2026-03-07 01:42:27

Instructions To Reduce Traffic | ಸಿಲ್ಕ್ ಬೋರ್ಡ್ ಜಂಕ್ಷನ್- ಕೆ.ಆರ್.ಪುರಂವರೆಗೆ ಜಿಬಿಎ ಮುಖ್ಯ ಆಯುಕ್ತರ ಪರಿಶೀಲನೆ; ಟ್ರಾಫಿಕ್‌ ಕಡಿಮೆ ಮಾಡಲು ಸೂಚನೆ | Speed News Kannada

Instructions To Reduce Traffic | ಸಿಲ್ಕ್ ಬೋರ್ಡ್ ಜಂಕ್ಷನ್- ಕೆ.ಆರ್.ಪುರಂವರೆಗೆ ಜಿಬಿಎ ಮುಖ್ಯ ಆಯುಕ್ತರ ಪರಿಶೀಲನೆ; ಟ್ರಾಫಿಕ್‌ ಕಡಿಮೆ ಮಾಡಲು ಸೂಚನೆ | Speed News Kannada

ಬೆಂಗಳೂರು: ಬೆಂಗಳೂರಿನಲ್ಲಿ ಸಮಸ್ಯೆಗಳಿಗೇನೂ ಕೊರೆತೆ ಇಲ್ಲ. ಯಾವುದೇ ದಿಕ್ಕಿನಲ್ಲಿ ಪ್ರಯಾಣಿಸಿದರೂ ಟ್ರಾಫಿಕ್‌ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಹೊರ ವರ್ತುಲ ರಸ್ತೆ (ORR) – ಸಿಲ್ಕ್ ಬೋರ್ಡ್ ಜಂಕ್ಷನ್ ರಿಂದ ಕೆ.ಆರ್.ಪುರಂವರೆಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹಲವಾರು ಅಧಿಕಾರಿಗಳು ಹಾಜರಿದ್ದರು. 
ಪರಿಶೀಲನೆ ನಡೆಸಿದ ಆಯುಕ್ತರು ಸಂಬಂಧಪಟ್ಟ ‌ಅಧಿಕಾರಿಗಳಿಗೆ ಸೂಚನೆ ಹಲವು ಸೂಚನೆಗಳನ್ನು ನೀಡಿದರು.
* ಇಬ್ಲೂರು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುಮಾರು 800 ಮೀ. ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲು ಸೂಚನೆ
* ಅಂದಾಜು ವೆಚ್ಚ, ಕಾಮಗಾರಿ ಅವಧಿ ಹಾಗೂ ನಿರ್ಮಾಣ ಮಾದರಿ ಕುರಿತು ಸಮಗ್ರ ವರದಿ ತಯಾರಿಸಲು ನಿರ್ದೇಶನ
* ಸಿಲ್ಕ್ ಬೋರ್ಡ್ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ದಕ್ಷಿಣ ಪಾಲಿಕೆ ಮತ್ತು ಮೆಟ್ರೋ ಇಲಾಖೆಯೊಂದಿಗೆ ಸಮನ್ವಯ
* ಮೆಟ್ರೋ ನಿಲ್ದಾಣಗಳ ಬಳಿ ರಸ್ತೆ ಸಮತಟ್ಟಾಗಿಸಲು ಸೂಚನೆ
ಪೈಲ್ ಕ್ಯಾಪ್ ಕಾಮಗಾರಿಯಿಂದ ಉಂಟಾದ ರಸ್ತೆ ಸ್ರಿಂಕ್ ಸಮಸ್ಯೆ ತಕ್ಷಣ ಸರಿಪಡಿಸಲು ಸೂಚನೆ.
* ಪಾದಚಾರಿ ಮಾರ್ಗ ಅಭಿವೃದ್ಧಿಗೆ ಆದ್ಯತೆ
* ಇಬ್ಲೂರು ಮೆಟ್ರೋ ನಿಲ್ದಾಣದ ಬಳಿ 2 ಕಿ.ಮೀ ಪಾದಚಾರಿ ಮಾರ್ಗ ಪೂರ್ಣಗೊಳಿಸಲು ಸೂಚನೆ
* ಅಗತ್ಯವಿರುವ ಸ್ಥಳಗಳಲ್ಲಿ ಸ್ಕೈವಾಕ್ ಪಟ್ಟಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ
* ಕೋಡಿಬಿಸನಹಳ್ಳಿ ಬಳಿ ರಾಜಕಾಲುವೆ ಅಗಲೀಕರಣ ಮಾಡಿ ಪಾದಚಾರಿ ಮಾರ್ಗ ನಿರ್ಮಾಣ
* ಇತರೆ ಪ್ರಮುಖ ನಿರ್ದೇಶನಗಳು:
* ಫೆಬ್ರವರಿ ಅಂತ್ಯದೊಳಗೆ ಡಬಲ್ ಡೆಕ್ಕರ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿ
* ಹೆಚ್.ಎಸ್.ಆರ್. ಜಂಕ್ಷನ್ ಸರ್ವೀಸ್ ರಸ್ತೆ ಡಾಂಬರೀಕರಣ
* ಕಾರ್ತಿಕ್ ನಗರ ಮೆಟ್ರೋ ಬಳಿ ಪಾದಚಾರಿ ಮಾರ್ಗ ಸ್ವಚ್ಛತೆ
* ಸೇಲಂ ಬ್ರಿಡ್ಜ್ ಬಳಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿ

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.