2026-03-07 01:44:39

Chamundi hill road | SNK ಚಾಮುಂಡಿ ಬೆಟ್ಟದ ರಸ್ತೆ ಬಂದ್‌ ಆಗಿದ್ದ ಈಗ ಓಪನ್! SNK

Chamundi hill road | SNK ಚಾಮುಂಡಿ ಬೆಟ್ಟದ ರಸ್ತೆ ಬಂದ್‌ ಆಗಿದ್ದ ಈಗ ಓಪನ್! SNK

ಮೈಸೂರು: ಚಾಮುಂಡಿಯನ್ನು ನೋಡಲು ಜನ  ಇಲ್ಲಿ ಬರದೇ ಇರಲಾರರು, ಆದರೆ ಅಲ್ಲಿ ಹೋಗ್ಬೇಕೆಂದರೆ ಬೆಟ್ಟ ಹತ್ತಬೇಕು. ಬೆಟ್ಟ ಹತ್ತೋಕೆ  ಹಿರಿಯರಿಗೆ ಮತ್ತು ಕಿರಿಯರಿಗೆ ಕಷ್ಟ. ಆದರೆ ಈಗ ಆ ಕಷ್ಟ ಇಲ್ಲ. ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡಿನ ಅಧಿದೇವತೆ ತಾಯಿ ಚಾಮುಂಡಿ ದರ್ಶನ ಪಡೆದ ನಂತರ ನಂದಿಯನ್ನು ನೋಡಬೇಕು ಎಂದುಕೊಂಡರೂ ಕಳೆದ ಅನೇಕ ವರ್ಷಗಳಿಂದ ಅದು ಸಾಧ್ಯವಾಗುತ್ತಿರಲಿಲ್ಲ.
ಹೌದು, ಸುಮಾರು 5-6 ವರ್ಷಗಳಿಂದ ವಾಹನಗಳಿಗೆ ನಿರ್ಬಂಧವಿದ್ದ ನಂದಿ ರಸ್ತೆಯು ಕೊನೆಗೂ ಈಗ ಸಂಚಾರ ಮುಕ್ತವಾಗಿದ್ದು, ಅನೇಕ ವರ್ಷಗಳ‌ ನಂತರ ಕೊನೆಗೆ ಸಂಚಾರ ಭಾಗ್ಯ ದೊರಕಿದೆ. 2019-20 ರಲ್ಲಿ ಸುರಿದ ಭಾರಿ ಮಳೆಗೆ ಚಾಮುಂಡಿ ಬೆಟ್ಟದ ನಂದಿಗೆ ತೆರಳುವ ಮಾರ್ಗ ರಸ್ತೆಯು ಕುಸಿದಿತ್ತು. ಆ ಸಮಯದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
 ಆದರೆ ಈಗ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿಯ ನಂತರ ನಂದಿಯನ್ನು ದರ್ಶನ ಮಾಡಬೇಕು ಎಂದುಕೊಳ್ಳುವವರಿಗೆ ಗುಡ್ ನ್ಯೂಸ್ ಒಂದಿದೆ. ಚಾಮುಂಡಿ ಬೆಟ್ಟದ ನಂದಿಗೆ ಹೋಗುವ ರಸ್ತೆ 6 ವರ್ಷಗಳ ನಂತರ ವಾಹನ ಸಂಚಾರಕ್ಕೆ ತೆರೆಯಲಾಗಿದೆ, ಪ್ರವಾಸಿಗರು ಈಗ ನಂದಿಯನ್ನು ಸುಲಭವಾಗಿ ವೀಕ್ಷಿಸಬಹುದು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.