2026-03-07 03:12:20

Salim Khan suddenly admitted to hospital | ಏಕಾಏಕಿ ಆಸ್ಪತ್ರೆಗೆ ದಾಖಲಾದ ಸಲೀಮ್ ಖಾನ್ ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್ ಖಾನ್ | Speed News Kannada

Salim Khan suddenly admitted to hospital | ಏಕಾಏಕಿ ಆಸ್ಪತ್ರೆಗೆ ದಾಖಲಾದ ಸಲೀಮ್ ಖಾನ್ ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್ ಖಾನ್ | Speed News Kannada

ಹಿರಿಯ ಬರಹಗಾರ ಹಾಗೂ ನಟ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಅವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಏನಾಗಿದೆ ಎಂಬುದರ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಮಧ್ಯೆ ಸಲ್ಮಾನ್ ಖಾನ್ ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.ಭದ್ರತಾ ಸಿಬ್ಬಂದಿ ಜೊತೆ ಅವರು ಮುಂಜಾನೆಯೇ ಆಸ್ಪತ್ರೆ ತಲುಪಿಸಿದ್ದಾರೆ. ಅವರು ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ್ದಾರೆ.
ಸಲೀಮ್ ಖಾನ್ ಅವರನ್ನು ಇಂದು (ಫೆಬ್ರವರಿ 17) ಮುಂಜಾನೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿ ಆಗಿದೆ. ಅವರನ್ನು ಮನೆಯಿಂದ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆಯಂತೆ. ಸಲೀಮ್ ಖಾನ್ ಆರೋಗ್ಯದ ಬಗ್ಗೆ ಅಭಿಮಾನಿಗಳು ಸಾಕಷ್ಟು ಆತಂಕ ಹೊರಹಾಕಿದ್ದಾರೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಸದ್ಯ ಅವರನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ಮುಂದುವರಿಸಲಾಗಿದೆ.
ಸಲ್ಮಾನ್ ಅವರಿಗೆ ಸಲೀಮ್ ಖಾನ್ ಅವರನ್ನು ಕಂಡರೆ ಅಪಾರ ಗೌರವ ಹಾಗೂ ಪ್ರೀತಿ. ಅವರ ಪ್ರತಿ ಹಂತದಲ್ಲೂ ಸಲೀಮ್ ಖಾನ್ ಬೆಂಬಲವಾಗಿ ನಿಂತಿದ್ದರು. ಈ ಕಾರಣದಿಂದಲೇ ಈ ಹಂತಕ್ಕೆ ತಾವು ಬೆಳೆದು ನಿಂತಿದ್ದು ಎಂಬ ನಂಬಿಕೆ ಸಲ್ಮಾನ್ ಖಾನ್ ಅವರದ್ದು.
ಸಲೀಮ್ ಖಾನ್ ಅವರು ಜಾವೇದ್ ಜೊತೆ ಸೇರಿ ಅದ್ಭುತ ಕಥೆಗಳನ್ನು ಬರೆಯುತ್ತಿದ್ದರು. 70ರ ದಶಕದಲ್ಲಿ ಈ ಜೋಡಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದೆ. 'ಶೋಲೆ' ಈ ಜೋಡಿ ಕೊಟ್ಟ ಅದ್ಭುತ ಸಿನಿಮಾಗಳಲ್ಲಿ ಒಂದು. 'ದೀವಾರ್', 'ಝಂಜೀರ್', 'ಡಾನ್' ಸಿನಿಮಾಗಳಿಗೂ ಇವರು ಕಥೆ ಬರೆದಿದ್ದಾರೆ. ಸಲೀಮ್ ಖಾನ್ ಅವರಿಗೆ ಕನ್ನಡದ ನಂಟು ಕೂಡ ಇದೆ. 1976ರಲ್ಲಿ ಬಂದ 'ಪ್ರೇಮದ ಕಾಣಿಕೆ' ಹಾಗೂ 'ರಾಜ ನನ್ನ ರಾಜ' ಸಿನಿಮಾಗಳಿಗೆ ಸಲೀಮ್ ಹಾಗೂ ಜಾವೇದ್ ಅವರೇ ಕಥೆ ನೀಡಿದರು. ಈ ಎರಡೂ ಸಿನಿಮಾಗಳು ಹಿಟ್ ಆದವು.
ಸಲೀಮ್ ಖಾನ್ ಅವರಿಗೆ ಈಗ 90ನೇ ವರ್ಷ. ಈ ವಯಸ್ಸಿನಲ್ಲಿ ಅನಾರೋಗ್ಯ ಕಾಡಿರುವುದರಿಂದ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಈ ಬಗ್ಗೆ ಆಸ್ಪತ್ರೆ ಕಡೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.