ಬಿಗ್ ಬಾಸ್ ನಿಂದ ಫೇಮಸ್ ಆಗಿರೋ ಡಾಗ್ ಸತೀಶ್ ಹೇಗಾದ್ರೂ ಮಾಡಿ ತಮ್ಮ ಹೆಸರು ಚಾಲ್ತಿಯಲ್ಲಿ ಇರಬೇಕು ಎಂದು ಒಂದರ ಮೇಲೊಂದು ಮನಸ್ಸಿಗೆ ಬಂದಂತೆ ಮಾತನಾಡ್ತಿರೋದು ಎಲ್ಲರಿಗೂ ಗೊತ್ತಿರುವಂಥದ್ದೇ. ಬಾಯಿ ಬಿಟ್ಟರೆ, ಕೋಟಿಯಲ್ಲಿಯೇ ಮಾತನಾಡುವ ಡಾಗ್ ಸತೀಶ್, ತಾವು ಅಂದುಕೊಂಡಷ್ಟು ಫೇಮಸ್ ಆಗಿಲ್ಲ. ಇದೀಗ ದರ್ಶನ್ ಅವರ ಬಗ್ಗೆ ವಿವಾದ ಸೃಷ್ಟಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
ಅಷ್ಟಕ್ಕೂ ಡಾಗ್ ಸತೀಶ್ ಅವರಿಗೆ ಜೈಲು ಹೊಸತೇನಲ್ಲ. ಆದರೆ, ಇದೀಗ ಸುದ್ದಿ ಮಾಡ್ತಿರೋದು ಡಾಗ್ ಸತೀಶ್ ಅಲ್ಲ, ಬದಲಿಗೆ ಅವರ ಮಗ. ಅಂದರೆ ಡಾಗ್ ಸತೀಶ್ ತಮ್ಮ ಮಗನನ್ನು ವಿಶ್ವದ ನಂಬರ್ 2 ನಾಯಕ ನಟ ಮಾಡುವುದಾಗಿ ಘೋಷಿಸಿದ್ದಾರೆ. ಅದಕ್ಕೆ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ, ಹರ್ಷ್ ಅವರಿಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದಾರೆ ಎನ್ನುವ ಪೋಸ್ಟ್ ಸದ್ದು ಮಾಡುತ್ತಿದೆ. ಅದಕ್ಕಾಗಿಯೇ ಚಿತ್ರತಂಡ ರಚಿತಾ ಅವರಿಗೆ ಒಂದು ಕೋಟಿ ರೂಪಾಯಿ ಆಫರ್ ಕೊಟ್ಟು ಬುಕಿಂಗ್ ಮಾಡಿಕೊಂಡಿದೆ ಎಂಬ ಅಂತೆಕಂತೆ ಸುದ್ದಿಗಳು ಹರಿದಾಡುತ್ತಿದೆ.
ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್ ತಮ್ಮ ಮಗ ಹರ್ಷ್ ಅವರನ್ನು ನಾಯಕನನ್ನಾಗಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹರ್ಷ್‌ಗೆ ನಾಯಕಿಯಾಗಿ ನಟಿ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ಇದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ.