2026-03-07 03:16:44

Ananta Payana Directed and Starring Sri Kaka | ಶ್ರೀ ಕಾಕಾ ನಿರ್ದೇಶನ ಹಾಗೂ ನಟನೆಯ ಅನಂತ ಪಯಣ ಚಿತ್ರದ ಚಿತ್ರೀಕರಣ ಪೂರ್ಣ | Speed News Kannada

Ananta Payana Directed and Starring Sri Kaka | ಶ್ರೀ ಕಾಕಾ ನಿರ್ದೇಶನ ಹಾಗೂ ನಟನೆಯ ಅನಂತ ಪಯಣ ಚಿತ್ರದ ಚಿತ್ರೀಕರಣ ಪೂರ್ಣ | Speed News Kannada

ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳೆ ಹೆಚ್ಚಾಗಿ ಬರುತ್ತಿದೆ. ಹೊಸತಂಡದ ಹೊಸಪ್ರಯತ್ನವನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಅಂತಹುದೇ ಹೊಸತಂಡದ ಹೊಸ ಪ್ರಯತ್ನ "ಅನಂತ ಪಯಣ". ನೃತ್ಯ ಕಲಾವಿದನಾಗಿ, ಸಹ ನಿರ್ದೇಶಕನಾಗಿ  ಕಾರ್ಯ ನಿರ್ವಹಿಸಿ ಅನುಭವವಿರುವ ಶ್ರೀ ಕಾಕಾ,‌" ಅನಂತ‌ ಪಯಣ"ದ ಮೂಲಕ ನಾಯಕನಾಗಿ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಎಸ್ ಕೆ ಫಿಲಂಸ್ ಫ್ಯಾಕ್ಟರಿ ಲಾಂಛನದಲ್ಲಿ ಸಂತೋಷ್ ಅಶೋಕ್ ಹೆಗಡೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.            

 "ಅನಂತ ಪಯಣ", ಇದು ಸಂಚಾರಿ ಕುರುಬರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. "ಸಂಚಾರಿ ಕುರುಬರು" ಸ್ಥಿರವಾದ ಮನೆ ಹೊಂದಿರದೆ, ಋತುಮಾನಕ್ಕೆ ಅನುಗುಣವಾಗಿ ಕುರಿಗಳೊಂದಿಗೆ ನೂರಾರು ಕಿಲೋಮೀಟರ್ ಸಂಚರಿಸುತ್ತಾರೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಕಥೆ ಇದು. ಈ ಚಿತ್ರಕ್ಕೆ ನಾನೇ ಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಜೊತೆಗೆ ನಾಯಕನಾಗಿಯೂ ನಟಿಸಿದ್ದೇನೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರಕ್ಕೆ ರೀರೆಕಾರ್ಡಿಂಗ್ ನಡೆಯುತ್ತಿದೆ. ಬೆಳಗಾವಿ, ಬೆಂಗಳೂರು ಹಾಗೂ ಮಹಾರಾಷ್ಟ್ರದಲ್ಲಿ ಚಿತ್ರೀಕರಣ ನಡೆದಿದೆ. ನಾನು ಕುರಿಗಾಹಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳು ಹಾಗೂ ಐದು ಹಾಡುಗಳು ಸಹ ಇದೆ. ಆಕಾಶ ಪರ್ವ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ದೀಪು ಗೌಡ ಸಂಕಲನ, ರಘು ನೃತ್ಯ ನಿರ್ದೇಶನ ಹಾಗೂ ರಿಸ್ಕಿ ಶಿವು ಅವರ ಸಾಹಸ ನಿರ್ದೇಶನವಿರುವ "ಅನಂತ ಪಯಣ" ಚಿತ್ರದ ನಾಯಕಿಯಾಗಿ ನಿವಿಶ್ಕಾ ಪಾಟೀಲ್ ನಟಿಸಿದ್ದಾರೆ. ಎಂ.ಕೆ ಮಠ, ಮಂಜುನಾಥ್ ಹೆಗಡೆ, ಅಪೂರ್ವ ಶ್ರೀ, ಲಕ್ಷ್ಮೀ ಸಿದ್ದಯ್ಯ, ಬಲ ರಾಜವಾಡಿ, ಸಂದೀಪ್ ನೀನಾಸಂ, ಪ್ರಶಾಂತ್ ಸಿದ್ದಿ, ಲಪಂಗ್ ರಾಜಾ, ಅನನ್ಯ ನಿಹಾರಿಕ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದು ತಿಳಿಸಿದ ಚಿತ್ರದ ನಿರ್ದೇಶಕ ಹಾಗೂ ನಾಯಕ ಶ್ರೀ ಕಾಕಾ, ಸದ್ಯದಲ್ಲೇ ಚಿತ್ರದ ಹಾಡುಗಳು ಹಾಗೂ ಟೀಸರ್ ಬಿಡುಗಡೆಯಾಗಲಿದೆ ಎನ್ನುತ್ತಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.