ಕಳೆದ ಒಂದೆರಡು ವರ್ಷದಿಂದ ಚಿನ್ನದ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆ ಕಾಣುತ್ತಿದ್ದು, ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ದಿನೇ ದಿನೇ ಬೆಲೆ ಏರುತ್ತಲೇ ಇದೆ. ಮೊನ್ನೆಯಷ್ಟೇ ಭಾರೀ ಏರಿಕೆ ಕಂಡಿದ್ದ ಚಿನ್ನ , ಬೆಳ್ಳಿ ದರ ಮತ್ತಷ್ಟು ಏರಿಕೆ ಕಂಡು ಸ್ವರ್ಣ ಪ್ರೀಯರಿಗೆ ಮತ್ತಷ್ಟು ಶಾಕ್ ನೀಡಿದೆ.
ನಿನ್ನೆ ಬೆಂಗಳೂರಿನಲ್ಲಿ 24ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,431 ರೂ ಗಳಷ್ಟಿತ್ತು. ಇವತ್ತು ಪ್ರತಿ ಗ್ರಾಂಗೆ 540ರೂ. ಏರಿಕೆ ಕಂಡು ಬರೋಬ್ಬರಿ 15,971ರೂ.ಗೆ ತಲುಪಿದೆ. ಇನ್ನು ನಿನ್ನೆಯಷ್ಟೇ ಪ್ರತಿ ಗ್ರಾಮ್ 14,145ರೂ. ಇದ್ದ 22ಕ್ಯಾರೆಟ್ ಚಿನ್ನದ ಬೆಲೆ 495ರೂ. ಏರಿಕೆ ಕಂಡು 14,640ರೂ. ಆಗಿದೆ. ಈ ಮೂಲಕ ಮದುವೆ ಸೀಸನ್‌ನಲ್ಲಿ ಚಿನ್ನ ದುಬಾರಿಯಾಗಿ ಆಭರಣಗಳು ಬಡವರ ಪಾಲಿಗೆ ಗಗನ ಕುಸುಮವಾಗಿದೆ. ಜನವರಿ-1ರಿಂದ ಇವತ್ತಿನವರೆಗೂ ಕೇವಲ 23ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಜನವರಿ 1ಕ್ಕೆ ಪ್ರತಿ ಗ್ರಾಂಗೆ 12,380ರೂ. ಇದ್ದ 22 ಕ್ಯಾರೆಟ್ ಚಿನ್ನದ ಬೆಲೆ 14,640 ರೂ.ಗೆ ತಲುಪಿದ್ದು, ಪ್ರತಿ ಗ್ರಾಂಗೆ 13,506ರೂ. ಇದ್ದ 24ಕ್ಯಾರೆಟ್ ಚಿನ್ನದ ಬೆಲೆ ಇವತ್ತಿಗೆ 15,971ರೂ. ಗೆ ತಲುಪಿದೆ.
ಕಳೆದ ಐದು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಆದ ಬದಲಾವಣೆ :
DATE 24K 22K
ಜ-23, 2026 15,971 14,641
ಜ-22, 2026 15,431 14,145
ಜ-21, 2026 15,660 14,355
ಜ-20, 2026 14,978 13,730
ಜ-19, 2026 14,624 13,405