2026-03-07 01:41:18

Fridge Blast | ಏಕಾಏಕಿ ಫ್ರಿಜ್ ಬ್ಲಾಸ್ಟ್ ಇಡೀ ಮನೆ ಸುಟ್ಟು ಭಸ್ಮ | Speed News Kannaada

Fridge Blast | ಏಕಾಏಕಿ ಫ್ರಿಜ್ ಬ್ಲಾಸ್ಟ್ ಇಡೀ ಮನೆ ಸುಟ್ಟು ಭಸ್ಮ | Speed News Kannaada

ರಾಯಚೂರು: ಮನೆಯಲ್ಲಿದ್ದ ಫ್ರಿಜ್ ಒಂದು ಏಕಾಏಕಿ ಸ್ಪೋಟಗೊಂಡಿದ್ದು, ಇಡೀ ಮನೆ ಹೊತ್ತಿ ಉರಿದ ಶಾಕಿಂಗ್ ಘಟನೆ ರಾಯಚೂರು ಜಿಲ್ಲೆಯ ಸಾಲಗುಂದಾ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ರಾಜನಾಯ್ ಎಂಬುವರ ಮನೆಯಲ್ಲಿ ಫ್ರಿಜ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿದೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಾಜನಾಯ್ ಕುಟುಂಬ ನಿನ್ನೆ ಸಿರಗುಪ್ಪಗೆ ತೆರಳಿತ್ತು. ಈ ವೇಳೆ ಮನೆಯಲ್ಲಿದ್ದ ಫ್ರಿಜ್ ಏಕಾಏಕಿ ಸ್ಪೋಟಗೊಂಡಿದೆ. ಇದರಿಂದಾಗಿ ಮನೆಯ ಗೋಡೆ ಹಾಗೂ ಛಾವಣಿಯೂ ಕುಸಿದಿದೆ. ಜೊತೆಗೆ ಇಡೀ ಮನೆಗೆ ಬೆಂಕಿ ಆವರಿಸಿದೆ.
ಮನೆಯಲ್ಲಿದ್ದ 2.5 ಲಕ್ಷ ರೂ. ನಗದು ಸೆರಿದಂತೆ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಫ್ರಿಜ್ ಬಳಕೆದಾರರಲ್ಲಿ ಆತಂಕ ಮೂಡಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.