2026-03-07 01:26:40

Yuvrajs brilliant century didnt help win | ಯುವರಾಜ್ ಭರ್ಜರಿ ಶತಕಕ್ಕೆ ಒಲಿಯದ ಗೆಲುವು: ರಚಿನ್ ರವೀಂದ್ರ ಫಿಲಿಪ್ಸ್ ಆಕ್ರಮಣಕಾರಿ ಆಟಕ್ಕೆ ಮಣಿದ ಕೆನಡಾ | Speed News Kannada

Yuvrajs brilliant century didnt help win | ಯುವರಾಜ್ ಭರ್ಜರಿ ಶತಕಕ್ಕೆ ಒಲಿಯದ ಗೆಲುವು: ರಚಿನ್ ರವೀಂದ್ರ ಫಿಲಿಪ್ಸ್ ಆಕ್ರಮಣಕಾರಿ ಆಟಕ್ಕೆ ಮಣಿದ ಕೆನಡಾ | Speed News Kannada

ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026 ಡಿ ಗ್ರೂಪ್ ಪಂದ್ಯದಲ್ಲಿ ಕೆನಾಡ ತಂಡದ ವಿರುದ್ಧ ನ್ಯೂಜಿಲೆಂಡ್ 8 ವಿಕೆಟ್‌ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಕೆನಡಾ ಪರ ಯುವರಾಜ್ ಶರ್ಮಾ ಸ್ಪೋಟಕ ಶತಕ ವ್ಯರ್ಥವಾದಂತಾಯಿತು.
ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಹೊಸ ತಂಡಗಳು ಉತ್ತಮ ಪ್ರದರ್ಶನ ತೋರುವ ಮೂಲಕ ಬೃಹತ್ ರನ್‌ಗಳನ್ನು ಕಲೆಹಾಕಿ ಅನುಭವಿ ಬಲಿಷ್ಠ ತಂಡಗಳಿಗೆ ಪೈಪೋಟಿ ನೀಡುತ್ತಿವೆ. ಈ ಸಾಲಿಗೆ ಕೆನಡಾ ಕೂಡ ಸೇರಿದ್ದು ಇಂದು ಬಲಿಷ್ಠ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಿರಬಹುದು. ಆದರೆ, 173 ರನ್‌ಗಳನ್ನು ಕಲೆಹಾಕಿದ್ದು ವಿಶೇಷವಾಗಿದೆ.
ಯುವರಾಜ್ ಸಿಡಿಸಿದ ಶತಕಕ್ಕೆ ಒಲಿಯದ ಜಯ
ಟಾಸ್‌ ಗೆದ್ದು ಮೊದಲು ಬ್ಯಾಟ್ ಬೀಸಿದ ಕೆನಡಾ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್‌ಗಳನ್ನು ಕಲೆಹಾಕಿತು. ಇದರಲ್ಲಿ ಬಹುತೇಕ ರನ್‌ಗಳು ಯುವರಾಜ್ ಶರ್ಮಾ ಅವರದ್ದಾಗಿವೆ. ಅವರು 11 ಬೌಂಡರಿ, 4 ಸಿಕ್ಸ್ ಗಳೊಂದಿಗೆ 110 ರನ್‌ಗಳನ್ನು ಕಲೆಹಾಕಿದರು. ಉಳಿದಂತೆ ದಿತ್ ಬಜ್ಜಾರ್ 36(39), ನವೀತ್ ಧಾಲಿವಾಲ್ 10(7) ರನ್‌ಗಳನ್ನು ಕಲೆಹಾಕಿದರೆ, ಉಳಿದವರು ಒಂದಂಕಿ ರನ್‌ಗಳನ್ನು ಗಳಿಸಿದರು.
ರಚಿನ್‌ ರವೀಂದ್ರ, ಫಿಲಿಪ್ಸ್ ಸ್ಪೋಟಕ ಬ್ಯಾಟಿಂಗ್
ಕೆನಡಾ ನೀಡಿದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು, 15.1 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 176 ರನ್‌ಗಳನ್ನು ಕಲೆಹಾಕಿ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿಗೆ ರಚಿನ್ ರವೀಂದ್ರ ಹಾಗೂ ಗೈನ್ ಫಿಲಿಪ್ಸ್ ಸಿಡಿಸಿದ ಬೃಹತ್ ರನ್‌ಗಳೇ ಪ್ರಮುಖ ಕಾರಣ ಅಂದ್ರೆ ತಪ್ಪಾಗಲಾದು.
ರಚಿನ್ ರವೀಂದ್ರ ಅಜೇಯ 59(39), ಗ್ರೆನ್ ಫಿಲಿಪ್ಸ್ ಅಜೇಯ 76(36) ರನ್‌ಗಳನ್ನು ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಟೀಮ್ ಸೀಫರ್ಟ್ 6(10), ಫಿನ್ ಅಲೆನ್ 21(8) ರನ್‌ಗಳನ್ನು ಗಳಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.