ಬೆಂಗಳೂರು : ಪೊಲೀಸರನ್ನು ನೋಡಿದರೆ ನಮಗೆ ಧೈರ್ಯ ಬರಬೇಕು. ಆದರೆ ಇಂಥಾ ಪೊಲೀಸರನ್ನು ನೋಡಿದರೆ ಭಯ ಆಗುತ್ತೆ. ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋಟ್್ರ ಕ್ಯಾಂಟೀನ್‌ನಲ್ಲಿ ಕಾಫಿ ಬಿಲ್ ಕೇಳಿದ್ದಕ್ಕೆ ಪೊಲೀಸರೇ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಗಂಗರಾಜು, ಬಾಳಪ್ಪ ಮತ್ತು ಕುಮಾರ್ ಎನ್ನುವ ಮೂರು ಪೊಲೀಸ್ ಸಿಬ್ಬಂದಿಗಳು ಅಲ್ಪಾ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ್ದಾರೆ.
ಕಾಫಿ ಬಿಲ್ ಕೇಳಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿ ಮೇಲೆ ಪೊಲೀಸಪ್ಪನಿಂದ ಹಲ್ಲೆಬೆಂಗಳೂರು ಏರ್ಪೋಟ್್ರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಏರ್ ಪೋರ್ಟ್ ನ ಸಿಬ್ಬಂದಿ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಹೋಟೆಲ್ ಸಂಬಂಧಿಯ ಮೇಲೆ ಕೈ ಮಾಡಿದ್ದೂ ಅಲ್ಲದೆ ಪಂಚ್ ಮಾಡಿ ಹಲ್ಲೆ ಮಾಡಿದ್ದಾನೆ. ಎಂದು ಕೆಂಪೇಗೌಡ ಏರ್ಪೋಟ್್ರ ಪೊಲೀಸ್ ಠಾಣೆಯಲ್ಲೇ ಮೂವರು ಪೊಲೀಸರ ವಿರುದ್ಧ FIR ದಾಖಲಾಗಿದೆ.
ಮಿಠಾಯಿ ಪ್ಯಾಕೆಟ್‌ನಲ್ಲಿ ಮಾದಕ ವಸ್ತು ಸಾಗಾಟ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಮಿಠಾಯಿ, ಕ್ಯಾಂಡಿ ಪ್ಯಾಕೆಟ್‌ನಲ್ಲಿ ಮಾದಕ ವಸ್ತುಗಳು ಸಾಗಿಸುತ್ತಿದ್ದ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಂಕಾಕ್‌ನಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿದ್ದ ಓರ್ವ ಪ್ರಯಾಣಿಕನ ಲಗೇಜ್‌ನಲ್ಲಿ ಪರಿಶೀಲಿಸಿದಾಗ ಲಕ್ಷಾಂತರ ಮೌಲ್ಯದ ಮಾದಕ ವಸ್ತು ಸಿಕ್ಕಿದೆ.
3.43 ಕೋಟಿಯ ಮಾದಕ ವಸ್ತು ವಶ ಎಕ್ಸ್ ಪೋಸ್ಟ್ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು, ಮೊದಲ ಪ್ರಕರಣದಲ್ಲಿ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಆಗಮಿಸುತ್ತಿದ್ದ ಪ್ರಯಾಣಿಕನನ್ನು ತಡೆದು, ಚೆಕ್-ಇನ್ ಮಾಡಿದ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 9.7 ಕೆಜಿ ಹೈಡೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಅದರ ಮೌಲ್ಯ 3.39 ಕೋಟಿ ರೂಪಾಯಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಅದೇ ದಿನ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಬ್ಯಾಂಕಾಕ್‌ನಿಂದ ಆಗಮಿಸುತ್ತಿದ್ದ ಪ್ರಯಾಣಿಕನನ್ನು ತಡೆದು ಕ್ಯಾಂಡಿ/ಸಿಹಿ ತಿಂಡಿ ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದ 4.25 ಲಕ್ಷ ಮೌಲ್ಯದ 1.7 ಕೆಜಿ ಹಶಿಶ್/ಚರಸ್ ವಶಪಡಿಸಿಕೊಳ್ಳಲಾಗಿದೆ.
ಅಟ್ಟಹಾಸ ಮೆರೆದ ಕಾರು ಚಾಲಕನ ಬಂಧನಬೆಂಗಳೂರಿನ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಗೂಡ್ಸ್ ಚಾಲಕನನ್ನು ಕಾರು ಚಾಲಕನೊಬ್ಬ ಎಳೆದೊಯ್ಯುವ ಡೆಡ್ಲಿ ದೃಶ್ಯ ಸೆರೆಯಾಗಿತ್ತು. ಹೂ ವ್ಯಾಪಾರಿಯಾಗಿರುವ ನಂಜುಂಡರಿಂದ ದೂರು ದಾಖಲಿಸಿದ್ದು, ಕಾರು ಚಾಲಕ ಸುರೇಶ್ ಎಂಬಾತನ್ನನು ಪೊಲೀಸು ಅರೆಸ್ಟ್ ಮಾಡಿದ್ದಾರೆ.. ಈ ರೀತಿ ತಪ್ಪು ಮಾಡೋರ ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ ಅಮಟೆ ಹೇಳಿದ್ರು.
5 ವರ್ಷದ ಬಾಲಕನಿಗೆ ಶಿಕ್ಷಕಿಯಿಂದ ಹಲ್ಲೆ ಬೆಂಗಳೂರಿನ ಶ್ರೀನಿವಾಸನಗರ ಬಳಿ ಇರುವ ಖಾಸಗಿ ಶಾಲೆಯಲ್ಲಿ 5 ವರ್ಷದ ಬಾಲಕನಿಗೆ ಶಿಕ್ಷಕಿಯಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಕೆನ್ನೆ ಹಾಗೂ ಬೆನ್ನಿಗೆ ಬಾಸುಂಡೆ ಬರುವ ಹಾಗೆ ಶಿಕ್ಷಕಿ ಹಲ್ಲೆ ನಡೆಸಿದ್ದಾರೆ. ಕಳೆದ 1 ತಿಂಗಳ ಹಿಂದೆಯೂ ಶಿಕ್ಷಕಿ ಹಲ್ಲೆ ನಡೆಸಿದ್ದು, ಪೋಷಕರು ಹನುಮಂತ ನಗರ ಠಾಣೆಯಲ್ಲಿ ದೂರು ನೀಡಿದ್ರು. ದೂರಿನ ಬಳಿಕ ಶಿಕ್ಷಕಿ ಪೊಲೀಸರ ಮುಂದೆ ಕ್ಷಮೆಯಾಚಿಸಿದ್ರು. ಈಗ ಮತ್ತೆ ಬಾಲಕನಿಗೆ ಶಿಕ್ಷಕಿ ಹಲ್ಲೆ ಮಾಡಿದ್ದಾರೆ.