2026-03-07 05:46:48

You should never become a mother | ನೀನು ಯಾವ ಕಾರಣಕ್ಕೂ ತಾಯಿ ಆಗಬಾರದು ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸ‌ರ್ ಸುರಿದು ಬೆಂಕಿ ಹಚ್ಚಿದ ಯುವಕ | Speed News Kannada

You should never become a mother | ನೀನು ಯಾವ ಕಾರಣಕ್ಕೂ ತಾಯಿ ಆಗಬಾರದು ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸ‌ರ್ ಸುರಿದು ಬೆಂಕಿ ಹಚ್ಚಿದ ಯುವಕ | Speed News Kannada

ಗುರುಗ್ರಾಮ, ಫೆ.23: ಹೆಣ್ಣು ಮತ್ತು ಗಂಡಿನ ಸಂಬಂಧ ದೈಹಿಕ ಸಂಬಂಧದಲ್ಲಿ ಮುಗಿಯುದಾದರೆ, ಆ ಸಂಬಂಧಗಳಿಗೆ ಬೆಲೆಯೇ ಇರುವುದಿಲ್ಲ. ದೆಹಲಿ, ಬೆಂಗಳೂರುನಂತಹ ಮಹಾನಗರಗಳಲ್ಲಿ ಯುವಕ-ಯುವತಿಯರು ಮನಸ್ಸಿನ ಸಂಬಂಧಕ್ಕಿಂತ ದೈಹಿಕ ಸಂಬಂಧಕ್ಕೆ ಬೆಲೆ ನೀಡುತ್ತಾರೆ ಎಂಬುದನ್ನು ಅನೇಕ ಘಟನೆಗಳು ವಿವರಿಸಿದೆ.ಅದಕ್ಕೆ ಸಾಕ್ಷಿ ಕೂಡ ಇದೆ. ಲಿವ್ ಇನ್ ರಿಲೇಶನ್‌ಶಿಪ್ ಮೂಲಕ ಗೆಳತನ ಬೆಳಸಿಕೊಂಡು ದೈಹಿಕ ಸಂಪರ್ಕದ ನಂತರ ಇಬ್ಬರ ನಡುವೆಯೂ ಹೊಂದಾಣಿಕೆಯೇ ಇರುವುದಿಲ್ಲ. ಕೊನೆಗೆ ಒಬ್ಬರ ಮೇಲೆ ಇನ್ನೊಬ್ಬ ದೂರಿಕೊಂಡ ಸಂದೇಹ ಪಡುತ್ತ, ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗುತ್ತದೆ. ಇದೀಗ ಇಂತಹದೇ ಘಟನೆಯೊಂದು ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಯುವತಿಯೊಬ್ಬಳ ಮೇಲೆ ನಡೆದ ಸರಣಿ ದೌರ್ಜನ್ಯದ ಅಘಾತಕಾರಿ ಕೃತ್ಯವೊಂದು ಬೆಳಕಿಗೆ ಬಂದಿದೆ. ತನ್ನ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿಯನ್ನು ಭೀಕರ ಹಲ್ಲೆ ಹಲ್ಲೆ ಮಾಡಿದ್ದಾನೆ.
ಇದೀಗ ತ್ರಿಪುರಾ ಮೂಲದ 19 ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ತ್ರಿಪುರಾ ಮೂಲದ ಸಂತ್ರಸ್ತೆ ಗುರುಗ್ರಾಮದ ಸೆಕ್ಟರ್ 69 ರ ಪಿಜಿಯೊಂದರಲ್ಲಿ ವಾಸವಿದ್ದು, ಬಯೋಟೆಕ್ನಾಲಜಿ ಅಭ್ಯಾಸ ಮಾಡುತ್ತಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಆಪ್ ಒಂದರ ಮೂಲಕ ದೆಹಲಿಯ ನರೇಲಾ ಮೂಲದ ಶಿವಂ ಎಂಬಾತನ ಪರಿಚಯವಾಗಿತ್ತು. ಮದುವೆಯ ಆಮಿಷವೊಡ್ಡಿದ ಶಿವಂ, ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಲ್ಲದೆ, ಗುರುಗ್ರಾಮದ ಫ್ಲಾಟ್ ಒಂದರಲ್ಲಿ ಆಕೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದನು.
ಇಬ್ಬರ ನಡುವೆ ಕೆಲವೊಂದು ವಿಚಾರವಾಗಿ ಸಂದೇಹಗಳು ಮೂಡಿದೆ. ಶಿವಂ, ಯುವತಿಯ ಮೇಲೆ ಸತತವಾಗಿ ದೈಹಿಕ ದೌರ್ಜನ್ಯ ಎಸಗುತ್ತಿದ್ದನು. ಆದರೆ ಕಳೆದ ಸೋಮವಾರ (ಫೆಬ್ರವರಿ 16) ಈ ಕ್ರೌರ್ಯ ಮಿತಿಮೀರಿತು. ಯುವತಿಯ ತಲೆಯನ್ನು ಗೋಡೆಗೆ ಜಜ್ಜಿ, ಸ್ಟೀಲ್ ಬಾಟಲಿ ಮತ್ತು ಮಣ್ಣಿನ ಮಡಕೆಯಿಂದ ಹಲ್ಲೆ ನಡೆಸಿದ್ದಾನೆ. ಯುವತಿಯ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಈ ಭೀಕರ ಕೃತ್ಯದ ವಿಡಿಯೋವನ್ನೂ ಸಹ ಆರೋಪಿ ಚಿತ್ರೀಕರಿಸಿದ್ದಾನೆ. ಯುವತಿಯ ಕಾಲುಗಳಿಗೆ ಚಾಕುವಿನಿಂದ ಇರಿದು, "ಇನ್ನು ಮುಂದೆ ನೀನು ತಾಯಿಯಾಗಲು ಅಥವಾ ನಡೆಯಲು ಸಾಧ್ಯವಾಗದಂತೆ ಮಾಡುತ್ತೇನೆ" ಎಂದು ಬೆದರಿಕೆ ಹಾಕಿದ್ದಾನೆ.ಎರಡು ದಿನಗಳ ಕಾಲ ಚಿತ್ರಹಿಂಸೆ ಅನುಭವಿಸಿದ ಯುವತಿ, ಫೆಬ್ರವರಿ 18 ರಂದು ಆರೋಪಿಯ ಫೋನಿನಿಂದಲೇ ತನ್ನ ತಾಯಿಗೆ ಕರೆ ಮಾಡಿ ಸ್ಥಳೀಯ ಭಾಷೆಯಲ್ಲಿ ವಿಷಯ ತಿಳಿಸಿದ್ದಾಳೆ. ಇದರಿಂದ ಆರೋಪಿಗೆ ವಿಷಯ ಅರ್ಥವಾಗಲಿಲ್ಲ. ತಕ್ಷಣವೇ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.