ಸೋಮವಾರ, ಜನವರಿ 26, 2026 ರಂದು, ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವ ವೇಳೆ ಕೆಂಪು ಬಣ್ಣದ ಟೈ-ಡೈ ಪಾಗ್ಡಿಯನ್ನು ಧರಿಸಿದ್ದರು. ಚಿನ್ನದ ಬಣ್ಣ ಹಾಗೂ ಕೆಂಪು ಬಣ್ಣದ ಟೈ-ಡೈ ಪಾಗ್ಡಿಯು ರಾಜಸ್ಥಾನಿ ಶೈಲಿಯಲ್ಲಿರುವಂತದ್ದು. ಇದನ್ನು ರೇಷ್ಮೆಯಿಂದ ತಯಾರಿಸಿರುವ ಸಾಧ್ಯತೆ ಇದೆ. ಇದು ಜರಿ (ಲೋಹದ ನೂಲಿನ ನೇಯ್ಗೆ) ಹೊಂದಿದ ರೇಷ್ಮೆ ಬ್ರೊಕೇಡ್ ಬಟ್ಟೆಯಾಗಿದ್ದು, ಚಿನ್ನದ ವಿನ್ಯಾಸಗಳು ನೇಯ್ದಂತಿವೆ. ಇಂತಹ ಪಾಗ್ಡಿಗಳು ಜೋಧಪುರಿ ಸಫಾ ಸೇರಿದಂತೆ ವಿವಿಧ ಶೈಲಿಗಳಲ್ಲಿ ಇರುತ್ತದೆ. ಇದು ಸಾಂಪ್ರದಾಯಿಕ ಕರಕುಶಲತೆ ಮತ್ತು ಆಧುನಿಕ ಶೈಲಿಯ ಮಿಶ್ರಣವನ್ನು ನೀಡುತ್ತದೆ. ಈ ವರ್ಷ ಭಾರತವು 77ನೇ ಗಣರಾಜ್ಯೋತ್ಸವವನ್ನು (77th Republic Day) ಆಚರಿಸುತ್ತಿದೆ. ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಪೇಟದತ್ತ ಎಲ್ಲರ ಚಿತ್ತ ನೆಟ್ಟಿದೆ. ಪ್ರತಿವರ್ಷ ವಿಭಿನ್ನ ಬಣ್ಣ ಮತ್ತು ವಿನ್ಯಾಸದ ಪಾಗ್ಡಿ ಅಥವಾ ಸಫಾ ಧರಿಸುವ ಮೂಲಕ, ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯತೆಯನ್ನು ಮೌನವಾಗಿ ಪ್ರತಿಬಿಂಬಿಸುತ್ತಿದ್ದಾರೆ.
ನೀಲಿ ಮತ್ತು ಬಿಳಿ ಕುರ್ತಾ-ಪೈಜಾಮ ಮತ್ತು ತಿಳಿ ನೀಲಿ ಬಣ್ಣದ ಅರ್ಧ ಜಾಕೆಟ್ ಧರಿಸಿದ್ದ ಪ್ರಧಾನಿ ಮೋದಿ ಅವರು ಅದರೊಂದಿಗೆ ಈ ಪಗ್ಡಿಯನ್ನು ಧರಿಸಿದ್ದರು. ಈ ಹಿಂದಿನ ಗಣರಾಜ್ಯೋತ್ಸವಗಳಲ್ಲಿ, ಪ್ರಧಾನಿ ಮೋದಿಯವರು ಪಗ್ಡಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಕೆಲವರಿಂದ ಆಸಕ್ತಿ ಮತ್ತು ಟೀಕೆ ಕೂಡ ವ್ಯಕ್ತವಾಗಿತ್ತು. 76ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಅವರು ಕೆಂಪು ಮತ್ತು ಹಳದಿ ಬಣ್ಣದ ಬಂದೇಜ್ ಸಫಾ ಧರಿಸಿದ್ದರು. ರಾಜಸ್ಥಾನಿ ಮತ್ತು ಗುಜರಾತಿ ಸಂಪ್ರದಾಯದಲ್ಲಿ ಬೇರೂರಿರುವ ಟೈ-ಡೈ ಜವಳಿ ಇದಾಗಿದ್ದು, ಬಿಳಿ ಕುರ್ತಾ-ಪೈಜಾಮ ಮತ್ತು ಕಂದು ಬಣ್ಣದ ಬಂಧ್ ಗಾಲಾ ಜಾಕೆಟ್ ಜೊತೆಗೆ ಇದನ್ನು ಧರಿಸಿದ್ದರು. ಈ ಬಣ್ಣಗಳು 'ಸ್ವರ್ಣೀಮ್ ಭಾರತ್ - ವಿರಾಸತ್ ಔರ್ ವಿಕಾಸ್' ಎಂಬ ರಾಷ್ಟ್ರೀಯ ಥೀಮ್‌ನೊಂದಿಗೆ ಪ್ರತಿಧ್ವನಿಸಿತ್ತು. ಇದು ದೇಶದ ಶ್ರೀಮಂತ ಪರಂಪರೆಯನ್ನು ಸಂಕೇತಿಸಿತ್ತು.
ಪ್ರಧಾನಿ ಮೋದಿ ಧರಿಸುವ ಅಂತಹ ಶಿರಸ್ತ್ರಾಣ (ಪೇಟ) ಗಳ ಆಯ್ಕೆಗಳು ಉದ್ದೇಶಪೂರ್ವಕವಾಗಿರುತ್ತವೆ. ಪ್ರತಿ ವರ್ಷ, ವಿಭಿನ್ನ ಬಣ್ಣಗಳು, ಮಾದರಿಗಳು ಮತ್ತು ಪ್ರಾದೇಶಿಕ ಶೈಲಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಭಾರತದ ವೈವಿಧ್ಯಮಯ ಜವಳಿ ಸಂಪ್ರದಾಯಗಳಿಗೆ ನಮನ ಸಲ್ಲಿಸುತ್ತದೆ. ಈ ಹಿಂದಿನ ವರ್ಷಗಳಲ್ಲಿ, ಪ್ರಧಾನಿ ಮೋದಿ ಅವರು ಬಹು-ಬಣ್ಣದ ಬಂಧನಿ ಪ್ರಿಂಟ್ಸ್, ಉತ್ತರಾಖಂಡ-ಪ್ರೇರಿತ ಕ್ಯಾಪ್‌ಗಳು ಅಥವಾ ರಾಜಸ್ಥಾನಿ ಫೆಟಾ-ಶೈಲಿಯ ಶಿರಸ್ತ್ರಾಣಗಳನ್ನು ಆಯ್ಕೆ ಮಾಡಿದ್ದಾರೆ.