2026-06-08 02:44:05

india gave permission to docking of ship of iran Speed News Kannada

india gave permission to docking of ship of iran  Speed News Kannada


ನವದೆಹಲಿ: ಇರಾನ್‌ ರಾಷ್ಟ್ರದ ಐರಿಸ್ ಡೆನಾ ಹಡಗನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಹೊಡೆದುರುಳಿಸಿದ ಕೆಲವೇ ದಿನಗಳ ಮುನ್ನ ಮತ್ತೊಂದು ಇರಾನ್ ನ ಹಡಗಿಗೆ ಕೊಚ್ಚಿ ಬಂದರಿನಲ್ಲಿ ನಿಲುಗಡೆಗೆ ಭಾರತ ಅವಕಾಶ ನೀಡಿತ್ತು ಎಂದು ತಿಳಿದು ಬಂದಿದೆ.
ಐರಿಸ್ ಲವನ್ ಹಡಗಿನಲ್ಲಿ ತುರ್ತು ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ನೆರವಿಗಾಗಿ ಇರಾನ್ ಮನವಿ ಮಾಡಿಕೊಂಡಿತ್ತು. ಮಾರ್ಚ್ 1ರಂದು ಡಾಕಿಂಗ್‌ ಗೆ ಅನುಮತಿ ನೀಡಲಾಗಿತ್ತು ಎಂದು ಮೂಲಗಳು ಖಚಿತಪಡಿಸಿವೆ. ಹಡಗಿನ ಸಿಬ್ಬಂದಿಗೆ ಕೊಚ್ಚಿ ನೌಕಾ ನೆಲೆಯಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಲೂ ಇರಾನಿನ ಆ ಹಡಗು ಕೊಚ್ಚಿಯಲ್ಲಿಯೇ ಇದೆ. 183 ಸಿಬ್ಬಂದಿಗೆ ಕೊಚ್ಚಿಯ ನೌಕಾ ಸೌಲಭ್ಯಗಳಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇರಾನ್‌ನ ಐರಿಸ್ ಡೇನಾ ಹಡಗನ್ನು ಅಮೆರಿಕ ಮುಳುಗಿಸಿದ ಒಂದು ದಿನದ ಮೊದಲು ಇರಾನ್ ಕಡೆಯಿಂದ ಭಾರತಕ್ಕೆ ಮನವಿ ಬಂದಿತ್ತು. ವಿಶಾಖಪಟ್ಟಣದಲ್ಲಿ ಯುದ್ಧ ತಾಲೀಮಿನಲ್ಲಿ ಪಾಲ್ಗೊಂಡ ಬಳಿಕ ಐರಿಸ್ ಡೇನಾ ಹಡಗು ಇರಾನ್‌ಗೆ ಹಿಂದಿರುಗುತ್ತಿತ್ತು. ಬುಧವಾರ ನಡೆದ ಈ ದಾಳಿಯಲ್ಲಿ 87 ನಾವಿಕರು ಮೃತಪಟ್ಟಿದ್ದರು.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದು, ನೌಕೆಗೆ ಅನುಮತಿ ನೀಡುವ ಮೂಲಕ ನಾವು ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.