2026-03-07 03:18:12

Appeal for establishment of Vachana Global University | ಬೀದರ್ ಜಿಲ್ಲೆಯಲ್ಲಿ ವಚನ ಗ್ಲೋಬಲ್ ವಿಶ್ವವಿದ್ಯಾಲಯ ಸ್ಥಾಪನೆಗೆ ಮನವಿ | Speed News Kannada

Appeal for establishment of Vachana Global University | ಬೀದರ್ ಜಿಲ್ಲೆಯಲ್ಲಿ ವಚನ ಗ್ಲೋಬಲ್ ವಿಶ್ವವಿದ್ಯಾಲಯ ಸ್ಥಾಪನೆಗೆ ಮನವಿ | Speed News Kannada

ಬೆಂಗಳೂರು: ಬೀದರ್ ಜಿಲ್ಲೆಯಲ್ಲಿ "ವಚನ ಗ್ಲೋಬಲ್ ವಿಶ್ವವಿದ್ಯಾಲಯ" ಸ್ಥಾಪಿಸುವ ನಿಟ್ಟಿನಲ್ಲಿ ಭಾಲ್ಕಿ ಮಠದ ನಾಡೋಜ ಡಾಕ್ಟರ್ ಬಸವಲಿಂಗ ಪಟ್ಟದೇವರು ಅವರ ನೇತೃತ್ವದ ಮಠಾಧೀಶರ ತಂಡ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕಾವೇರಿಯಲ್ಲಿ ಭೇಟಿಯಾಗಿ ಚರ್ಚಿಸಿ ಮನವಿ ಸಲ್ಲಿದರು.
ಈ ಸಂದರ್ಭದಲ್ಲಿ  ಗದಗಿನ ಪೂಜ್ಯ ಶ್ರೀ ಜಗದ್ಗುರು ಡಾ. ತೋಟದ ಸಿದ್ದರಾಮಯ್ಯಗಳು, ಪೂಜಶ್ರೀ ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ ಹಂದಿಗುಂದ, ಭಾಲ್ಕಿಯ ಕಿರಿಯ ಶ್ರೀಗಳು, ಕುಂಬಳಗೋಡು ಬಸವ ಮಂಟಪದ ಶ್ರೀಗಳು ಹಾಗೂ ಸಚಿವರಾದ ಎಂ. ಬಿ. ಪಾಟೀಲ್ , ಈಶ್ವರ ಖಂಡ್ರೆ, ಶಾಸಕ ಬಿ.ಆರ್.ಪಾಟೀಲ್ ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯಕ್ಕೆ 200 ಎಕರೆ ಜಮೀನು ಅವಶ್ಯಕತೆ ಇದ್ದು, ನೂರು ಎಕರೆಯನ್ನು ಒದಗಿಸುವುದಾಗಿ ಬಸವಲಿಂಗ ಪಟ್ಟದೇವರು ಸ್ವಾಮೀಜಿ  ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.