ಬೆಂಗಳೂರು: ಬೆಂಗಳೂರಿನ(Bengaluru) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಅನಧಿಕೃತ ಏರ್ ಬಲೂನ್(Balloon) ಬಂದು ಬಿದಿದ್ದೆ. ನಿರ್ಬಂಧಿತ ವಾಯುನೆಲೆಗೆ ಈ ರೀತಿ ಏರ್ ಬಲೂನ್ ಬಂದು ಬಿದ್ದಿರುವುದನ್ನು ನೋಡಿ ಅಲ್ಲಿನ ಜನರು ಭಯಭೀತರಾದರು. ಹೊಸಕೋಟೆ ಮೂಲದ ಖಾಸಗಿ ನಿರ್ಮಾಣ ಕಂಪನಿ ಈ ಬಲೂನ್ ಅನ್ನು ಆ ಪ್ರದೇಶದಲ್ಲಿ ಹಾರಾಡಲು ಬಿಟ್ಟಿದ್ದು, ನಿಯಂತ್ರಣ ತಪ್ಪಿ ಏರ್ಪೋಟ್್ರ ಬಲೂನ್ ಬಂದಿದೆ. ಕೂಡಲೇ ಸಿಎಸ್‌ಎಫ್ ಸಿಬ್ಬಂದಿ ಬಲೂನ್ ನ್ನು ವಶಕ್ಕೆ ಪಡೆದಿದೆ.
ಅಲ್ಲದೆ ಈ ಬಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೋಲೀಸ್ ಠಾಣೆಗೆ ಗೆ ದೂರು ನೀಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯವೇ ಘಟನೆಗೆ ಕಾರಣವಾಗಿರಬಹುದು ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. DGCA ನಿಯಮದ ಪ್ರಕಾರ ಏರ್ಪೋಟ್್ರ ನಲ್ಲಿ ಯಾವುದೇ ಡೋನ್ ಮತ್ತು ಬಲೂನ್ ಹಾರಾಟವನ್ನು ನಿಷೇಧಿಸಲಾಗಿದೆ.