2026-03-07 02:57:43

T20 World Cup-2026 India-Pakistan Match Will Not Take Place! | ಟಿ-20 ವಿಶ್ವಕಪ್‌-2026 ಭಾರತ – ಪಾಕಿಸ್ತಾನ ಪಂದ್ಯ ನಡೆಯಲ್ಲ! | Speed News Kannada

T20 World Cup-2026 India-Pakistan Match Will Not Take Place! | ಟಿ-20 ವಿಶ್ವಕಪ್‌-2026 ಭಾರತ – ಪಾಕಿಸ್ತಾನ ಪಂದ್ಯ ನಡೆಯಲ್ಲ! | Speed News Kannada

ಈ ಬಾರಿಯ ಬಹುನಿರೀಕ್ಷಿತ ಐಸಿಸಿ ಪುರುಷರ ಟಿ-20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯುತ್ತಾ ಇಲ್ವಾ ಅನ್ನೋ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿತ್ತು. ಇದೀಗ ಅಂತಿಮವಾಗಿ ಈ ಪಂದ್ಯ ನಡೆಯಲ್ಲ ಅನ್ನೋ ಖಚಿತ ಮಾಹಿತಿ ಹೊರಬಿದ್ದಿದೆ.  ಈ ಬಗ್ಗೆ ಖುದ್ದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ.  ಭಾರತದ ವಿರುದ್ಧ ಆಡಬೇಕಿದ್ದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದೆ. ಹೀಗಾಗಿ, ಫೆಬ್ರವರಿ 15 ರಂದು ನಡೆಯಬೇಕಿದ್ದಇಂಡೊ–ಪಾಕ್ ನಡುವಿನ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ ಅನ್ನೋದು ಖಚಿತವಾಗಿದೆ. 

ಟಿ20 ವಿಶ್ವಕಪ್-2026ರ ಪಂದ್ಯಾವಳಿಗಳು ಫೆಬ್ರವರಿ 7 ರಿಂದ ಶುರುವಾಗಲಿದೆ. 20 ತಂಡಗಳ ನಡುವಣ ಈ ವಿಶ್ವ ಮಿನಿ ಮಹಾಸಮರದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿದೆ. ಆದರೆ ಗ್ರೂಪ್‌ ಹಂತದಲ್ಲಿ ಟೀಮ್‌ ಇಂಡಿಯಾ ವಿರುದ್ಧ ನಡೆಯಬೇಕಿದ್ದ ಪಾಕಿಸ್ತಾನದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಪ್ರಧಾನಿ ಘೋಷಿಸಿದ್ದಾರೆ.  

ನಿನ್ನೆ ನಡೆದ ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಪಾಕ್‌ ಪ್ರಧಾನಿ,  ಶೆಹಬಾಝ್ ಷರೀಫ್ ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣಗಳನ್ನು ಸಹ ಸ್ಪಷ್ಟಪಡಿಸಿದ್ದಾರೆ.  ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಮುಖ್ಯ ಕಾರಣವೆಂದರೆ ಬಾಂಗ್ಲಾದೇಶ್ಗೆ ಬೆಂಬಲ ಸೂಚನೆ ಮಾಡುವ ದೃಢ ನಿರ್ಧಾರ. ಐಸಿಸಿ ಟೂರ್ನಿಯಿಂದ ಬಾಂಗ್ಲಾದೇಶ್ ತಂಡವನ್ನು ಹೊರಗಿಟ್ಟಿರುವ ಕ್ರಮವನ್ನು ಖಂಡಿಸಿ ಪಾಕಿಸ್ತಾನ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದೆ. 
ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್ನಿಂದ ಹೊರಗಿಡಬಾರದು, ಅವರಿಗೆ ತಟಸ್ಥ ಸ್ಥಳದಲ್ಲಿ ಪಂದ್ಯವಾಡಲು ಅವಕಾಶ ನೀಡಬೇಕೆಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಗ್ರಹಿಸಿತ್ತು. ಇದಾಗ್ಯೂ ಐಸಿಸಿ ಅವಕಾಶ ನೀಡಿರಲಿಲ್ಲ.  ಇದೀಗ ಬಾಂಗ್ಲಾದೇಶ್ ನಿಲುವಿಗೆ ಬೆಂಬಲ ಸೂಚಿಸಲು ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ. ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ಇರಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಶೆಹಬಾಝ್ ಷರೀಫ್ ತಿಳಿಸಿದ್ದಾರೆ. ಬುಧವಾರ ಪಾಕಿಸ್ತಾನದಲ್ಲಿ ನಡೆದ ಸಂಪುಟ ಸಭೆಯಲ್ಲಿ ಶೆಹಬಾಝ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಭಾರತ ಮತ್ತು ಪಾಕಿಸ್ತಾನ್ ನಡುವಣ ಟಿ20 ವಿಶ್ವಕಪ್ ಪಂದ್ಯ ನಡೆಯಲ್ಲ ಎಂಬುದು ಇದೀಗ ದೃಢಪಟ್ಟಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.