2026-03-07 03:15:42

Lankeshs son Samarjit Lankesh wins Best New Actor award | ಲಂಕೇಶ್ ಪುತ್ರ ನಟ ಸಮರ್ಜಿತ್ ಲಂಕೇಶ್‌ಗೆ ಅತ್ಯುತ್ತಮ ನವನಟ ಪ್ರಶಸ್ತಿ | Speed News Kannada

Lankeshs son Samarjit Lankesh wins Best New Actor award | ಲಂಕೇಶ್ ಪುತ್ರ ನಟ ಸಮರ್ಜಿತ್ ಲಂಕೇಶ್‌ಗೆ ಅತ್ಯುತ್ತಮ ನವನಟ ಪ್ರಶಸ್ತಿ | Speed News Kannada

ಕೇರಳದ ಕೊಚ್ಚಿ ನಗರದಲ್ಲಿ ನಡೆದ 70ನೇ ಫಿಲ್ಡ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2024ನೇ ಸಾಲಿನ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ 'ಗೌರಿ' ಚಿತ್ರದ ಅಭಿನಯಕ್ಕಾಗಿ ಸಮರ್ಜಿತ್ ಲಂಕೇಶ್ ಅವರಿಗೆ ಅತ್ಯುತ್ತಮ ನವನಟ ಪ್ರಶಸ್ತಿ ಲಭಿಸಿದೆ.
ಇದರೊಂದಿಗೆ ಲಂಕೇಶ್ ಕುಟುಂಬಕ್ಕೆ ಸಿಕ್ಕಿರುವ ಮೂರನೇ ಫಿಲ್ಡ್ಫೇರ್ ಪ್ರಶಸ್ತಿ ಇದು. ಕನ್ನಡದ ಖ್ಯಾತ ಸಾಹಿತಿ ಹಾಗೂ 'ಲಂಕೇಶ್ ಪತ್ರಿಕೆ' ಸಂಪಾದಕರಾಗಿದ್ದ ಪಿ. ಲಂಕೇಶ್ ಅವರು 1980ರಲ್ಲಿ ಎಲ್ಲಿಂದಲೋ ಬಂದವರು ಚಿತ್ರದ ನಿರ್ದೇಶನಕ್ಕಾಗಿ ಫಿಲ್ಮಫೇ‌ರ್ (ದಕ್ಷಿಣ) ಪ್ರಶಸ್ತಿ ಪಡೆದಿದ್ದರು. 'ಪಲ್ಲವಿ', 'ಅನುರೂಪ', 'ಖಂಡವಿದೆಕೋ ಮಾಂಸವಿದೆಕೋ', 'ಎಲ್ಲಿಂದಲೋ ಬಂದವರು' ಸಿನಿಮಾಗಳ ಮೂಲಕ ಅವರು ನಿರ್ದೇಶಕರಾಗಿ ಹೆಸರು ಮಾಡಿದ್ದರು.
ಅವರ ಪುತ್ರ ಇಂದ್ರಜಿತ್ ಲಂಕೇಶ್ 'ತುಂಟಾಟ', 'ಮೋನಾಲಿಸಾ', ಐಶ್ವರ್ಯ, 'ಹುಡುಗ ಹುಡುಗಿ', 'ಲವ್ ಯೂ ಆಲಿಯಾ', 'ಶಕೀಲಾ', 'ಗೌರಿ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡರು. ಉಪೇಂದ್ರ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಐಶ್ವರ್ಯ' ಚಿತ್ರದ ನಿರ್ದೇಶನಕ್ಕಾಗಿ ಅವರಿಗೆ ಅತ್ಯುತ್ತಮ ನಿರ್ದೇಶನ ಫಿಲ್ಮಫೇರ್ ಪ್ರಶಸ್ತಿ ಲಭಿಸಿತ್ತು. ಈಗ ಮೂರನೇ ತಲೆಮಾರಿನ ಸಮರ್ಜಿತ್ ಲಂಕೇಶ್ 'ಗೌರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಮೊದಲ ಸಿನಿಮಾಗೆಲೇ ಪ್ರತಿಷ್ಠಿತ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.