2026-03-07 01:39:07

Bengaluru Clean Survey | ಬೆಂಗಳೂರು ಸ್ವಚ್ಛ ಸರ್ವೇಕ್ಷಣ 2025-26 ಸಿಬ್ಬಂದಿ ಒಟ್ಟಾಗಿ ಕಾರ್ಯ ನಿರ್ವಹಿಸಲು ಉತ್ತರ ನಗರ ಪಾಲಿಕೆಯ ಆಯುಕ್ತರ ಕರೆ | Speed News Kannada

Bengaluru Clean Survey | ಬೆಂಗಳೂರು ಸ್ವಚ್ಛ ಸರ್ವೇಕ್ಷಣ 2025-26 ಸಿಬ್ಬಂದಿ ಒಟ್ಟಾಗಿ ಕಾರ್ಯ ನಿರ್ವಹಿಸಲು  ಉತ್ತರ ನಗರ ಪಾಲಿಕೆಯ ಆಯುಕ್ತರ ಕರೆ | Speed News Kannada

ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಅಧಿಕಾರಿಗಳು, ನೌಕರರು, ಮಾರ್ಷಲ್‌ಗಳು ಹಾಗೂ ಪೌರಕಾರ್ಮಿಕರು ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಯಲಹಂಕ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಇನ್ನೆರಡು ತಿಂಗಳಲ್ಲಿ ಪೂರ್ಣ ಅಂಕಗಳ ದಾಖಲೆ ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ಸಿಬ್ಬಂದಿಗಳ ಸಮನ್ವಯ ಅಗತ್ಯವಿದೆ ಎಂದರು.
ಸಮೀಕ್ಷೆಯ ಪ್ರಮುಖ ಅಂಶಗಳು:
ಘನ ತ್ಯಾಜ್ಯ ನಿರ್ವಹಣೆ
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ
ಮಳೆ ನೀರುಗಾಲುವೆಗಳ ಡಿ-ಸಿಲ್ಟಿಂಗ್
ಕೆರೆ, ಉದ್ಯಾನವನಗಳ ಸ್ವಚ್ಛತೆ
ತ್ಯಾಜ್ಯ ನೀರು ಮರುಬಳಕೆ
ಪೌರಕಾರ್ಮಿಕರ ಕಲ್ಯಾಣ ಮತ್ತು ಆರೋಗ್ಯ
ಸಾರ್ವಜನಿಕರ ಅಭಿಪ್ರಾಯ
ಯಾಂತ್ರೀಕೃತ ಸ್ವಚ್ಛತಾ ಯಂತ್ರಗಳ ಬಳಕೆ
ಹೊಸ ಬ್ಲೋಯಿಂಗ್ ಹಾಗೂ ಸಕ್ಕಿಂಗ್ ಯಂತ್ರಗಳನ್ನು ಬಳಕೆಗೆ ತರಲಾಗಿದೆ. ಪೌರಕಾರ್ಮಿಕರು ಯಂತ್ರಗಳ ಬಳಕೆಯಲ್ಲಿ ನೈಪುಣ್ಯತೆ ಪಡೆದು, ಇತರರಿಗೆ ಮಾರ್ಗದರ್ಶನ ನೀಡುವ “ಮಾಸ್ಟರ್ ಟ್ರೈನರ್”ಗಳಾಗಬೇಕು ಎಂದು ಸೂಚನೆ ನೀಡಿದರು.
ಪೌರಕಾರ್ಮಿಕರ ಆರೋಗ್ಯಕ್ಕೆ ಆದ್ಯತೆ
ಪೌರಕಾರ್ಮಿಕರ ಆರೋಗ್ಯ ಕಾಪಾಡಲು ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿದೆ. ಆರೋಗ್ಯ ಅಧಿಕಾರಿಗಳು ಸಹಕಾರ ನೀಡಲಿದ್ದು, ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲಾಗುತ್ತಿದೆ.
ಬ್ಲಾಕ್ ಸ್ಪಾಟ್ ಮುಕ್ತ ನಗರ
ನಗರದಲ್ಲಿ ಎಲ್ಲಿಯೂ ಬ್ಲಾಕ್ ಸ್ಪಾಟ್ ಕಾಣದಂತೆ ಕ್ರಮವಹಿಸಿ, ನಾಗರಿಕರ ಪ್ರಶಂಸೆಗೆ ಪಾತ್ರವಾಗಬೇಕು ಎಂದು ಕರೆ ನೀಡಿದರು.
ಫೋನ್-ಇನ್ ಕಾರ್ಯಕ್ರಮದಲ್ಲಿ ಬಂದ ದೂರುಗಳಿಗೆ ತ್ವರಿತ ಸ್ಪಂದನೆ ನೀಡಲು ಸೂಚನೆ ನೀಡಲಾಗಿದೆ.
ಸ್ಕೈವಾಕ್ ಪ್ರದೇಶಗಳಲ್ಲಿ ಕಂಡುಬರುವ ಎಲ್ಲೋ ಸ್ಪಾಟ್ ಮತ್ತು ರೆಡ್ ಸ್ಪಾಟ್ ಪ್ರಕರಣಗಳ ಮೇಲೆ ಕಣ್ಗಾವಲು ಇಟ್ಟು, ನಿಯಮಾನುಸಾರ ದಂಡ ವಿಧಿಸಲು ಮಾರ್ಷಲ್‌ಗಳಿಗೆ ಸೂಚನೆ.
ನಿತ್ಯ ಸ್ವಚ್ಛತೆ ನಮ್ಮ ಗುರಿ
ಸ್ವಚ್ಛತಾ ಕಾರ್ಯಗಳು ಕೇವಲ ಸಮೀಕ್ಷೆಗಾಗಿಯೇ ಅಲ್ಲ, ನಿತ್ಯ ಕಾಯಕವಾಗಿ ಅಳವಡಿಸಿಕೊಳ್ಳಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.
ಸಭೆಯಲ್ಲಿ ಜಂಟಿ ಆಯುಕ್ತರು, ಮುಖ್ಯ ಕಾರ್ಯಾಚರಣೆ ಅಧಿಕಾರಿಗಳು, ಬಿಎಸ್‌ಡಬ್ಲ್ಯೂಎಂಎಲ್ ಹಾಗೂ ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.