2026-03-07 03:02:16

AI Impact Summit | ಚೀನಾದ ರೋಬೊ ನಾಯಿ ನಮ್ಮದೇ ಎಂದಿದ್ದ ವಿಶ್ವವಿದ್ಯಾಲಯ ಮಳಿಗೆ ತರವು | Speed News Kannada

AI Impact Summit | ಚೀನಾದ ರೋಬೊ ನಾಯಿ ನಮ್ಮದೇ ಎಂದಿದ್ದ ವಿಶ್ವವಿದ್ಯಾಲಯ ಮಳಿಗೆ ತರವು | Speed News Kannada

ನವದೆಹಲಿ: ಚೀನಾ ದೇಶದಲ್ಲಿ ತಯಾರಿಸಲಾಗಿದ್ದ ರೋಬೊ ನಾಯಿಯನ್ನು ತಾವೇ ತಯಾರಿಸಿದ್ದು ಎಂದು ಪ್ರದರ್ಶನಕ್ಕೆ ಇಟ್ಟಿದ್ದ ಗಾಲ್ಗೋಟಿಯಾಸ್‌ ವಿಶ್ವವಿದ್ಯಾಲಯದ ಪ್ರತಿನಿಧಿಗಳನ್ನು AI Impact Summit ಮೇಳದಿಂದ ವಾಪಸ್ ಕಳುಹಿಸಲಾಗಿದೆ.
ಚೀನಾದಲ್ಲಿ ತಯಾರಿಸಲಾಗಿದ್ದ ರೋಬೊ ನಾಯಿಯನ್ನು ಗಾಲ್ಗೋಟಿಯಾಸ್‌ ವಿಶ್ವವಿದ್ಯಾಲಯವು ತಮ್ಮದೇ ತಯಾರಿಕೆ ಎಂದು ಹೇಳಿಕೊಂಡಿತ್ತು. ಈ ಹೇಳಿಕೆ ಸಾಕಷ್ಟು ವಿವಾದಗಳಿಗೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು, ಎಐ ಎಕ್ಸ್‌ಪೋದಲ್ಲಿ ತೆರೆಯಲಾಗಿದ್ದ ಮಳಿಗೆಯನ್ನು ತೆರವು ಮಾಡುವಂತೆ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.
'ರೋಬೊ ನಾಯಿ' ಪ್ರಕರಣವು ವಿವಾದಕ್ಕೆ ತಿರುಗುತ್ತಿದ್ದಂತೆ ಗ್ಯಾಲ್ಗೋಟಿಯಾಸ್‌ ವಿವಿಯ ರಿಜಿಸ್ಟ್ರಾರ್‌ ನಿತಿನ್‌ ಕುಮಾರ್‌ ಗೌರ್‌ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ನಿರ್ಮಾಣ ಮತ್ತುಅಭಿವೃದ್ಧಿ ಪದಗಳ ಬಳಕೆಯ ಗೊಂದಲದಿಂದಾಗಿ ವಿವಾದ ಸೃಷ್ಟಿಯಾಗಿದೆ. ನಮ್ಮ ವಿಶ್ವವಿದ್ಯಾಲಯವು ರೋಬೊ ನಾಯಿ'ಯನ್ನು ನಿರ್ಮಿಸಿಲ್ಲ. ಆದರೆ, ಶೈಕ್ಷಣಿಕ ಮತ್ತು ಸಂಶೋದನಾ ಉದ್ದೇಶಕ್ಕಾಗಿ ಅಭಿವೃದ್ಧಿಯಲ್ಲಿ ಕೆಲಸ ಮಾಡಿದ್ದೇವೆ ಎಂದು ಸ್ಪಷ್ಟೆ ನೀಡಿದ್ದಾರೆ.
ವಿವಿಯು ರೋಬೊ ನಾಯಿ ಅಭಿವೃದ್ಧಿಯ ಮೇಲೆ ಕೆಲಸ ಮಾಡಿದೆ. ನಮ್ಮ ವಿದ್ಯಾರ್ಥಿಗಳು ಇದರ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯುನಿಟ್ರಿ ಗೊ-2 ಎಂಬ ರೋಬೊ ನಾಯಿ ಚೀನಾದ ತಯಾರಿಕೆಯಾಗಿದ್ದು, ಆನ್‌ಲೈನ್ ವೇದಿಕೆಯಲ್ಲಿ ಮಾರಾಟವಾಗುತ್ತಿದೆ. ಭಾರತದಲ್ಲಿ ಇದರ ಬೆಲೆ ರೂ. 2 ಲಕ್ಷದಿಂದ ರೂ.3 ಲಕ್ಷದವರೆಗೆ ಇದೆ ಎಂದು ತಿಳಿದು ಬಂದಿದೆ.
ಶೃಂಗಸಭೆಯಲ್ಲಿ ಈ ರೊಬೊ ನಾಯಿಯನ್ನು ವಿಶ್ವವಿದ್ಯಾಲಯದ ಪ್ರತಿನಿಧಿಗಳು 'ಒರಿಯನ್' ಎಂದು ಪ್ರದರ್ಶಿಸಿದ್ದರು. ಮಾಧ್ಯಮ ಸಂವಾದದ ವೇಳೆ ಈ ರೋಬೋಟ್‌ನ ವೈಶಿಷ್ಟ್ಯಗಳನ್ನು ವಿವರಿಸಿದ್ದರು. ಇದೀಗ ವಿಶ್ವಿವಿದ್ಯಾಲಯವು ಮುಜುಗರಕ್ಕೀಡಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.