ನಟ ಧನ್ನೀರ್ ನಟನೆಯ ಸಿನಿಮಾ 'ಹಯಗ್ರೀವ' ನಿನ್ನೆ (ಫೆಬ್ರವರಿ 27) ರಿಲೀಸ್ ಆಗಿದೆ. ಕಳೆದ ಕೆಲವು ದಿನಳಿಂದ ಸಿನಿಮಾ ಬಗ್ಗೆ ಅಬ್ಬರ ಪ್ರಚಾರ ಮಾಡಿ ಬಿಡುಗಡೆ ಮಾಡವುದಕ್ಕೆ ಸಜ್ಜಾಗಿತ್ತು. ಆದರೆ, ಮೊದಲ ದಿನವ ಸಿನಿಮಾ ಕಂಟಕ ಎದುರಾಗಿತ್ತು ಸೆನ್ಸಾರ್ ಬೋರ್ಡ್‌ನಿಂದ ಸಿನಿಮಾಗೆ ಸಿಗಬೇಕಿದ್ದ ಸೆನ್ಸಾರ್ ಕಾಪಿಯೇ ಸಿಕ್ಕಿರಲಿಲ್ಲ. ಹೀಗಾಗಿ ಮೊದಲ ಎರಡು ಶೋಗಳು ಪ್ರದರ್ಶನ ಕಾಣಲಿಲ್ಲ. ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರೂ ಸೆನ್ಸಾರ್ ಬೋರ್ಡ್‌ನಿಂದ ಸರ್ಟಿಫಿಕೇಟ್ ಯಾಕೆ ಸಿಕ್ಕಿರಲಿಲ್ಲ? ಈ ಪ್ರಶ್ನೆ ಉತ್ತರ ಹಲವಿದೆ. ಅದರಲ್ಲಿ ದೊಡ್ಡ ದೊಡ್ಡ ತಲೆಗಳು ಈ ಸಿನಿಮಾ ರಿಲೀಸ್ ಆಗಬಾರದು ಅಂತ ಪಿತೂರಿ ಮಾಡಿವೆ ಅನ್ನೋದು ಚಿತ್ರತಂಡದ ಆರೋಪ. ಅದರಲ್ಲೂ ಧನ್ನೀರ್ ಹಾಗೂ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಇಬ್ಬರೂ ಸಿನಿಮಾ ತಡೆಯೋಕೆ ಪ್ರಯತ್ನ ಪಟ್ಟವರ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಹೌದು, 'ಹಯಗ್ರೀವ' ಸಿನಿಮಾ ರಿಲೀಸ್‌ಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ ಅನ್ನೋದು ಸತ್ಯ. ಆದರೆ, ಈ ಸಿನಿಮಾವನ್ನು ತಡೆಯುವುದಕ್ಕೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಧನ್ನೀರ್ ಆರೋಪಿಸಿದ್ದಾರೆ. ವಾಟ್ಸಾಪ್ ಗ್ರೂವ್ ಮಾಡಿಕೊಂಡು ನೆಗೆಟಿವ್ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಮಾಡಿದ್ದಾರೆ. ಅಷ್ಟಕ್ಕೂ ಈ ಸಿನಿಮಾ ರಿಲೀಸ್ ತಡವಾಗಿದ್ದಕ್ಕೆ ಏನು ಕಾರಣ? ಎಚ್ ಡಿ ಕುಮಾರಸ್ವಾಮಿ ಈ ಸಿನಿಮಾಗೆ ಬೆಂಬಲವಾಗಿ ನಿಂತಿದ್ದೇಗೆ? ನಟ-ನಿರ್ಮಾಪಕ ಏನಂತಾರೆ? ತಿಳಿಯುವುದಕ್ಕೆ ನಮ್ಮ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ
ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಧನ್ನೀರ್ ಸಿನಿಮಾ 'ಹಯಗ್ರೀವ' ಬಗ್ಗೆ ನೆಗೆಟಿವ್ ಕಮೆಂಟ್‌ಗಳನ್ನು ಪಾಸ್ ಮಾಡುತ್ತಿದ್ದಾರೆ. ಅದಕ್ಕಂತಾನೇ ಒಂದು ವಾಟ್ಸಾಪ್ ಗ್ರೂಪ್ ಅನ್ನು ಕ್ರಿಯೇಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಧನ್ನೀರ್ ಪ್ರತಿಕ್ರಿಯೆ ಹೀಗಿದೆ. "ನಮ್ಮ ಮೇಲೆ ಕೆಲವರಿಗೆ ಸಿಕ್ಕಾಪಟ್ಟೆ ಲವ್ ಆಗಿದೆ. ಅದು ಉಕ್ಕಿ ಹರಿಯುತ್ತಿದೆ. ಎಷ್ಟು ಲವ್ ಆಗಿದೆ ಅಂದರೆ, ಜೀರ್ಣಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅದಕ್ಕೆ ಇವತ್ತು ನಮ್ಮ ಸಿನಿಮಾ 2 ಶೋಗಳನ್ನು ಕ್ಯಾನ್ಸಲ್ ಬೇರೆ ಮಾಡಿಸಿದ್ರು. ಒಳ್ಳೆಯದಾಗಲಿ ಅವರಿಗೆ. ಆದಷ್ಟು ಬೇಗ ನಮಗೂ ಅವರ ಮೇಲೆ ಎಷ್ಟು ಪ್ರೀತಿಯಿದೆ ಅಂತ ನಾವೂ ತೋರಿಸುತ್ತೇವೆ.” ಎಂದು ಧನ್ನೀರ್ ಹೇಳಿದ್ದಾರೆ. "24 ಗಂಟೆ ನಡೆದಿದ್ದು ಸಿನಿಮಾ ಮಾಡ್ತೀನಿ''
'ಹಯಗ್ರೀವ' ಸಿನಿಮಾದ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಕೂಡ ದೊಡ್ಡ ದೊಡ್ಡ ತಲೆಗಳು ಸಿನಿಮಾ ರಿಲೀಸ್ ತಡೆಯುವ ಕೆಲಸ ಮಾಡಿವೆ ಎಂದಿದ್ದಾರೆ. "ಅದೊಂದು ಸಿನಿಮಾ ಮಾಡುವುದಕ್ಕೆ ಒಳ್ಳೆಯ ಕಂಟೆಂಟ್ ಸಿಕ್ಕು ನನಗೆ. ಕಮರ್ಷಿಯಲ್ ಕಂಟೆಂಟ್ ಸಿಕ್ಕಿದೆ. ನಿನ್ನೆ 24 ಗಂಟೆಗಳಲ್ಲಿ ನಡೆದ ಘಟನೆ ಸಿನಿಮಾ ಮಾಡುವಂತಹ ಕಂಟೆಂಟ್ ಸಿಕ್ಕಿದೆ. ನಮಗೆ ಕಂಟೆಂಟ್ ಹಾಗೆಲ್ಲ ಸಿಗುತ್ತವೆ ಅಲ್ವಾ? ಸೆನ್ಸಾರ್ ಆಫೀಸ್‌ನಿಂದ ಸೇರಿಕೊಂಡು ಒಳ್ಳೆಯ ಕಂಟೆಂಟ್ ಕೊಟ್ಟಿದ್ದಾರೆ. ದೊಡ್ಡ ಮಹಾನುಭಾವರು ಸೇರಿಕೊಂಡು ಸಿನಿಮಾ ನಿಲ್ಲಿಸ್ಟೇಕು, ಅವಮಾನಿಸಬೇಕು ಅಂತ ತಲೆ ಓಡಿಸಿದ್ರಲ್ಲ. ಇದು ಒಳ್ಳೆಯ ಕಂಟೆಂಟ್ ಇದನ್ನು ಪ್ರಡ್ಯೂಸ್ ಮಾಡಿ ತೋರಿಸುತ್ತೇನೆ. ಒಳ್ಳೆಯ ಕಮರ್ಷಿಯಲ್ ಕಂಟೆಂಟ್ ಇದು. " ಎಂದು ನಿರ್ಮಾಪಕ ಹಾಗೂ ಎಂಎಲ್‌ರ ಸಮೃದ್ಧಿ ಮಂಜುನಾಥ್ ಆರೋಪಿಸಿದ್ದಾರೆ.
ಕುಮಾರಣ್ಣ ಬೆಂಬಲದಿಂದ ರಿಲೀಸ್ 'ಹಯಗ್ರೀವ' ಸಿನಿಮಾ ರಿಲೀಸ್ ಆಗುವುದಕ್ಕೆ ಪ್ರಮುಖ ಕಾರಣ ಎಚ್ ಡಿ ಕುಮಾರಸ್ವಾಮಿ ಕಾರಣವೆಂದು ನಿರ್ಮಾಪಕ ಸಮೃದ್ಧಿ ಮಂಜುನಾಥ್ ಹೇಳಿದ್ದಾರೆ. "ನಿನ್ನೆ ಕಂಡ ಹೆಂಡ್ತಿ ಇಬ್ಬರೂ ಸಪೋರ್ಟ್ ಮಾಡಿದ್ದಾರೆ. ಈ ಸೆನ್ಸಾರ್ ಸರ್ಟಿಫಿಕೇಟ್ ಬೆಳಗ್ಗೆ ನಾಲ್ಕು ಗಂಟೆಗೆ ನನ್ನ ಕೈಗೆ ಸಿಗಬೇಕಾದರೆ, ಅದಕ್ಕೆ ಪ್ರಮುಖ ಕಾರಣ ಕುಮಾರಣ್ಣ. ಅವರೇ ಸೆಂಟ್ರಲ್‌ನಿಂದ ತರಿಸಿ ಕೊಟ್ರು. ರಾತ್ರಿ 2 ಗಂಟೆಗೆ ಸಿನಿಮಾ ನೋಡಿದ್ರು. ಒಬ್ಬ ಐಎಎಸ್ ಅಧಿಕಾರಿ ನಾಗಭೂಷಣ್ ಅಂತ ರಾತ್ರಿ 2.15ಕ್ಕೆ ಸಿನಿಮಾ ನೋಡಿ, 4.15ಗೆ ಓಕೆ ಮಾಡಿದ್ದಾರೆ.” ಎಂದಿದ್ದಾರೆ.