ಅಮೆರಿಕದ ತೆರಿಗೆ ನೀತಿ, ಚೀನಾದ ದುಬಾರಿ ಮೌಲ್ಯಗಳಿಂದ ಹಲವು ದೇಶಗಳು ಅಪರೂಪದ ಖನಿಜ ಸಂಪತ್ತು ಆಮದು ಮಾಡಿಕೊಳ್ಳಲು ಪರದಾಡುತ್ತಿದೆ. ಇತ್ತ ಸೌದಿ ಅರೇಬಿಯಾ ಸೇರಿದಂತೆ 7 ಎಮಿರೈಟ್ಸ್ ಕೂಡ ಇದೇ ಸಮಸ್ಯೆಯಲ್ಲಿ ಸಿಲುಕಿಕೊಂಡಿತ್ತು. ಆದರೆ ಸೌದಿ ಅರೇಬಿಯಾ ಈ ಸಮಸ್ಯೆಗೆ ಉತ್ತರ ಕಂಡುಕೊಂಡಿದೆ. ಸೌದಿ ಅರೆಬಿಯಾ ಭೂಮಿಯ ಅಪರೂಪದ ಖನಿಜ ಸಂಪತ್ತ ಶೋಧಿಸಿದೆ. ಇದೀಗ ಸೌದಿ ಅರೆಬಿಯಾ ವಿಶ್ವದಲ್ಲೇ ನಂಬರ್ 1 ಆಗಲು ಪ್ಲಾನ್ ಹಾಕಿಕೊಂಡಿದೆ. ಇದಕ್ಕಾಗಿ 20 ವರ್ಷಗಳ ಪ್ಲಾನ್ ತಯಾರಿಸಿದೆ. ಸದ್ಯ ಭೂಮಿಯ ಅಡಿಯಲ್ಲಿ ಪತ್ತೆ ಹಚ್ಚಿರುವ ಅಪರೂಪದ ಖನಿಜ ಸಂಪತ್ತು ಹೊರತೆಗೆಯಲು ಕಾರ್ಖಾನೆಗಳು, ಮಿಶಿನರಿ ಎಲ್ಲವನ್ನು ರೆಡಿ ಮಾಡಿಕೊಳ್ಳುತ್ತಿದೆ. ಇದರಿಂದ ಅಮೆರಿಕ ಹಾಗೂ ಚೀನಾ ಮೇಲೆ ಯುಎಐ ಮಾತ್ರವಲ್ಲ ಇತರ ದೇಶಗಳ ಅವಲಂಬನೆಯೂ ಕಡಿಮೆಯಾಗಲಿದೆ. ಇದು ಚೀನಾ ಹಾಗೂ ಅಮೆರಿಕೆಗೆ ದೊಡ್ಡ ಹೊಡೆತ ನೀಡಲಿದೆ.
ವಿಶ್ವದಲ್ಲಿ ಅತೀ ಹೆಚ್ಚು ಅಪರೂಪದ ಖನಿಜ ಸಂಪತ್ತು ಹೊಂದಿದೆ ದೇಶ ಚೀನಾ. ವಿಶ್ವದಲ್ಲೇ ಚೀನಾ ಶೇಕಡ 90 ರಷ್ಟು ಅಪರೂಪದ ಖನಿಜ ಸಂಪತ್ತು ಹೊಂದಿದ ರಾಷ್ಟ್ರ. ನಂತ್ರದ ಸ್ಥಾನ ಅಮೆರಿಕ. ಈ ಎರಡು ದೇಶಗಳು ಮೇಲೆ ಇತರ ಎಲ್ಲಾ ದೇಶಗಳು ಅವಲಂಬಿತವಾಗಿದೆ. ಈ ಪ್ರಾಬಲ್ಯ ಅಂತ್ಯಗೊಳಿಸಿ ವಿಶ್ವದಲ್ಲಿ ಅಪರೂಪದ ಖನಿದ ಸಂಪತ್ತಿನಲ್ಲಿ ಅಗ್ರಗಣ್ಯನಾಗರು ಸೌದಿ ಅರೆಬಿಯಾ ಕಳೆದ 5 ವರ್ಷ ನಿಧಿ ಶೋಧನೆ ಮಾಡಿ ಇದೀಗ ಯಶಸ್ವಿಯಾಗಿದೆ.
ಸೌದ ಅರೇಬಿಯಾ ಭೂಮಿಯೊಳಗೆ ಇತಿಹಾಸದಲ್ಲಿ ಹುದುಗಿದ ಚಿನ್ನ ಹುಡುಕುವ ಪ್ರಯತ್ನ ಮಾಡಿಲ್ಲ. ಅಷ್ಟಕ್ಕೂ ಸೌದಿ ಅರೆಬಿಯಾಗೆ ಭಾರತದ ರೀತಿಯ ಇತಿಹಾಸವೂ ಇಲ್ಲ. ಆದರೆ ಸೌದಿ ಅರೇಬಿಯಾ ಭೂಮಿಯೊಳಗಿರುವ ಖನಿಜ ಸಂಪತ್ತು ಹುಡುಕಾಟದಲ್ಲಿ ಯಶಸ್ವಿಯಾಗಿದೆ. ಕಳೆದ 5 ವರ್ಷದ ಶೋಧೆನೆಯಲ್ಲಿ ಸೌದಿ ಅರೇಬಿಯಾ ಒಟ್ಟು 2.5 ಟ್ರಿಲಿಯನ್ ಅಮೆರಿಕನ್ ಡಾಲರ್ ಅಪರೂಪದ ಭೂಮಿ ಖನಿಜ ಸಂಪತ್ತು (rare earth minerals) ಪತ್ತೆ ಹಚ್ಚಿದೆ. ಇದು ಅಮೆರಿಕ ಹಾಗೂ ಚೀನಾಗಿಂತ ದಪ್ಪುಟ್ಟಾಗಿದೆ. ಇದೇ ಚೀನಾಗೆ ತಲೆನೋವಾಗಿ ಪರಿಣಮಿಸಿದೆ.