ದ ದುಬಾರಿ ವಾಚ್; ಬೆಲೆ ಎಷ್ಟು ಗೊತ್ತಾ? | Speed News Kannada

ಕರೀನಾ ಕಪೂರ್ ಬಾಲಿವುಡ್ ನಟಿಅವರು ಇತ್ತೀಚೆಗೆ ಮುಂಬೈನ ವಿಮಾನ ನಿಲ್ದಾಣದಲ್ಲಿಕಾಣಿಸಿಕೊಂಡಿದ್ದಾರೆ. ಸುಂದರವಾದ ಔಟ್‌ ಫಿಟ್‌ನಲ್ಲಿ ಕಾಣಿಸಿಕೊಂಡ ಅವರು ತಮ್ಮ ಕೈಗೆ -ವಿಭಿನ್ನವಾದ ವಾಚ್ ಧರಿಸಿದ್ದರು. ಈಗ ಅವರ ಕೈ ಗಡಿಯಾರ ಎಲ್ಲರ ಗಮನ ಸೆಳೆದಿದೆ.  ಆಕ್ರಮಣಕಾರಿಯಾಗಿ ವರ್ತಿಸಿದ ದಾಳಿಕೋರ ಆಭರಣಗಳನ್ನು ಮುಟ್ ವರದಿಗಳ ಪ್ರಕಾರ, ನಟಿ ಕರೀನಾ ಕಪೂರ್ ಅವರ ಕೈಯಲ್ಲಿದ್ದ ವಾಚ್ ಐಷಾರಾಮಿಯದ್ದಾಗಿದೆ. -ಜೀಗರ್-ಲೆಕೌಲ್ಸ್' ಕಂಪನಿಗೆ ಸೇರಿದ್ದು, ಮಹಿಳೆಯರಿಗಾಗಿಯೇ ವಿಶೇಷವಾಗಿ ತಯಾರಿಸಲಾದ ವಾಚ್ ಆಗಿದೆ. ಇದು ₹12.40 ಲಕ್ಷ ಬೆಲೆ ಬಾಳುತ್ತದೆ. ವಾಚ್ ಅನ್ನು ಮೃದ್ವಂಗಿಗಳ ಚಿಪ್ಪು, ಬೆಲೆ ಬಾಳುವ ಹರಳುಗಳು ಹಾಗೂ ಸ್ಟೇನ್‌ಲೆಸ್-ಸ್ಟೀಲ್‌ನಿಂದ ತಯಾರಿಸಲಾಗಿದೆ.

ವಾಚ್ ನೋಡಲು ಆಕರ್ಷಕವಾಗಿದ್ದು, ಕಪ್ಪು ಬಣ್ಣದ ಪಟ್ಟಿ ಹಾಗೂ ಬಿಳಿ ಬಣ್ಣದ ಅರೇಬಿಕ್ ಅಂಕಿ ಸಂಖ್ಯೆಗಳಿಂದ ಕೂಡಿದೆ. ಗಂಟೆ, ನಿಮಿಷ, ಸೆಕೆಂಡುಗಳ ಜೊತೆಗೆ ರಾತ್ರಿ ಮತ್ತು ಹಗಲುಗಳನ್ನು ಈ ವಾಚ್ ತೋರಿಸುತ್ತದೆ.ಬ್ಯಾಟರಿ ಚಾಲಿತ ವಾಚ್ ಆಗಿದ್ದು, ಸತತ 38 ಗಂಟೆಗಳ ಕಾಲ ಕೆಲಸ ಮಾಡುತ್ತದೆ. 11 ಸಣ್ಣ ವಜ್ರದ ಹರಳುಗಳಿಂದಲೂ ಇದನ್ನು ಅಲಂಕರಿಸಲಾಗಿದೆ. ಈ ವಾಚ್ ವಾಟರ್‌ಸ್ಪೂಫ್ ಆಗಿದ್ದು, 3 ಸ್ಟಾರ್ ರೇಟಿಂಗ್ ಹೊಂದಿದೆ. ಭಾರತದಲ್ಲಿ ಈ ವಾಚ್‌ನ ಬೆಲೆ ₹12,40,000 ಆಗಿದೆ ಎಂದು ವರದಿಯಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.