2026-03-07 01:49:06

Complaint Alleging Corruption And Violation Of Government Rules | ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ನೆಡೆದ ಭ್ರಷ್ಟಾಚಾರ ಹಾಗೂ ಸರ್ಕಾರದ ನಿಯಮ ಉಲ್ಲಂಘಿನೆ ಎಂದು ದೂರು! | SNK

Complaint Alleging Corruption And Violation Of Government Rules | ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ನೆಡೆದ  ಭ್ರಷ್ಟಾಚಾರ ಹಾಗೂ ಸರ್ಕಾರದ ನಿಯಮ ಉಲ್ಲಂಘಿನೆ ಎಂದು ದೂರು! | SNK

ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಸರ್ಕಾರದ ಸುತ್ತೋಲೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ  ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುತ್ತಿದ್ದು , ಜೂರಿ ಆಗಿ ಆಯ್ಕೆಯಾಗಿರುವ ವ್ಯಕ್ತಿಗಳ ಚಿತ್ರಗಳನ್ನ ಆಯ್ಕೆ ಮಾಡಿದ್ದಾರೆ ಎಂದು ನಿರ್ಮಾಪಕ, ನಿರ್ದೇಶಕ, ಸಾಮಾಜಿಕ ಹೋರಾಟಗಾರರು,
ಸಂವಿಧಾನ ಸಿನಿ ಕಂಬೈನ್ಸ್ ನ ಟೈಗರ್ ನಾಗ್ ದೂರು ನೀಡಿದ್ದಾರೆ.

1) ಮೂಢನಂಬಿಕೆ ಹಾಗೂ ವಾಮಾಚಾರ ಪ್ರಚೋದಿಸುವ ಕಾಂತರಾ ಚಿತ್ರ ಆಯ್ಕೆ ಮಾಡಿಕೊಂಡಿರುವುದು ಕರ್ನಾಟಕ ರಾಜ್ಯ ಪತ್ರ ಅಧಿಕೃತ ಪ್ರಕಟಿಸಲಾದ ವಿಶೇಷ ರಾಜ್ಯ ಪತ್ರಿಕೆಯ ಕಾಲಂ ಮೂರರಲ್ಲಿ ಉಲ್ಲೇಖಿಸಿರುವಂತೆ ಅಪರಾಧ ಕೃತ್ಯವಾಗಿದ್ದು ಭಾರತೀಯ ದಂಡ ಸಂಹಿತೆ 1860 ಕೇಂದ್ರ ಅಧಿನಿಯಮ 45 3ನೇ ಪ್ರಕರಣದಂತಹ  ದಂಡನೀಯವಾದ ಅಪರಾಧವು  ಆಗಿರುತ್ತದೆ ಇಂಥ ಅಂಶಗಳು ಅತಿ ಹೆಚ್ಚು ಇರುವ ಕಾಂತಾರ ಚಿತ್ರ ಆಯ್ಕೆ ಕರ್ನಾಟಕ ರಾಜ್ಯ ಪತ್ರದಂತೆ ಕಾನೂನು ಉಲ್ಲಂಘನೆ ಮಾಡಿರುವಂತ ಪ್ರಕರಣವಾಗಿದೆ,

 2) ಕನ್ನಡ ಸ್ಪರ್ಧಾತ್ಮಕ ವಿಭಾಗಕ್ಕೆ ಪ್ಯಾನಲ್ ಜೂರಿ ಆಗಿದ್ದ J G Krishna ಅವರು ತಮ್ಮ ಮಗ ಕೃಷ್ಣ ದೀಪಕ್ ಕ್ಯಾಮರಾಮನ್ ಆಗಿ ಕೆಲಸ ಮಾಡಿರುವ  ಲವ್ ಯು ಮುದ್ದು (love you dear) ಕನ್ನಡ ಸಿನೆಮಾವನ್ನು ಆಯ್ಕೆ ಮಾಡಿದ್ದಾರೆ.

3) ಕರ್ನಾಟಕ ಚಲನಚಿತ್ರ ಅಕಾಡೆಮಿ ಯ ಸದಸ್ಯರಾದ ಡಿಸಿಲ್ವಾ ಅವರು ಅಭಿನಯಿಸಿರುವ ನಮ್ ಶಾಲಿ (our school) ಸಿನೆಮಾವನ್ನು ಮೂರು ವಿಭಾಗಕ್ಕೆ ಅಂದರೆ ಕನ್ನಡ , ಇಂಡಿಯಾ , ಏಷ್ಯಾ ವಿಭಾಗಕ್ಕೆ ಆಯ್ಕೆ ಮಾಡಲಾಗಿದೆ .

ಇದು ಅಕಾಡೆಮಿ ಯ ಬೈ ಲಾ ಮತ್ತು guidelines ಗೆ ವಿರುದ್ಧವಾಗಿದೆ ಅಲ್ಲದೇ ಸ್ವಜನಪಕ್ಷಪಾತ (nepotism) ಆಗಿದೆ, 

ಇದಲ್ಲದೆ ಪ್ರತಿವರ್ಷ ಚಲನಚಿತ್ರ ಅಕಾಡೆಮಿಗೆ ನೀಡುವ ಏಳು ಕೋಟಿ ಹಣವನ್ನು ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಸರ್ಕಾರದ ಪಾರದರ್ಶಕ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ವ್ಯಸಗಿರುತ್ತಾರೆ, 

4) ಕಲಾತ್ಮಕ ನಿರ್ದೇಶಕ ಮುರುಳಿ ಅವರು ಯಾವುದೇ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣ ಮಾಡದ ಸಿನಿಮಾಗೆ ಸಂಬಂಧಪಟ್ಟ ಹಾಗೆ ಯಾವುದೇ ಅನುಭವವಿಲ್ಲದ ಈ ಹಿಂದೆ ಪಾಸ್ ವಿತರಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಲಾತ್ಮಕ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡು ಇರುವುದು ಕನ್ನಡ ಚಿತ್ರರಂಗದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಮಾಡಿದಂತಾಗಿದೆ ಚಿತ್ರರಂಗದಲ್ಲಿ ಅನೇಕ ರಾಜ್ಯ ರಾಷ್ಟ್ರೀಯ ಪ್ರಶಸ್ತಿ ಪಡೆದಂತ ನಿರ್ದೇಶಕರುಗಳಿದ್ದಾರೆ, ಅವರೆಲ್ಲರನ್ನೂ ಮರೆತು ಹೊರಡಿಸಿ ಮುರಳಿ ಅವರನ್ನು ಆಯ್ಕೆ ಮಾಡಿಕೊಂಡಿರುವುದು ಕೂಡ  ಕರ್ನಾಟಕ ಚಲನಚಿತ್ರ ಅಕಾಡೆಮಿಯು  ಲೋಪವ್ಯಸಗಿದ್ದಂತಾಗಿದೆ,

ಈಗಾಗಲೇ ಟೈಗರ್ ನಾಗ್ ನಿರ್ಮಾಪಕ ನಿರ್ದೇಶಕ ಸಾಮಾಜಿಕ ಹೋರಾಟಗಾರ ಸಂವಿಧಾನ ಸಿನಿ ಕಂಬೈನ್ ಆದ ನಾನು ಭ್ರಷ್ಟಾಚಾರ ತನಿಖೆ ನಡೆಸಲು ಗೌರವಾನ್ವಿತ ರಾಜ್ಯಪಾಲರಿಗೆ ಹಾಗೂ ಸರ್ಕಾರಕ್ಕೆ ಮತ್ತು ಸಹಕಾರ ಸಂಘಗಳ ನಿಬಂಧಕರು ಮನವಿ ಸಲ್ಲಿಸಿರುತ್ತೇನೆ ಸಹಕಾರಿ ಸಂಘಗಳ ಜಂಟಿ ನಿಬಂಧಕರು ಈಗಾಗಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಹಕಾರ ಸಂಘಗಳ ಉಪ ನಿಬಂಧಕರು  4ನೇ ವಲಯ ಬೆಂಗಳೂರು ನಗರ ಜಿಲ್ಲೆ, ಇವರಿಗೆ ಆದೇಶ ಹೊರಡಿಸಿದ್ದು , ಇಲ್ಲಿಯವರೆಗೂ ಯಾವುದೇ ಪ್ರಯೋಜನ ಕಂಡುಬಂದಿಲ್ಲ, ತನಿಖೆ ನಡೆಸಿದೆ ಹೋದರೆ ಸಂವಿಧಾನಬದ್ಧವಾಗಿ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ ಈ ಹಿಂದೆ ಇಂತಹದೇ ಪ್ರಕರಣ ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ನಡೆದಿತ್ತು ಸೆನ್ಸಾರ್ ಅಧಿಕಾರಿಯಾಗಿದ್ದ ಪ್ರಶಾಂತ್ ಸೆನ್ಸರ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗ ಸಿಬಿಐ ಡ್ರಾಪ್ ಮಾಡಿಸುವ ಮೂಲಕ ಚಿತ್ರರಂಗದ ಪರ ಹೋರಾಟ ಮಾಡಿ ಯಶಸ್ವಿಯಾಗಿದ್ದೆ ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ನಡೆದಿರುವ ಭ್ರಷ್ಟಾಚಾರ ಕೂಡ ಒರ ತರಲು ಎಲ್ಲಾ ರೀತಿಯ ಸಂವಿಧಾನ ಹೋರಾಟಕ್ಕೂ ಸಿದ್ಧ ಎಂದು ತಮ್ಮೆಲ್ಲರಿಗೂ ತಿಳಿಸಲು ಬಯಸುತ್ತಾರೆ.

ಇನ್ನೂಂದು ದೊಡ್ಡ ಅನಾನುಕೂಲ ಬದಲಾವಣೆ ಏನೆಂದರೆ, ಆರಂಭದಿಂದಲೂ ಒರಿಯನ್ ಮಾಲ್ ನಲ್ಲಿ ಪ್ರತಿವರ್ಷ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದ್ದು ಈ ಬಾರಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಒಡೆತನದ ಲೂಲ್ಲು ಮಾಲ್ ನಲ್ಲಿ ನಡೆಸಲು ಅಧ್ಯಕ್ಷರಾದ ಸಾಧುಕೋಕಿಲ ಮುಂದಾಗಿದ್ದು ಹಲವು ಗೊಂದಲಗಳಿಗೂ ಕಾರಣವಾಗಿದೆ, ಮೆಟ್ರೋ ಸೌಲಭ್ಯದಿಂದ ಹಿಡಿದು ಎಲ್ಲಾ  ರೀತಿ ಸೌಕರ್ಯ ಇದ್ದರು ಏಕಾಯಕಿ ಬದಲಾವಣೆ ಮಾಡಿರುವುದು ಇದೊಂದು ರಾಜಕೀಯವಾಗಿದೆ , ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.