ಬೆಂಗಳೂರು : ಕಿಚ್ಚ ಸುದೀಪ್ ಅವರು ಸಿಸಿಎಲ್ ಕಪ್ ಗೆದ್ದ ಖುಷಿಯಲ್ಲಿದ್ದರು. ಪಂದ್ಯವನ್ನ ಹೇಗೆಲ್ಲ ಆಡಿದ್ದೇವೆ ಅಂತಲೂ ಹೇಳ್ತಾ ಇದ್ದರು. ಪತ್ನಿ ಪ್ರಿಯಾ ಸುದೀಪ್ ಬಗ್ಗೆ ಸಿಹಿಯಾದ ಕ್ಷಣವನ್ನು ಹಂಚಿಕೊಂಡಿದ್ರು ಒಟ್ಟಾರೆ ಇಡೀ ಸಿಸಿಎಲ್ ಪ್ರೆಸ್ ಮೀಟ್ ಹ್ಯಾಪಿ ಹ್ಯಾಪಿ ಆಗಿ ಇತ್ತು. ಆದರೆ ಪತ್ರಕರ್ತರ ಒಂದೇ ಒಂದು ಪ್ರಶ್ನೆಗೆ ಸುದೀಪ್ ಶಾಕ್ ಆದರು. ಇದು ಸಿಸಿಎಲ್ ಪ್ರೆಸ್ ಮೀಟ್ ಗೆಲುವಿನ ಸಿಹಿಯಾದ ಕ್ಷಣ ಇದು. ಆದರೆ, ಇಲ್ಲಿ ಮೆಣಸಿನಕಾಯಿ ಯಾಕೆ.
ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಜೋಗಿ ಪ್ರೇಮ್, ಧ್ರುವ ಸರ್ಜಾ, ಎ.ಪಿ.ಅರ್ಜುನ್, ದರ್ಶನ್ ಹೀಗೆ ಎಲ್ಲರ ಬಗ್ಗೆನೂ ಬಾಯಿಗೆ ಬಂದ ಹಾಗೆ ಕೆಟ್ಟದಾಗಿಯೆ ಮಾತಾಡ್ತಾರೆ .
ತಮ್ಮ ಕಾಟನ್‌ಪೇಟೆಗೇಟ್ ಚಿತ್ರದ ಪ್ರೆಸ್ ಮೀಟ್ ಅಲ್ಲಿಯೇ ಕನಕಪುರ ಶ್ರೀನಿವಾಸ್ ಮಾತನಾಡಿದ್ದರು. ಪತ್ರಕರ್ತರಿಂದ ಒಂದು ಪ್ರಶ್ನೆ ಬಂತು ನೋಡಿ. ಈ ಪ್ರಶ್ನೆಯನ್ನ ಕೇಳಿದ ಪತ್ರಕರ್ತರಿಗೆ ಉತ್ತರ ಏನೂ ಸಿಗಲಿಲ್ಲ. ಉತ್ತರ ರೂಪದಲ್ಲಿ ಕಿಚ್ಚ ಸುದೀಪ್ ಕೊಟ್ಟ ಲಾಡು ರಿಯಾಕ್ಷನ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಸಿಸಿಎಲ್ ಪಂದ್ಯ ಗೆದ್ದಿದ್ದೇವೆ. ಕಪ್ ತೆಗೆದುಕೊಂಡು ಬಂದಿದ್ದೇವೆ. ಚೆನ್ನಾಗಿಯೇ ಆಡಿದ್ದೇವೆ. ಈ ಟೈಮ್ ಅಲ್ಲಿ ಇದೆಲ್ಲ ಬೇಕಾ. ಸಿಹಿಯಾದ ಕ್ಷಣದಲ್ಲಿ ಮೆಣಸಿನಕಾಯಿ ಬೇಡ. ಅದರ ಬಗ್ಗೆ ಹೇಳೋಕೆ ಮತ್ತೊಂದು ವೇದಿಕೆ ಹತ್ತುತ್ತೇನೆ. ಅಲ್ಲಿಯೇ ಮಾತನಾಡುತ್ತೇನಿ ಅಂತಲೇ ಸುದೀಪ್ ಹೇಳಿದ್ದಾರೆ.