ವಡೋದರಾ: 2026ರ ಮಹಿಳಾ ಪ್ರೀಮಿಯರ್ ಲೀಗ್ ,(WPL) ಮುಕ್ತಾಯ ಹಂತ ತಲುಪಿದ್ದು ಫೈನಲ್‌ಗೆ ಉಭಯ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿ ಸುತ್ತಿಗೆ ಸೆಣಸಾಡಲಿವೆ. ನಾಳೆ ವಡೋದರಾದ ಬಿಸಿಎ ಸ್ಟೇಡಿಯಂ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಭಾರಿ ಬೆಂಗಳೂರು ತಂಡ ಲೀಗ್ ಹಂತದಲ್ಲಿ ಹೆಚ್ಚು ಪಂದ್ಯವನ್ನು ಗೆದ್ದು ಫೈನಲ್ ಮೊದಲ ತಂಡವಾಗಿ ಪ್ರವೇಶಿಸಿದರೆ ಡೆಲ್ಲಿ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗುಜುರಾತ್ ಜೈಂಟ್ಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದೆ.
ಸತತ 4ನೇ ಫೈನಲ್ ತಲುಪಿದ ಡೆಲ್ಲಿ:
ಮೊದಲ ಆವೃತ್ತಿಯಿಂದಲೂ ಫೈನಲ್‌ನಲ್ಲಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿದ ಮೂರು ಫೈನಲ್‌ನಲ್ಲಿ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಈ ಸೀಸನ್ ಆರಂಭ ಕಳಪೆಯಾಗಿತ್ತು. ಸತತ ಎರಡು ಪಂದ್ಯಗಳನ್ನು ಸೋತಿದ್ದ ಡೆಲ್ಲಿ, ಅಂತಿಮವಾಗಿ ತನ್ನ ಮೂರನೇ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿತು. ಆದಾಗ್ಯೂ, ಜೆಮಿಮಾ ನೇತೃತ್ವದ ಫ್ರಾಂಚೈಸಿ ಬಲವಾದ ಪುನರಾಗಮನವನ್ನು ಮಾಡಿ ಎಲಿಮಿನೇಟರ್‌ನಲ್ಲಿ ಸ್ಥಾನ ಪಡೆದುಕೊಂಡಿತು. ಆದರೆ ಎದುರಾಳಿ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಲೀಗ್ ಹಂತದಲ್ಲಿ ಆಡಿದ್ದ ಎರಡು ಪಂದ್ಯಗಳನ್ನು 4 ರನ್ ಮತ್ತು 3 ರನ್‌ಗಳಿಂದ ಸೋತಿದ್ದ ಡೆಲ್ಲಿ, ಎಲಿಮಿನೇಟರ್ ನಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಸತತ 4ನೇ ಬಾರಿ ಪ್ರಶಸ್ತಿ ಹಂತಕ್ಕೆ ತಲುಪಿರುವ ಡೆಲ್ಲಿ ತಂಡ ಈ ಆವೃತ್ತಿಯಲ್ಲಿ ಈ ಮೂಲಕ ಎಲ್ಲಾ ಸೀಸನ್ಗಳಲ್ಲೂ ಫೈನಲ್ ತಲುಪಿದ ಏಕೈಕ ತಂಡ ಎನಿಸಿಕೊಂಡಿದೆ. ಈ ಹೆಗ್ಗಳಿಕೆಯೊಂದಿಗೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ
ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿ ಮಂಧಾನ ಪಡೆ:
2026ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹೆಚ್ಚು ಅಂಕ ಪಡೆದು ಫೈನಲ್‌ಗೆ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಪೈನಲ್ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಈಗಾಗಲೇ 2024ರಲ್ಲಿ ಇದೇ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಅದೇ ರೀತಿ ಈ ಬಾರಿಯೂ ಮತ್ತೆ ಉಭಯ ತಂಡಗಳು ಮುಖಮುಖಿ ಆಗಿದ್ದು ಬೆಂಗಳೂರು ತಂಡ ಮತ್ತೆ ಸೋಲಿಸಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.
ಫೈನಲ್: ಡೆಲ್ಲಿ-ಬೆಂಗಳೂರು ತಂಡಗಳು 2ನೇ ಬಾರಿ ಮುಖಾಮುಖಿ:
2026ರ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಕ್ಕೆ ನಾಳೆ ವಡೋದರಾದ ಬಿಸಿಎ ಸ್ಟೇಡಿಯಂ ಸಜ್ಜಾಗಿದ್ದು, ಡೆಲ್ಲಿ ಮತ್ತು ಬೆಂಗಳೂರು ತಂಡಗಳು 2ನೇ ಬಾರಿ ಮುಖಾಮುಖಿ ಆಗುತ್ತಿದ್ದು, ಮೊದಲ ಬಾರಿ ಬೆಂಗಳೂರು ತಂಡ ಡೆಲ್ಲಿ ತಂಡವನ್ನು ಸೋಲಿಸಿ 2024ರ ಚಾಂಪಿಯನ್ ಆಗುತ್ತು, ಈ ಬಾರಿಯೂ ಅದೇ ರೀತಿ ಸೋಲಿಸಿ ಮತ್ತೊಮ್ಮೆ ಚಾಂಪಿಯನ್ ಆಗುವ ಆಸೆಯಲ್ಲಿದೆ. ಆದರೆ ಕ್ಯಾಪಿಟಲ್ಸ್ ತಂಡವು ಬೆಂಗಳೂರು ತಂಡದ ಜೊತೆ ಸೇಡಿನ ಪ್ರತೀಕಾರವನ್ನು ತೀರಿಸಿಕೊಂಡು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದೆ.