ಬೆಂಗಳೂರು: ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ ನಿಂತಲ್ಲೇ ನಿಲ್ಲುತ್ತಿಲ್ಲ. ದಿನವಿಡೀ ಹಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳನ್ನು ಭೇಟಿ ಮಾಡುತ್ತಾ ಅವರುಗಳ ಆಶೀರ್ವಾದ ಪಡೆಯುತ್ತಿದ್ದಾರೆ.
ಇದೀಗ ಗಿಲ್ಲಿ ತಾನೂ ಓದಿದ ಶಾಲೆಗೆ ಭೇಟಿ ನೀಡಿದ್ದು, ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಂಡೂರಿನ ಪ್ರೌಢಶಾಲೆಯಲ್ಲಿ ಗಿಲ್ಲಿ ನಟ ವಿದ್ಯಾಭ್ಯಾಸ ಮಾಡಿದ್ದು, ಇಂದು (ಜನವರಿ 24) ಗಿಲ್ಲಿ ನಟ ತಮ್ಮ ಹಳೆಯ ಶಾಲೆಗೆ ಭೇಟಿ ನೀಡಿದ್ದಾರೆ.
ಶಾಲೆಯ ಮಕ್ಕಳು, ಶಿಕ್ಷಕರೊಂದಿಗೆ ಫೋಟೋಗಳನ್ನು ಸಹ ತೆಗೆಸಿಕೊಂಡಿದ್ದಾರೆ. ಗಿಲ್ಲಿ ನಟನ ಸಾಧನೆ ಕಂಡು ಶಿಕ್ಷಕರು ಶುಭ ಹಾರಿಸಿದ್ದಾರೆ. ನಮ್ಮೂರಿನ ನಮ್ಮ ಶಾಲೆಗೆ ಕೀರ್ತಿ ತಂದ ಗಿಲ್ಲಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸ್ವಾಗತಿಸಿ ಖುಷಿಯಿಂದ ಫೋಟೊ ಕ್ಲಿಕ್ಕಿಸಿಕೊಂಡರು.
ಶಾಲೆಯ ಕೊಠಡಿಗೆ ಭೇಟಿ ನೀಡಿದ ಗಿಲ್ಲಿ ನಟರಾಜ್ ತಾನೂ ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಕುಳಿತು ಹಳೆಯ ದಿನಗಳನ್ನು ನೆನಪಿಸಿಕೊಂಡರು.