2026-03-07 01:45:13

Air India Loss | ಕಳೆದ 3 ವರ್ಷಗಳಲ್ಲಿ ಏರ್ ಇಂಡಿಯಾಗೆ 32,210 ಕೋಟಿ ರೂ. ನಷ್ಟ | Speed News Kannada

Air India Loss | ಕಳೆದ 3 ವರ್ಷಗಳಲ್ಲಿ ಏರ್ ಇಂಡಿಯಾಗೆ 32,210 ಕೋಟಿ ರೂ. ನಷ್ಟ | Speed News Kannada

ಗುಜರಾತ್‌ನ ಅಹಮದಾಬಾದ್‌ನಲ್ಲಿ (Ahmedabad) ಸಂಭವಿಸಿದ್ದ ವಿಮಾನ ದುರಂತದ (Plane Crash) ಬಳಿಕ ಏರ್ ಇಂಡಿಯಾ (Air India) ವಿಮಾನ ಸಂಸ್ಥೆಗೆ ಬರೋಬ್ಬರಿ 15,000 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.

ಸುದ್ದಿಮಾಧ್ಯಮವೊಂದು ಈ ಕುರಿತು ವರಿದಿ ಮಾಡಿದ್ದು, 2025ರ ಜೂ.12ರಂದು ಗುಜರಾತ್‌ನ ಅಹಮದಾಬಾದ್ ಏರ್‌ಪೋರ್ಟ್ ಬಳಿ ವಿಮಾನ ದುರಂತ ಸಂಭವಿಸಿತ್ತು. ಈ ಘಟನೆ ಬಳಿಕ ವಿಮಾನ ಸಂಸ್ಥೆಗೆ ಆರ್ಥಿಕ ಹಿನ್ನಡೆ ಕಂಡಿದ್ದು, ಬರೋಬ್ಬರಿ 15,000 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಭಾರತ-ಪಾಕ್ ನಡುವಿನ ಯುದ್ಧದ ಬಳಿಕ ಪಾಕ್ ವಾಯುವಲಯ ಬಂದ್ ಮಾಡಿದ್ದಕ್ಕಾಗಿ ಏರ್ ಇಂಡಿಯಾಗೆ ನಷ್ಟವಾಗಿತ್ತು. ಆ ನಂತರ ಅಹಮದಾಬಾದ್ ವಿಮಾನ ದುರಂತದ ಬಳಿಕ ಮತ್ತಷ್ಟು ಆರ್ಥಿಕವಾಗಿ ಕುಸಿತ ಕಂಡಿದೆ. ಇನ್ನೂ ಕಳೆದ 3 ವರ್ಷಗಳಲ್ಲಿ 32,210 ಕೋಟಿ ರೂ. ನಷ್ಟ ಅನುಭವಿಸಿದೆ. ಹೀಗಾಗಿ ಕಳೆದ ವರ್ಷ ಏರ್ ಇಂಡಿಯಾವು ಸರ್ಕಾರಕ್ಕೆ 10,000 ಕೋಟಿ ರೂ. ಹೆಚ್ಚುವರಿ ಸಹಾಯ ಕೋರಿತ್ತು ಎನ್ನಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.