2026-03-07 01:38:42

Gold Silver Rate Hike | ಚಿನ್ನ ಬೆಳ್ಳಿ ದರ ಏರಿಕೆ ಸ್ವರ್ಣ ಪ್ರಿಯರಿಗೆ ಶಾಕ್‌ ..! | Speed News Kannada

Gold Silver Rate Hike | ಚಿನ್ನ ಬೆಳ್ಳಿ ದರ ಏರಿಕೆ ಸ್ವರ್ಣ ಪ್ರಿಯರಿಗೆ ಶಾಕ್‌ ..! | Speed News Kannada

ಕಳೆದ ಒಂದೆರಡು ವರ್ಷದಿಂದ ಚಿನ್ನದ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆ ಕಾಣುತ್ತಿದ್ದು, ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ದಿನೇ ದಿನೇ ಬೆಲೆ ಏರುತ್ತಲೇ ಇದೆ. ಮೊನ್ನೆಯಷ್ಟೇ ಭಾರೀ ಏರಿಕೆ ಕಂಡಿದ್ದ ಚಿನ್ನ , ಬೆಳ್ಳಿ ದರ ಮತ್ತಷ್ಟು ಏರಿಕೆ ಕಂಡು ಸ್ವರ್ಣ ಪ್ರೀಯರಿಗೆ ಮತ್ತಷ್ಟು ಶಾಕ್‌ ನೀಡಿದೆ. 
ನಿನ್ನೆ ಬೆಂಗಳೂರಿನಲ್ಲಿ 24ಕ್ಯಾರೆಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,431 ರೂ ಗಳಷ್ಟಿತ್ತು. ಇವತ್ತು ಪ್ರತಿ ಗ್ರಾಂಗೆ 540ರೂ. ಏರಿಕೆ ಕಂಡು ಬರೋಬ್ಬರಿ 15,971ರೂ.ಗೆ ತಲುಪಿದೆ. ಇನ್ನು ನಿನ್ನೆಯಷ್ಟೇ ಪ್ರತಿ ಗ್ರಾಮ್‌ 14,145ರೂ. ಇದ್ದ  22ಕ್ಯಾರೆಟ್‌ ಚಿನ್ನದ ಬೆಲೆ 495ರೂ. ಏರಿಕೆ ಕಂಡು 14,640ರೂ. ಆಗಿದೆ.  ಈ ಮೂಲಕ ಮದುವೆ ಸೀಸನ್‌ನಲ್ಲಿ ಚಿನ್ನ ದುಬಾರಿಯಾಗಿ ಆಭರಣಗಳು ಬಡವರ ಪಾಲಿಗೆ ಗಗನ ಕುಸುಮವಾಗಿದೆ. ಜನವರಿ-1ರಿಂದ ಇವತ್ತಿನವರೆಗೂ ಕೇವಲ 23ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಜನವರಿ 1ಕ್ಕೆ ಪ್ರತಿ ಗ್ರಾಂಗೆ 12,380ರೂ. ಇದ್ದ 22 ಕ್ಯಾರೆಟ್‌ ಚಿನ್ನದ ಬೆಲೆ 14,640 ರೂ.ಗೆ ತಲುಪಿದ್ದು, ಪ್ರತಿ ಗ್ರಾಂಗೆ 13,506ರೂ. ಇದ್ದ 24ಕ್ಯಾರೆಟ್‌ ಚಿನ್ನದ ಬೆಲೆ ಇವತ್ತಿಗೆ 15,971ರೂ. ಗೆ ತಲುಪಿದೆ. 

ಕಳೆದ ಐದು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಆದ ಬದಲಾವಣೆ : 
 DATE                      24K                   22K 
ಜ-23, 2026         15,971               14,641 

ಜ-22, 2026         15,431               14,145

ಜ-21, 2026         15,660               14,355

ಜ-20, 2026         14,978                13,730 

ಜ-19, 2026         14,624                13,405

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.