ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಡಿಯಾಜಿಯೋ ಕಂಪೆನಿಯ ಒಡೆತನದಲ್ಲಿದೆ. ಬ್ರಿಟನ್ ಮೂಲದ ಡಿಯಾಜಿಯೋ ತನ್ನ ಭಾರತೀಯ ಘಟಕವಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ ಆರ್ಸಿಬಿ ಫ್ರಾಂಚೈಸಿಯನ್ನು ಹೊಂದಿತ್ತು. ಇದೀಗ ಡಿಯಾಜಿಯೋ ಕಂಪೆನಿಯು ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಬಿಡ್ಡಿಂಗ್ ಸುಮಾರು 18 ಸಾವಿರ ಕೋಟಿ ರೂ.ನಿಂದ ಶುರುವಾಗಲಿದೆ. ಈಗಾಗಲೇ ಕೆಲ ಉದ್ಯಮಿಗಳು ಆರ್ಸಿಬಿ ತಂಡದ ಖರೀದಿಗೆ ಆಸಕ್ತಿ ತೋರಿದ್ದು, ಹೀಗಾಗಿ ಈ ಮೊತ್ತವು ಮತ್ತಷ್ಟು ಏರಿಕೆಯಾಗುವುದರಲ್ಲಿ ಅನುಮಾನವೇ ಇಲ್ಲ.
ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದೆ. ಹಾಗೆಯೇ ಅಮೆರಿಕದ ಪ್ರೈವೆಟ್ ಇನ್ವೆಸ್ಟ್ಮೆಂಟ್ ಕಂಪೆನಿಯೊಂದು ಕೂಡ ಆರ್ಸಿಬಿ ಫ್ರಾಂಚೈಸಿ ಖರೀದಿಗಾಗಿ ಡಿಯಾಜಿಯೊ ಕಂಪೆನಿ ಜೊತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.
ಇದೀಗ 18 ಸಾವಿರ ಕೋಟಿ ರೂ. ಬ್ರ್ಯಾಂಡ್ ಮೌಲ್ಯದೊಂದಿಗೆ ಆರ್ಸಿಬಿ ಫ್ರಾಂಚೈಸಿಯನ್ನು ಡಿಯಾಜಿಯೋ ಕಂಪೆನಿ ಮಾರಾಟಕ್ಕಿಟ್ಟಿದೆ ಎಂದು ವರದಿ ಮಾಡಿದೆ. ಈ ಮಾರಾಟ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿರುವುದರಿಂದ ಪ್ರಮುಖ ಕಂಪೆನಿಗಳ ಕಡೆಯಿಂದ ಬಿಡ್ಡಿಂಗ್ನಲ್ಲಿ ಪೈಪೋಟಿ ನಡೆಯಬಹುದು. ಈ ಪೈಪೋಟಿಯೊಂದಿಗೆ ಆರ್ಸಿಬಿ ಫ್ರಾಂಚೈಸಿಯು ಎಷ್ಟು ಕೋಟಿಗೆ ಮಾರಾಟವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.