ಉಡುಪಿ : ಕೃಷ್ಣನಗರಿ ಉಡುಪಿಯಲ್ಲಿ ಮಚ್ಚು ಹಾಗೂ ಲಾಂಗು ಸದ್ದು ಮಾಡಿದ್ದು, ಕಾಂಗ್ರೆಸ್ ಯುವ ಮುಖಂಡನ ಮೇಲೆ ಹಲ್ಲೆ ನಡೆಸಲಾಗಿದೆ.ನಗರದ ಪಿಪಿಸಿ ಕ್ರಾಸ್ ಬಳಿ ದಾಳಿ ನಡೆಸಲಾಗಿದ್ದು, ಮಾತುಕತೆಗೆಂದು ಕರೆಸಿ ಅಟ್ಯಾಕ್ ಮಾಡಲಾಗಿದೆ.
NSUI ಉಪಾಧ್ಯಕ್ಷ ಶರತ್ ಕುಂದರ್ ಗಂಭೀರ ಗಾಯಗೊಂಡಿದ್ದು, 6-7 ದುಷ್ಕರ್ಮಿಗಳ ತಂಡದಿಂದ ದಾಳಿ ನಡೆದಿದೆ. ಮಣಿಪಾಲ ಹೋಟೆಲ್‌ನಲ್ಲಿ ನಡೆದ ಗಲಾಟೆಯ ಮುಂದುವರಿದ ಭಾಗವಾಗಿ ಈ ಘಟನೆ ನಡೆದಿರುವ ಮಾಹಿತಿ ಇದೆ.
ಟಾಟಾ ಸಫಾರಿ, ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಆರೋಪಿಗಳು, ತಲ್ವಾರಿನಿಂದ ದಾಳಿ ನಡೆಸಿ ಕೊಲೆ ಯತ್ನ ನಡೆಸಿದ್ದಾರೆ. ಜೊತೆಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಖಾಕಿ ಹುಡುಕಾಟ ನಡೆಸುತ್ತಿದ್ದು, ಘಟನೆ ಸಂಬಂಧ ತನಿಖೆ ಮುಂದುವರಿದಿದೆ. ರಾಜಕೀಯ ಕಾರಣವೂ ಒಳಗೊಂಡಂತೆ ವೈಯಕ್ತಿಕ ದ್ವೇಷಕ್ಕೆ ಅಟ್ಯಾಕ್ ನಡೆದಿದೆ ಎಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.