ಬೆಂಗಳೂರು : ಟಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ವಿಚಾರ ಎಲ್ಲೆಡೆ ಹಾಟ್ ಟಾಪಿಕ್ ಆಗಿದೆ. ಈ ಒಂದು ವಿಷಯವನ್ನ ಎಲ್ಲರೂ ಚರ್ಚೆ ಮಾಡ್ತಾನೇ ಇದ್ದಾರೆ. ಕರ್ನಾಟಕದಲ್ಲೂ ಈ ವಿಷಯ ಇದ್ದೇ ಇರುತ್ತದೆ. ಮೊನ್ನೆಯೊಂದು ವಿಡಿಯೋ ವೈರಲ್ ಆಗಿತ್ತು. ಉದಯಪುರದಿಂದ ಅದ್ಯಾರೋ ವಿಡಿಯೋ ಮಾಡಿದ್ದರು. ಮದುವೆ ಅಂತ ಹೇಳಿಯೇ ಬಿಟ್ಟರು.
ಇದರಿಂದ ಎಲ್ಲರ ಕಣ್ಣು ಫೆಬ್ರವರಿ-2 ರ ಮೇಲೆ ಬಿತ್ತು. ಆದರೆ, ಆ ದಿನ ಏನೂ ಆಗಲೇ ಇಲ್ಲ. ಕಳೆದ ನಾಲ್ಕು ವರ್ಷದಿಂದಲೂ ಈ ವಿಷಯ ಹರಿದಾಡುತ್ತಲೇ ಇದೆ. ಆದರೆ, ಇದನ್ನ ಹೇಳುವ ಸಮಯದಲ್ಲಿ ಪಕ್ಕಾ ಹೇಳುತ್ತೇನೆ ಅಂತಲೂ ಹೇಳಿಕೊಂಡಿದ್ದಾರೆ.
ಒಟ್ಟಾರೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆ ವಿಷಯ ಸದ್ಯದ ಇಂಟ್ರಸ್ಟಿಂಗ್ ವಿಷಯವೇ ಆಗಿದೆ. ಸೋಷಿಯಲ್ ಮೀಡಿಯಾ ಸೇರಿದಂತೆ ಇತರ ಮಾಧ್ಯಮಗಳಲ್ಲೂ ಈ ಮ್ಯಾಟರ್ ಹೆಚ್ಚು ಗಮನ ಸೆಳೆಯುತ್ತಿದೆ. ಫೆಬ್ರವರಿ-26 ಕ್ಕೇನೆ ಎಲ್ಲರೂ ಕಾಯುತ್ತಿದ್ದಾರೆ. ಇನ್ನುಳಿದಂತೆ ತಮ್ಮ ಮದುವೆ ಬಗ್ಗೆ ವಿಜಯ್ ದೇವರಕೊಂಡ ಆಗಲಿ, ರಶ್ಮಿಕಾ ಮಂದಣ್ಣ ಆಗಲಿ ಎಲ್ಲೂ ಅಧಿಕೃತವಾಗಿ ಏನೂ ಹೇಳಿಕೊಂಡಿಲ್ಲ