2026-03-07 03:16:38

Mrunal Thakur puts a stop to marriage rumors with Dhanush | ಧನುಷ್ ಜೊತೆ ಮದುವೆ ವದಂತಿಗೆ ಬ್ರೇಕ್ ಹಾಕಿದ ಮೃಣಾಲ್ ಠಾಕೂರ್ ಗಾಸಿಪ್‌ ಹರಡುವವರಿಗೆ ನಟಿಯ ಖಡಕ್ ವಾರ್ನಿಂಗ್ | Speed News Kannada

Mrunal Thakur puts a stop to marriage rumors with Dhanush | ಧನುಷ್ ಜೊತೆ ಮದುವೆ ವದಂತಿಗೆ ಬ್ರೇಕ್ ಹಾಕಿದ ಮೃಣಾಲ್ ಠಾಕೂರ್ ಗಾಸಿಪ್‌ ಹರಡುವವರಿಗೆ ನಟಿಯ ಖಡಕ್ ವಾರ್ನಿಂಗ್ | Speed News Kannada

ಸಿನಿಮಾ ತಾರೆಯರ ವೈಯಕ್ತಿಕ ಬದುಕಿನ ಬಗ್ಗೆ ವದಂತಿಗಳು ಹರಡುವುದು ಹೊಸದೇನಲ್ಲ. ಆದರೆ, ನಟಿ ಮೃಣಾಲ್ ಠಾಕೂರ್ ಮತ್ತು ಕಾಲಿವುಡ್ ಸ್ಟಾರ್ ಧನುಷ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿತ್ತು.
ಈ ವದಂತಿಗಳಿಗೆ ಈಗ ಮೃಣಾಲ್ ಅವರೇ ಖಡಕ್ ಆಗಿ ಉತ್ತರ ನೀಡಿದ್ದಾರೆ.
ವದಂತಿಗಳಿಗೆ ಮೃಣಾಲ್ ತಿರುಗೇಟು ರಶ್ಮಿಕಾ ಮಂದಣ್ಣ ಮತ್ತು ಧನುಷ್ ಪ್ರೀತಿಸುತ್ತಿದ್ದಾರೆ ಹಾಗೂ ಫೆಬ್ರವರಿ 14 ರಂದು (ವ್ಯಾಲೆಂಟೈನ್ಸ್ ಡೇ) ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃಣಾಲ್, "ಈ ವದಂತಿಗಳು ಎಲ್ಲಿಂದ ಹರಡುತ್ತಿವೆಯೋ ನನಗೆ ಗೊತ್ತಿಲ್ಲ, ಇವೆಲ್ಲವೂ ಸಂಪೂರ್ಣ ಆಧಾರರಹಿತ ಇತರರ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್ ಹರಡುವವರಿಗೆ ಫೆಬ್ರವರಿ 14 'ಏಪ್ರಿಲ್ ಫೂಲ್ಸ್ ಡೇ' ಆದಂತಿದೆ" ಎಂದು ಲೇವಡಿ ಮಾಡಿದ್ದಾರೆ. ಧನುಷ್ ಜೊತೆಗಿನ ಮದುವೆಯ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೃಣಾಲ್ ಮುಂದಿನ ಚಿತ್ರಗಳು ಸದ್ಯ ಮೃಣಾಲ್ ಠಾಕೂರ್ ಅವರು ಅಡಿವಿ ಶೇಷ್ ಜೊತೆ 'ಡಕಾಯ್' (Dacoit) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 10, 2026 ರಂದು ತೆರೆಕಾಣಲು ಸಿದ್ಧವಾಗಿದೆ. ಮೊದಲು ಮಾರ್ಚ್ 19 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು, 'ಧುರಂಧರ್ 2' ಮತ್ತು ಯಶ್ ನಟನೆಯ 'ಟಾಕ್ಸಿಕ್' ಸಿನಿಮಾಗಳ ಜೊತೆಗಿನ ಕ್ಯಾಶ್ ತಪ್ಪಿಸಲು ಮುಂದೂಡಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.