ಶಿವ ರಾಜಕುಮಾರ್ : ಕನ್ನಡ ಚಿತ್ರರಂಗದಲ್ಲಿ (ನಟಿಯರು ವಸ್ತುಗಳಲ್ಲ) ಎನ್ನುವ ಅಭಿಯಾನವು ಮುಂದುವರಿದಿದೆ. ಇದೀಗ ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ನಟ ಶಿವರಾಜ್ ಕುಮಾರ್ ಅವರು ಟ್ವಿಟ್‌ವೊಂದನ್ನು ಮಾಡಿದ್ದು ಈ ಟೀಟ್‌ಗೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಟ ಶಿವರಾಜ್ ಕುಮಾರ್ ಅವರ ಟ್ರೇಟ್‌ಗೆ ಹಲವರು ಬೆಂಬಲ ಸೂಚಿಸಿದ್ದರೆ, ಈ ಕಾಲದಲ್ಲೂ ಹೆಣ್ಣು ಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ. ದಯವಿಟ್ಟು ಆತ್ಮಸಾಕ್ಷಿಯಿಟ್ಟುಕೊಂಡು ಕೆಲಸ ಮಾಡಿ. ಹೆಣ್ಣು ಮಕ್ಕಳ, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ. - ಶಿವರಾಜ್ ಕುಮಾರ್ ಎನ್ನುವ ಪೋಸ್ಟ್ ಅನ್ನು ನಟ ಶಿವಣ್ಣ ಹಂಚಿಕೊಂಡಿದ್ದಾರೆ. ಇದಕ್ಕೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಹಿಳೆಯರನ್ನು ಮಾತಿನಲ್ಲಿ ಮಾತ್ರವಲ್ಲ, ಕೃತಿಯಲ್ಲೂ ಗೌರವಿಸಬೇಕು. ಚಲನಚಿತ್ರಗಳಲ್ಲಿ ನಟಿಯರನ್ನು ಲೈಂಗಿಕವಾಗಿ ಚಿತ್ರಿಸುವುದನ್ನು ನಿಲ್ಲಿಸಿ. ಐಟಂ ಹಾಡುಗಳು, ಅಶ್ಲೀಲ ದೃಶ್ಯಗಳು, ಅನಗತ್ಯ ಲಿಪ್-ಲಾಕ್ ದೃಶ್ಯಗಳು ಮತ್ತು ಅಗ್ಗದ ಮನರಂಜನೆಗಾಗಿ ಬಳಸುವ ನಿಂದನೀಯ ಭಾಷೆಯನ್ನು ನಿಷೇಧಿಸಿ. ಮಹಿಳೆಯರು ಘನತೆಗೆ ಅರ್ಹರು, ವಸ್ತುಗಳಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಸಚಿನ್ ಎನ್ನುವವರು ನಟಿಯರನ್ನು ಚಿತ್ರಗಳನ್ನು ನಿರ್ಮಿಸುವವರೇ ಮೊದಲು ವಸ್ತುವಾಗಿ ಪರಿಗಣಿಸುತ್ತಿದ್ದಾರೆ. ನಟಿಯರನ್ನು ಸರಿಯಾಗಿ / ಸಭ್ಯ ರೀತಿಯಲ್ಲಿ ತೋರಿಸುವಲ್ಲಿ ಚಿತ್ರ ನಿರ್ಮಿಸುವವರ ಜವಾಬ್ದಾರಿಯೂ ಇದೆ ಎಂದು ಹೇಳಿದ್ದಾರೆ. ಪುನೀತ್ ಎನ್ನುವವರು, ನಾವು ಯಾವಾಗಲೂ ನಮ್ಮ ಪ್ರೀತಿಯ ಅಣ್ಣಾವರು ಕುಟುಂಬದ ನೀತಿಯನ್ನು ಅನುಸರಿಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಿವರಾಜ್ ಕುಮಾರ್ ಸಿನಿಮಾಗಳ ಉಲ್ಲೇಖ ಇನ್ನು ಕೆಲವರು ನಟ ಶಿವರಾಜ್ ಕುಮಾರ್ ಅವರು ಈ ಹಿಂದೆ ನಟಿಸಿದ್ದ ಸಿನಿಮಾಗಳನ್ನು ಉಲ್ಲೇಖ ಮಾಡಿದ್ದಾರೆ. ಇನ್ನೂ ಕೆಲವರು ಟಕ ಟಕ ಟಕಾಯ್ತು.. ಲಗ ಲಗ ಲಗಾಯ್ತು ಎನ್ನುವ ಹಾಡನ್ನು ಕಾಮೆಂಟ್ ಮಾಡಿದ್ದಾರೆ. ನಿತೀಶ್ ಶೆಟ್ಟಿ ಎನ್ನುವವರು ಶಿವರಾಜ್ ಕುಮಾರ್ ಅವರ ಹಾಡನ್ನು ಕಾಮೆಂಟ್ ಮಾಡಿದ್ದಾರೆ. ಹೌದು ನೀವು ಹೇಳಿದ್ದು ನಿಜ ಸರ್. ಇನ್ನು ಮುಂದೆ ಹೆಣ್ಣು ಮಕ್ಕಳನ್ನು ಅಸಭ್ಯವಾಗಿ ತೋರಿಸೋ ಯಾವ ಚಿತ್ರದಲ್ಲೂ ನಟಿಸಬೇಡಿ. ಮೈತುಂಬಾ ಬಟ್ಟೆಯನ್ನು ಕಡ್ಡಾಯ ಮಾಡಿ. ನಟಿಯರಿಗೆ ತಮ್ಮನ್ನು ತಾವು ಗೌರವಿಸಿಕೊಳ್ಳಲು ಹೇಳಿ ಎಂದು Anti'Wirus@SIFF ಎನ್ನುವ ಖಾತೆಯಿಂದ ಟೀಟ್ ಮಾಡಲಾಗಿದೆ.
ನಟ ದರ್ಶನ್ ಅಭಿಮಾನಿಗಳ ಬೇಸರ ಇನ್ನು ಇದೇ ಸಂದರ್ಭದಲ್ಲಿ ನಟ ದರ್ಶನ್ ಅವರ ಅಭಿಮಾನಿಗಳು ಸಹ ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ. ಸರ್ ನೀವು ಹೆಣ್ಣು ಮಕ್ಕಳಿಗೆ ಕೊಡುವ ಗೌರವಕ್ಕೆ ನಾವು ಚಿರಋಣಿ. ಆದರೆ, ವಿಜಯಲಕ್ಷ್ಮಿ ದರ್ಶನ್ ಅವರು ಹೆಣ್ಣು ಅಲ್ಪ ಸರ್, ಆವಾಗ ಯಾಕೆ ಪೋಸ್ಟ್ ಮಾಡಿಲ್ಲ ಅವರು ಬೇರೆಯವರ ಎಂದು ಸಂಜು ಎನ್ನುವವರು ಕಾಮೆಂಟ್ ಮಾಡಿದ್ದಾರೆ.