ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಮುಂದುವರೆದಿರುವ ಕಾರಣದಿಂದಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಹೆಚ್ಚಿನ ಮಟ್ಟದಲ್ಲಿಯೇ ಇರುವ ನೀರಿಕ್ಷೆ ಇದೆ ಅಂತ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಗುರುವಾರ ಮಂಡಿಸಿರುವ ಆರ್ಥಿಕ ಸಮೀಕ್ಷೆ 2025 26ರ ವರದಿ ಹೇಳಿರುವಂತದ್ದು. ವಿಶ್ವಮಟ್ಟದಲ್ಲಿ ಬಹುಕಾಲ ಉಳಿಯುವಂತಹ ಶಾಂತಿ ಸ್ತಾಪನೆ ಆಗದೆ ಇದ್ದರೆ ವ್ಯಾಪಾರ ಸಮರಕ್ಕೆ ಪರಿಹಾರ ಕಂಡುಕೊಳ್ಳದೆ ಇದ್ದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಕಡಿಮೆ ಆಗದು ಅಂತ ಆರ್ಥಿಕ ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.
ಚಿನ್ನ ಮತ್ತು ಬೆಳ್ಳಿಯ ಬೆಲೆಯು ಏನು ಹಾದಿಯಲ್ಲಿ ಇದೆ ಇವುಗಳು ಬೆಲೆ ಏರಿಕೆಯು ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಹೆಚ್ಚಾಗಿರುವುದನ್ನ ಸುರಕ್ಷಿತ ಹೂಡಿಕೆಗಳಿಗೆ ಬೇಡಿಕೆ ಹೆಚ್ಚಾಗಿರುವುದು ಸಮೀಕ್ಷೆ ಹೇಳುತ್ತಿದೆ. ಆದರೆ ಬೆಳ್ಳಿ ಹಾಗೂ ಚಿನ್ನವು 2025 ರಲ್ಲಿ ಕಂಡಂತಹ ಬೆಲೆ ಏರಿಕೆಯೂ ಬಹುಕಾಲ ಉಳಿಯುವುದಿಲ್ಲ ಕೆಲವು ತಜ್ಞರು ಹೇಳಿರುವುದಾಗಿ ಸಮೀಕ್ಷೆಯು ಉಲ್ಲೇಖಿಸಿರುವಂತದ್ದು.
ಇನ್ನು 2024 ರಿಂದ 25ರಲ್ಲಿ ಭಾರತವು ಆಮದು ಮಾಡಿಕೊಂಡ ಚಿನ್ನದ ಪ್ರಮಾಣವು ಅದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇಕಡಾ 27.4 ರಷ್ಟು ಹೆಚ್ಚಳ ಕಂಡಿರುವಂತದ್ದು ಚಿನ್ನದ ಬೆಲೆಯು ಒಂದು ವರ್ಷದ ಅವಧಿಯಲ್ಲಿ 38.2ರಷ್ಟು ಹೆಚ್ಚಾಗಿದ್ದು ದೇಶದಲ್ಲಿ ಚಿನ್ನದ ಬಳಕೆ ಹೆಚ್ಚಾಗುವುದು ಆಮದು ಹೆಚ್ಚಾಗುವುದಕ್ಕೆ ಇವೆಲ್ಲವೂ ಕಾರಣ ಆಗಿರಬಹುದು ಅಂತ ವರದಿಯಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ ಬೆಳ್ಳಿಯ ಬೆಲೆಯೂ ಸತತ ನಾಲ್ಕನೆಯ ದಿನವು ಏರಿಕೆ ಕಂಡಿರುವಂಥದ್ದು ಗುರುವಾರದ ವೈವಾಟಿನಲ್ಲಿ ದೆಹಲಿಯ ಚಿನಿವಾರ ಪೇಟೆಯಲ್ಲಿ 19500 ರಷ್ಟು ಹೆಚ್ಚಾಗಿದೆ 4 ಲಕ್ಷ 4500 ಕ್ಕೆ ತಲುಪಿದೆ ಅಂತ ಅಖಿಲ ಭಾರತ ಸರಾಪ್ ಅಸೋಸಿಯೇಷನ್ ತಿಳಿಸಿದೆ. ಅಷ್ಟೆ ಅಲ್ಲ ಚಿನ್ನದ ಬೆಲೆ ಹೆಚ್ಚಳದ ಪರಿಣಾಮವಾಗಿ ಮೌಲ್ಯದ ಲೆಕ್ಕದಲ್ಲಿ 2025 ರಲ್ಲಿ ಒಟ್ಟು 7.51 ಲಕ್ಷ ಕೋಟಿ ಬೆಲೆಯ ಚಿನ್ನಕ್ಕೆ ಬೇಡಿಕೆ ಬಂದಿರುವಂತದ್ದು ಇದು ಹಿಂದಿನ ವರ್ಷದಲ್ಲಿ ಬಂದಿದ್ದ ಬೇಡಿಕೆ ಹೋಲಿಸಿದರೆ ಶೇಕಡ 30ರಷ್ಟು ಹೆಚ್ಚಾಗಿದೆ ಅಂತ ಆರ್ಥಿಕ ಸಮೀಕ್ಷೆಯಲ್ಲಿ ವರದಿ ಉಲ್ಲೇಖ ಆಗಿರುವಂತದ್ದು