2026-03-07 02:56:48

Hardik Pandya | ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಧರಿಸಿದ್ದ ಅಮೆರಿಕಾ ಕೈಗಡಿಯಾರ ಇಷ್ಟೊಂದು ಸದ್ದು ಮಾಡಿದ್ದು ಇದೇ ವಿಚಾರಕ್ಕೆ | Speed News Kannada

Hardik Pandya  | ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಧರಿಸಿದ್ದ ಅಮೆರಿಕಾ ಕೈಗಡಿಯಾರ ಇಷ್ಟೊಂದು ಸದ್ದು ಮಾಡಿದ್ದು ಇದೇ ವಿಚಾರಕ್ಕೆ | Speed News Kannada

ಹಾರ್ದಿಕ್ ಪಾಂಡ್ಯ ಕೊಲೊಂಬೋದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಶಿವರಾತ್ರಿ ದಿನ ನಡೆದ ಟಿ20 ವಿಶ್ವಕಪ್ 2026 ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿತು. ಪಂದ್ಯ ಮುಗಿದರೂ ಸಹ ಅಂದು ಹಾರ್ದಿ ಪಾಂಡ್ಯ ಧರಿಸಿದ್ದ 25,00,000 ರೂಪಾಯಿ ಬೆಲೆಯ ಕೈಗಡಿಯಾರದ ಸದ್ದು ಮಾತ್ರ ಹಾಗೆ ಇದೆ.ಹಾಗಾದ್ರೆ, ಈ ದುಬಾರಿ ಬೆಲೆ ವಾಚ್‌ ವಿಶೇಷತೆಗಳು ಏನು ಎನ್ನುವ ಇಂಚಿಂಚು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೌದು.. ಹಾರ್ದಿಕ್ ಪಾಂಡ್ಯ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಪಂದ್ಯಗಳ ಸಮಯದಲ್ಲಿ ಅವರು ದುಬಾರಿ ಬೆಲೆಯ ವಾಚ್‌ಗಳನ್ನು ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಾಗೆಯೇ ಇದೀಗ ಅದರಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶಿವನ ಫೋಟೋ ಕಾಣಿಸುವ ವಿಶೇಷ ಕೈಗಡಿಯಾರ ಧರಿಸಿ ಗಮನ ಸೆಳೆದಿದ್ದಾರೆ.ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ 61 ರನ್ನಳ ಭರ್ಜರಿ ಜಯ ಸಾಧಿಸಿತು. ಈ ವೇಳೆ ಪಾಕ್ ಆರಂಭಿಕ ಬ್ಯಾಟ್ಸ್‌ಮನ್ ವಿಕೆಟ್ ಪಡೆಯುವ ಮೂಲಕ ಹಾರ್ದಿಕ್ ಪಾಂಡ್ಯ ಮಿಂಚಿದರು. ಇದೇ ವೇಳೆ ಅವರು ಧರಿಸಿದ್ದ ನೀಲಿ ಬಣ್ಣದ ವಿಶೇಷ ಕೈಡಿಯಾರ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
ಸ್ವಿಮ್ಮಿಂಗ್ ಪೂಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಜೊತೆ ಮಹಿಕಾ ಶರ್ಮಾ ರೊಮ್ಯಾನ್ಸ್, ವಿಶೇಷ ಬರಹದ ಪೋಸ್ಟರ್ ವೈರಲ್
ಮಹಾಶಿವರಾತ್ರಿ ಹಬ್ಬದ ದಿನ ನಡೆದ ಹೈವೋಲೈಜ್ ಕ್ರಿಕೆಟ್ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದದ್ದು ಭಾರತ ತಂಡ ಉತ್ತಮ ಪ್ರದರ್ಶನ. ಅದರಲ್ಲೂ ವಿಶೇಷವಾಗಿ ಹಾರ್ದಿಕ್ ಪಾಂಡ್ಯ ಧರಿಸಿದ್ದ ದುಬಾರಿ ಬೆಲೆ ಕೈಗಡಿಯಾರ. ಇದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಶಿವರಾತ್ರಿಯ ವಿಶೇಷ ದಿನವಾದ್ದರಿಂದ ಧ್ಯಾನಮಗ್ನ ಶಿವನ (ರುದ್ರ ರೂಪ) ಮುಖ ಹೊಂದಿದ ವಾಚ್ ಧರಿಸಿದ್ದ ಅವರು, ಭಗವಂತನ ಆಶೀರ್ವಾದ ಇರಲಿ ಎಂಬ ಭಾವನೆಯಲ್ಲೇ ಮೈದಾನಕ್ಕಿಳಿದಿದ್ದರು ಎನ್ನಲಾಗುತ್ತಿದೆ. ಅದೇ ಪಂದ್ಯದಲ್ಲಿ ಅವರ ಉತ್ತಮ ಪ್ರದರ್ಶನ ಈ ವಿಚಾರಕ್ಕೆ ಮತ್ತಷ್ಟು ಕುತೂಹಲ ಹೆಚ್ಚಿಸಿತು.
ಯಾವ ದೇಶದ ಕಂಪನಿ?
ಹಾರ್ದಿಕ್ ಧರಿಸಿದ್ದ ಈ ದುಬಾರಿ ವಾಚ್ 'ಜಾಕೋಬ್ & ಕೋ' (Jacob & Co.) ಕಂಪನಿಯದು. 1986 ರಲ್ಲಿ ಜಾಕೋಬ್ ಅರಾಬೊ ಅವರಿಂದ ಸ್ಥಾಪಿಸಲ್ಪಟ್ಟ ಒಂದು ಪ್ರಸಿದ್ದ ಅಮೇರಿಕನ್ ಐಷಾರಾಮಿ ಕೈಗಡಿಯಾರಗಳ ಬ್ರಾಂಡ್ ಇದಾಗಿದೆ. 'ಎಪಿಕ್ ಎಕ್ಸ್ ಸ್ಪೋರ್ಟ್ ರುದ್ರ' ವಿಶೇಷ ಸರಣಿಗೆ ಸೇರಿದ ಈ ಮಾಡೆಲ್ ವಿಶ್ವದಾದ್ಯಂತ ಕೇವಲ 25 ಗಡಿಯಾರಗಳಷ್ಟೇ ತಯಾರಿಸಲ್ಪಟ್ಟಿದೆ. ಲಿಮಿಟೆಡ್ ಎಡಿಷನ್ ಆಗಿರುವುದರಿಂದ ಇದನ್ನು ಖರೀದಿಸುವ ಅವಕಾಶವೂ ಆಯ್ದ ಗ್ರಾಹಕರಿಗಷ್ಟೇ ಲಭ್ಯವಾಗುತ್ತದೆ ಎನ್ನಲಾಗುತ್ತಿದೆ.ಇಷ್ಟೊಂದು ಸದ್ದು ಮಾಡಲು ಕಾರಣವೇನು?
ಈ ವಿಶೇಷ ಕೈಗಡಿಯಾರದ ಬೆಲೆ ಸುಮಾರು 25 ಲಕ್ಷ ರೂಪಾಯಿ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ಕೆಲವು ವರದಿಗಳ ಪ್ರಕಾರ, ಇದು ಪಾಕಿಸ್ತಾನ ತಂಡದ ನಾಯಕ ಸಲ್ಮನ್ ಅಲಿ ಅಘಾ ಅವರ ತಿಂಗಳ ಸಂಬಳಕ್ಕಿಂತಲೂ ಮೂರು ಪಟ್ಟು ಪಟ್ಟು ಹೆಚ್ಚು ಎನ್ನಲಾಗಿದೆ. ಇದರಿಂದಲೇ ಈ ವಾಚ್ ಪ್ರೀಮಿಯಂ ವರ್ಗಕ್ಕೆ ಸೇರಿದೆ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ,
ಜಾಕೋಬ್ & ಕೋ ಕಂಪನಿ ಕೈಗಡಿಯಾದ ವಿಶೇಷತೆಗಳು
* ಗ್ರೇಡ್-5 ಟೈಟಾನಿಯಂ ಬಳಸಿ ನಿರ್ಮಿಸಲಾಗಿದ್ದು, ಇದರ ತೂಕ ಹಗುರವಾಗಿದೆ ಹಾಗೂ ತುಂಬಾ ಗಟ್ಟಿಯಾಗಿದೆ.
* ಅಸ್ಥಿಪಂಜರ (ಸ್ಕೆಲೆಟನ್) ಡಿಸೈನ್ ಹೊಂದಿದ್ದು, ಒಳಭಾಗದ ವಿನ್ಯಾಸ ಸ್ಪಷ್ಟವಾಗಿ ಕಾಣುತ್ತದೆ.
* 50 ಮೀಟರ್‌ವರೆಗೆ ನೀರಿನ ಆಳದವರೆಗೂ ಹೋದರೂ ಯಾವುದೇ ರೀತಿಯ ಡ್ಯಾಮೇಜ್ ಆಗುವುದಿಲ್ಲ.
* ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಸುಮಾರು 70 ಗಂಟೆಗಳ ಬ್ಯಾಕಪ್ ಬರುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ, ಈ ವಾಚ್ ಅಮೆರಿಕಾ ಮೂಲದ ಕಂಪನಿಯದ್ದೇ ಆದರೂ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಂದಲೇ ಇದಕ್ಕೆ ಹೆಚ್ಚು ಪ್ರಚಾರ ಸಿಕ್ಕಂತಾಗಿದೆ ಅಂದ್ರೆ ತಪ್ಪಾಗಲಾರದು. ಅದರಲ್ಲೂ ಇದರಲ್ಲಿ ಶಿವನ ಫೋಟೋ ಕಾಣುವಂತೆ ನಿರ್ಮಿಸಲಾಗಿದ್ದು, ವಿಶೇಷವಾಗಿ ಭಾರತೀಯರ ಗಮನ ಸೆಳೆದಿದೆ. ಯಾಕಂದ್ರೆ, ಶಿವವನ್ನು ಹೆಚ್ಚಾಗಿ ಪೂಜಿಸುವ ರಾಷ್ಟ್ರಗಳಲ್ಲಿ ನಮ್ಮ ಭಾರತ ಮುಂಚೂಣಿಯಲ್ಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.