ಖ್ಯಾತ ಕಾಲಿವುಡ್ ನಟ, ಈಗಷ್ಟೇ ರಾಜಕಾರಣದಲ್ಲಿ ಛಾಪು ಮೂಡಿಸುತ್ತಿರುವ ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ವಿಜಯ್ ಪತ್ನಿ ಸಂಗೀತಾ ಅವರು 27 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಇಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ವಿಜಯ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ. ಸಧ್ಯ ರಾಜಕೀಯದಲ್ಲಿ ನೆಲೆಯೂರಲು ಹವಣಿಸುತ್ತಿರುವ ವಿಜಯ್ ಅವರಿಗೆ ತಮ್ಮ ಮೇಲಿನ ಆರೋಪ ಕಪ್ಪುಚುಕ್ಕಿಯಾಗಲಿದೆಯೇ ಎಂದು ಕಾದುನೋಡಬೇಕಿದೆ.
ಸಂಗೀತಾ ಲಂಡನ್‌ನಲ್ಲಿ ಹುಟ್ಟಿ ಬೆಳೆದವರು ಅವರ ತಂದೆ ಸೊನ್ನಲಿಂಗಂ ಲಂಡನ್‌ನಲ್ಲಿ ದೊಡ್ಡ ಉದ್ಯಮಿಯಾಗಿದ್ದರು. 1996 ರಲ್ಲಿ, 'ಪೂವೆ ಉನಕ್ಕ' ಚಿತ್ರವು ಭಾರಿ ಯಶಸ್ಸನ್ನು ಕಂಡಾಗ. ಸಂಗೀತಾ ಲಂಡನ್ ನಿಂದ ಆಗಮಿಸಿ ವಿಜಯ್ ಅವರನ್ನು ಭೇಟಿಯಾಗಿದ್ದರು. ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿ 1999 ರಲ್ಲಿ ವಿವಾಹವಾಗಿದ್ದರು. ವಿಜಯ್ ಸಂಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ವಿಜಯ್ ಕ್ರಿಶ್ಚಿಯನ್. ಸಂಗೀತಾ ಹಿಂದೂ. ಆದರೂ ಎರಡೂ ಕುಟುಂಬದವರು ಒಪ್ಪಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು.
2024 ರಿಂದಲೂ ವಿಜಯ್-ಸಂಗೀತಾ ವಿಚ್ಛೇದನದ ಗಾಳಿಸುದ್ದಿ ಹರಿದಾಟುತ್ತಲೇ ಇತ್ತು. ಈಗ ಅಧಿಕೃತವಾಗಿ ಹೊರಬಿದ್ದಿದೆ.