2026-06-25 02:06:27

Young woman commits suicide | ಅಲ್ಪಾಯುಷಿ ಎಂಬ ಜ್ಯೋತಿಷಿ ಮಾತು ನಂಬಿ ಆತ್ಮಹತ್ಯೆಗೆ ಶರಣಾದ ಯುವತಿ | Speed News Kannada

Young woman commits suicide | ಅಲ್ಪಾಯುಷಿ ಎಂಬ ಜ್ಯೋತಿಷಿ ಮಾತು ನಂಬಿ ಆತ್ಮಹತ್ಯೆಗೆ ಶರಣಾದ ಯುವತಿ | Speed News Kannada

ಬೆಂಗಳೂರು: ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದ ಜ್ಯೋತಿಷಿಯೊಬ್ಬನ ಮಾತಿಗೆ ಹೆದರಿ  ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೋಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿದ್ಯಾಜ್ಯೋತಿ (29) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಯುವತಿ. ನಗರದ ಹೆಸರಘಟ್ಟ ರಸ್ತೆಯ ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ನಡೆದಿದೆ.
ಜ್ಯೋತಿಷಿಯೊಬ್ಬ ವಿದ್ಯಾಜ್ಯೋತಿಗೆ ನೀನು ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದ.ಇದನ್ನು ನಂಬಿದ ಪೋಷಕರು ಮಗಳ ಆಯುಷ್ಯ ಹೆಚ್ಚಲು ಪೂಜೆ ಪುನಸ್ಕಾರವನ್ನೂ ಮಾಡಿದ್ದರು. ವಿದ್ಯಾ ಕೊಡಗು ಮೂಲದ ಯುವಕನನ್ನ ಪ್ರೀತಿಸುತ್ತಿದ್ದರು. ಈಕೆಯ ಇಷ್ಟದಂತೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿ, ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದರು.
ಜ್ಯೋತಿಷಿ 9 ದಿನ ಪೂಜೆ ಮಾಡಲು ಸೂಚಿಸಿದ್ದರು. ಅದರಂತೆ ಮನೆಯಲ್ಲಿ ಒಂಬತ್ತನೇ ದಿನದ ಪೂಜೆ ನಡೆಯುತ್ತಿತ್ತು. ಕೊನೆಯ ದಿನವಾದ್ದರಿಂದ ಮಾರಮ್ಮ ದೇವರಿಗೆ ತಾಳಿ ಕೊಡುವಂತೆ ಜ್ಯೋತಿಷಿ ತಿಳಿಸಿದ್ದ. ಮನೆಯಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಊಟದ ನಂತರ ವಿದ್ಯಾ ತನ್ನ ಕೊಠಡಿಗೆ ಹೋಗಿದ್ದರು. ಸಂಜೆ ತಾಯಿ ಕೂಗಿದ್ದರೂ ಕೂಡ ವಿದ್ಯಾ ಹೊರಬಂದಿರಲಿಲ್ಲ. ಕೆಲಸ ಮಾಡುತ್ತಿರಬೇಕೆಂದು ಸುಮ್ಮನಾಗಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ತಾಯಿ ದೇವಸ್ಥಾನಕ್ಕೆ ತೆರಳಲು ವಿದ್ಯಾಳನ್ನು ಕೂಗಿದಾಗ ಬಾಗಿಲನ್ನು ತೆಗೆಯದೇ ಇದ್ದಾಗ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನ ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.