2026-07-23 09:08:39

WPL 2026 | ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಕನಸಿಗೆ ಈ ಎರಡು ತಂಡಗಳೇ ಆಸರೆ | Speed News Kannada

WPL 2026 | ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಕನಸಿಗೆ ಈ ಎರಡು ತಂಡಗಳೇ ಆಸರೆ | Speed News Kannada

ವಡೋದರಾ ಡಬ್ಲ್ಯುಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ನಿನ್ನೆಯ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 11 ರನ್ ಗಳಿಂದ ಸೋತಿದೆ. ಇದರೊಂದಿಗೆ ಮುಂಬೈಗೆ ಪ್ಲೇ ಆಫ್ ಗೇರಲು ಈ ಎರಡು ತಂಡಗಳೇ ಆಸರೆಯಾಗಬೇಕು. ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಈ ಬಾರಿ ಯಾಕೋ ಕಳೆಗುಂದಿದೆ.ಮೊದಲ ಪಂದ್ಯವನ್ನೇ ಸೋತಿದ್ದ ಮುಂಬೈ ತಂಡ ಈ ಬಾರಿ ಎಲ್ಲಾ ಪಂದ್ಯದಲ್ಲೂ ಪೇಲವ ಪ್ರದರ್ಶನ ನೀಡಿದೆ.
ಇದೀಗ 8 ಪಂದ್ಯಗಳಿಂದ ಕೇವಲ 3 ಪಂದ್ಯಗಳನ್ನು ಗೆದ್ದಿರುವ ಮುಂಬೈ 6 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ. ಆದರೆ ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಗೆ ಇನ್ನೊಂದು ಪಂದ್ಯ ಬಾಕಿಯಿದೆ. ಡೆಲ್ಲಿ 7 ಪಂದ್ಯಗಳಿಂದ 3 ಗೆಲುವು ಸಾಧಿಸಿದೆ. ಯುಪಿ 7 ಪಂದ್ಯಗಳಿಂದ 2 ಗೆಲುವು ಪಡೆದಿದೆ. ಈ ತಂಡಗಳ ನೆಟ್ ರನ್ ರೇಟ್ ನೆಗೆಟಿವ್ ಆಗಿದ್ದರೆ ಮುಂಬೈ ನೆಟ್ ರನ್ ರೇಟ್ ಪಾಸಿಟಿವ್ ಆಗಿದೆ. ಹೀಗಾಗಿ ಡೆಲ್ಲಿ-ಯುಪಿ ನಡುವಿನ ಪಂದ್ಯದಲ್ಲಿ ಡೆಲ್ಲಿ ಸೋತು ಯುಪಿ ದೊಡ್ಡ ಅಂತರದಿಂದ ಗೆಲುವು ಸಾಧಿಸಿದರೆ ಮುಂಬೈ ಪ್ಲೇ ಆಫ್ ಹಾದಿ ಸುಗಮವಾಗಲಿದೆ. ಹೀಗಾಗಿ ಈ ಎರಡು ತಂಡಗಳ ಫಲಿತಾಂಶದ ಮೇಲೆ ಮುಂಬೈ ಭವಿಷ್ಯ ನಿಂತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.