ಯಶ್ ನಟನೆಯ ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಮಾರ್ಚ್ 19ರಂದೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಯುದ್ಧ ಭೀತಿಯ ಕಾರಣ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಜೂನ್ 04 ರಂದು ಅದ್ಧೂರಿಯಾಗಿ ‘ಟಾಕ್ಸಿಕ್’ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಲಾಸ್ ಏಂಜಲೀಸ್‌ನಲ್ಲಿ ನಡೆದ CinemaCon 2026 ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ತಮ್ಮ ಮುಂದಿನ ಬಿಡುಗಡೆ ಚಿತ್ರಗಳಾದ ಟಾಕ್ಸಿಕ್ ಮತ್ತು ರಾಮಾಯಣ ಬಗ್ಗೆ ಮಾತನಾಡಿದ್ದು, ಇದು ಸಾಮಾನ್ಯ ಆಕ್ಷನ್-ಗ್ಯಾಂಗ್‌ಸ್ಟಾರ್ ಸಿನಿಮಾ ಅಲ್ಲ ಎಂದು ಹೇಳಿಕೊಂಡಿದ್ದಾರೆ. Fandangoಗೆ ನೀಡಿದ ಸಂದರ್ಶನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ನಟ ಯಶ್ “ಟಾಕ್ಸಿಕ್” ಚಿತ್ರವನ್ನು ಪದರಗಳಿಂದ ಕೂಡಿದ (layered) ಚಿತ್ರವೆಂದು ವಿವರಿಸಿದ್ದಾರೆ. ಟಾಕ್ಸಿಕ್ ಚಿತ್ರದ ಬಗ್ಗೆ ಮಾತನನಾಡಿದ ಯಶ್ ಈ ಸಿನಿಮಾವನ್ನು ಇಂಗ್ಲಿಷ್‌ನಲ್ಲಿಯೂ ಶೂಟ್ ಮಾಡಿದ್ದೇವೆ. ಈ ಚಿತ್ರವು ಸಾಮಾನ್ಯ ಗ್ಯಾಂಗ್‌ಸ್ಟಾರ್ ಕಥೆಯಲ್ಲ. ಮೇಲ್ಮೈಯಲ್ಲಿ ಇದು ಆಕ್ಷನ್ ಸಿನಿಮಾವಂತೆ ಕಾಣಬಹುದು, ಆದರೆ ಇದರಲ್ಲಿರುವ ಮನೋವಿಜ್ಞಾನ ಮತ್ತು ಮಾನವ ಜೀವನದ ಅಂಶಗಳು ತುಂಬಾ ಆಳವಾದವು ಎಂದು ಯಶ್ ಹೇಳಿದರು. ‘ಟಾಕ್ಸಿಕ್’ ಸಿನಿಮಾ ಒಂದು ಡಾರ್ಕ್ ಅಥವಾ ಋಣಾತ್ಮಕ ಪಾತ್ರವನ್ನು ಬಹಳ ಭಿನ್ನ ರೀತಿಯಲ್ಲಿ ಪ್ರೆಸೆಂಟ್ ಮಾಡುವ ಸಿನಿಮಾ. ಕೆಲವು ಅದ್ಭುತವಾದ ತಂತ್ರಜ್ಞರು ಆ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ನನ್ನ ನಿರ್ದೇಶಕಿ ಗೀತು ಮೋಹನ್ದಾಸ್, ಗ್ಯಾಂಗ್ಸ್ಟರ್ ಸಿನಿಮಾವನ್ನು ಸಂಪೂರ್ಣ ಭಿನ್ನ ದೃಷ್ಟಿಕೋನದಿಂದ ಕಟ್ಟಿಕೊಟ್ಟಿದ್ದಾರೆ.